Advertisement

ಇಂದು ವಿಶ್ವ ತೆಂಗು ದಿನ: ತೆಂಗು ಕೃಷಿಯಲ್ಲಿ ಭಾರತ ನಂ. 3

04:44 PM Sep 02, 2020 | Karthik A |

ಮಣಿಪಾಲ: ಸೆಪ್ಟೆಂಬರ್‌ 2 – ವಿಶ್ವ ತೆಂಗು ದಿನವಾಗಿ ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ದಕ್ಷಿಣ ಏಷ್ಯಾ ಮತ್ತು ಮಧ್ಯಪೂರ್ವ ಏಷ್ಯನ್‌ ದೇಶಗಳಲ್ಲಿ ಜನ್ಮತಳೆದ ತೆಂಗು ಇವತ್ತು ಜಗತ್ತಿನ ಬಹುತೇಕ ದೇಶಗಳಲ್ಲಿ ಹರಡಿ ಹೋಗಿದ್ದು, ಜನಜೀವನದ ಭಾಗವಾಗಿದೆ. ಅನೇಕ ರೈತರ ಜೀವನಕ್ಕೆ ಆಧಾರವಾಗಿರುವ ಕಲ್ಪವೃಕ್ಷಕ್ಕೆ ವಿಶಿಷ್ಟ ಸ್ಥಾನಮಾನ ಇದೆ.

Advertisement

ವಿಶ್ವ ತೆಂಗಿನ ದಿನವು ತೆಂಗಿನಕಾಯಿಯ ಜಾಗೃತಿ ಮತ್ತು ಪ್ರಾಮುಖ್ಯತೆಯನ್ನು ಹರಡುವ ಗುರಿಯನ್ನು ಹೊಂದಿದೆ. ಈ ದಿನವನ್ನು ಏಷ್ಯನ್‌ ಪೆಸಿಫಿಕ್‌ ತೆಂಗಿನಕಾಯಿ ಸಮುದಾಯವು ಪ್ರಾರಂಭಿಸಿತು. ತೆಂಗಿನಕಾಯಿಯ ಪ್ರಾಮುಖ್ಯತೆಯನ್ನು ಹರಡುವುದು ಮತ್ತು ತೆಂಗಿನಕಾಯಿ ಕೈಗಾರಿಕೆಗಳ ಅಭಿವೃದ್ಧಿಯನ್ನು ಉತ್ತೇಜಿಸುವ ಮತ್ತು ಅವುಗಳಲ್ಲಿ ಹೂಡಿಕೆಗಳನ್ನು ಉತ್ತೇಜಿಸಲು ತೆಂಗಿನಕಾಯಿ ಉದ್ಯಮ ಹೇಗೆ ಮಾಧ್ಯಮವಾಗಬಹುದು ಎಂಬುದು ಇದರ ಉದ್ದೇಶವಾಗಿದೆ.

2009ರಲ್ಲಿ ಪ್ರಾರಂಭ
ವಿಶ್ವ ತೆಂಗಿನ ದಿನವನ್ನು 2009ರಲ್ಲಿ ಪ್ರಾರಂಭಿಸಲಾಯಿತು. ಯುನೈಟೆಡ್‌ ನೇಷ®Õ… ಎಕನಾಮಿಕ್‌ ಆ್ಯಂಡ್‌ ಸೋಶಿಯಲ್‌ ಕಮಿಷನ್‌ ಫಾರ್‌ ಏಷ್ಯಾ ಆ್ಯಂಡ್‌ ಪೆಸಿಫಿಕ್‌ (ಯುಎನ್‌-ಇಎಸ್‌ಸಿಎಪಿ) ಆಶ್ರಯದಲ್ಲಿ ಕಾರ್ಯನಿರ್ವಹಿಸುವ ಎಪಿಸಿಸಿ ರಚನೆಯ ದಿನವನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ಉದ್ದೇಶ
ಏಷ್ಯನ್‌ ಪೆಸಿಫಿಕ್‌ ಪ್ರದೇಶದ ಗರಿಷ್ಠ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ತೆಂಗಿನಕಾಯಿ ಅಭಿವೃದ್ಧಿ ಚಟುವಟಿಕೆಗಳನ್ನು ಉತ್ತೇಜಿಸಲು, ಸಂಘಟಿಸಲು ಮತ್ತು ಸಮನ್ವಯಗೊಳಿಸುವ ಉದ್ದೇಶ ಹೊಂದಿದೆ.

ಆಚರಣೆಯ ಹಿಂದಿನ ಕಾರಣ ?
ಏಷ್ಯನ್‌ ಪೆಸಿಫಿಕ್‌ ತೆಂಗಿನಕಾಯಿ ಸಮುದಾಯ (ಎಪಿಸಿಸಿ) ರಚನೆಯ ದಿನವನ್ನು ಸ್ಮರಿಸಲು ಪ್ರತಿ ವರ್ಷ ಸೆಪ್ಟೆಂಬರ್‌ 2 ಅನ್ನು ವಿಶ್ವ ತೆಂಗಿನ ದಿನವಾಗಿ ಆಚರಿಸಲಾಗುತ್ತದೆ. ಎಪಿಸಿಸಿ 18 ಸದಸ್ಯ ರಾಷ್ಟ್ರಗಳ ಅಂತರ್‌-ಸರಕಾರಿ ಸಂಸ್ಥೆಯಾಗಿದ್ದು, ಎಪಿಸಿಸಿಯ ಸ್ಥಾಪಕ ಸದಸ್ಯರಲ್ಲಿ ಭಾರತ ಕೂಡ ಒಂದಾಗಿದೆ.

Advertisement

ತೆಂಗಿನಕಾಯಿಗಳ ಪ್ರಾಮುಖ್ಯತೆ ಮತ್ತು ಉಪಯೋಗಗಳನ್ನು ಎತ್ತಿ ಹಿಡಿಯಲು ವಿಶ್ವ ತೆಂಗಿನ ದಿನವನ್ನು ಆಚರಿಸುತ್ತಾ ಬಂದಿದ್ದು, ಈ ಏಷ್ಯನ್‌ ಪೆಸಿಫಿಕ್‌ ತೆಂಗಿನಕಾಯಿ ಸಮುದಾಯವು ಅಂತರ್‌ ಸರಕಾರಿ ಸಂಸ್ಥೆಯಾಗಿದ್ದು, ಇದರ ಪ್ರಧಾನ ಕಚೇರಿ ಇಂಡೋನೇಷ್ಯಾದ ಜಕಾರ್ತಾದಲ್ಲಿದೆ.
ಅಂತಾರಾಷ್ಟ್ರೀಯ ತೆಂಗಿನಕಾಯಿ ಸಮುದಾಯ (ವಿಶ್ವದ ತೆಂಗಿನಕಾಯಿ ಉತ್ಪಾದಿಸುವ ದೇಶಗಳ ಸಂಘಟನೆ) ಘೋಷಿಸಿದಂತೆ ಈ ವರ್ಷ ವಿಶ್ವ ತೆಂಗಿನ ದಿನಾಚರಣೆಯ ವಿಷಯವು ಜಗತ್ತನ್ನು ಉಳಿಸಲು ತೆಂಗಿನಕಾಯಿ ಉದ್ದಿಮೆಯಲ್ಲಿ ಹೂಡಿಕೆ ಮಾಡಿ’ ಎಂಬ ಧ್ಯೇಯ ಹೊಂದಿದೆ.

90 ದೇಶಗಳಲ್ಲಿ ತನ್ನ ಅಧಿಪತ್ಯ
ತೆಂಗಿನಕಾಯಿಯನ್ನು ವಿಶ್ವಾದ್ಯಂತ 90ಕ್ಕೂ ಹೆಚ್ಚು ದೇಶಗಳಲ್ಲಿ ಬೆಳೆಯಲಾಗುತ್ತದೆ. ತೆಂಗಿನಕಾಯಿಯ ವಿಶ್ವ ಉತ್ಪಾದನೆಯು ವಾರ್ಷಿಕವಾಗಿ ಸುಮಾರು 55 ದಶಲಕ್ಷ ಟನ್‌ಗಳಷ್ಟಿದೆ. ಇಂಡೋನೇಷ್ಯಾ ಮತ್ತು ಫಿಲಿಪೈನ್‌ ವಿಶ್ವದ ತೆಂಗಿನ ಹಣ್ಣುಗಳನ್ನು ಉತ್ಪಾದಿಸುವ ಪ್ರಮುಖ ರಾಷ್ಟ್ರಗಳಾಗಿವೆ. ಇಂಡೋನೇಷ್ಯಾದಲ್ಲಿ 183,000,000 ಟನ್‌, ಫಿಲಿಪೈನ್ಸ್‌ ನಲ್ಲಿ 153,532,000 ಟನ್‌, ಭಾರತದಲ್ಲಿ 119,300,000 ಟನ್‌ ಬೆಳಯಲಾಗುತ್ತದೆ.

ಇನ್ನು ಇಂಡೋನೇಷ್ಯಾ ವಿಶ್ವದ ಅತಿದೊಡ್ಡ ತೆಂಗಿನಕಾಯಿ ರಫ್ತುದಾರನಾಗಿದ್ದು, ರಫ್ತು ಪ್ರಮಾಣ 290 ಸಾವಿರ ಟನYಳಷ್ಟಿದೆ. ಥೈಲ್ಯಾಂಡ್‌ (70 ಸಾವಿರ ಟನ್‌) ಶ್ರೇಯಾಂಕದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಅನಂತರ ವಿಯೆಟ್ನಾಂ 57 ಸಾವಿರ ಟನ್‌. ಈ ಎಲ್ಲ ದೇಶಗಳು ಒಟ್ಟಾಗಿ ಒಟ್ಟು ರಫ್ತಿನ ಶೇ.23ರಷ್ಟು ಪಾಲನ್ನು ಹೊಂದಿವೆ.

ಇನ್ನು ಭಾರತ 11 ಸಾವಿರ ಟನ್‌ ರಫ್ತು ಮಾಡುತ್ತದೆ.2018ರಲ್ಲಿ ಥೈಲ್ಯಾಂಡ್‌ 210 ಸಾವಿರ ಟನ್‌ ಮತ್ತು ಮಲೇಷ್ಯಾ 199 ಸಾವಿರ ಟನ್‌ ತೆಂಗಿನಕಾಯಿಯನ್ನು ಆಮದು ಮಾಡಿಕೊಂಡಿದೆ. ಒಟ್ಟು ಆಮದುಗಳಲ್ಲಿ ಕ್ರಮವಾಗಿ ಶೇ.31 ಮತ್ತು ಶೇ.30.

ಭಾರತಕ್ಕೆ 3ನೇ ಸ್ಥಾನ
ವಿಶ್ವದ ಪ್ರಮುಖ ತೆಂಗಿನಕಾಯಿ ಬೆಳೆಯುವ ದೇಶಗಳಲ್ಲಿ ಭಾರತ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ವಾರ್ಷಿಕ ತೆಂಗಿನ ಉತ್ಪಾದನೆಯು 20.82 ಲಕ್ಷ ಹೆಕ್ಟೇರ್‌ಗೆ 2395 ಕೋಟಿ ತೆಂಗಿನಕಾಯಿ ಬೆಳೆಯಲಾಗುತ್ತದೆ ಮತ್ತು ಒಂದು ಹೆಕ್ಟೇರ್‌ಗೆ ಉತ್ಪಾದಕತೆ 11,505 ತೆಂಗಿನಕಾಯಿ ಆಗಿದೆ. ತೆಂಗಿನಕಾಯಿ ದೇಶದ ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿಡಿಪಿ) ಸುಮಾರು 27,900 ಕೋಟಿ ರೂ.ಕೊಡುಗೆ ನೀಡಿದೆ.

ಅಗ್ರ 5 ರಾಜ್ಯಗಳು (ಸಿಡಿಬಿಯ 2016-2017ರ ಕೃಷಿ ಅಂಕಿಅಂಶಗಳ ಪ್ರಕಾರ) ಮಿಲಿಯನ್‌ಗಳಲ್ಲಿ
ಕೇರಳ             7,448.65
ಕರ್ನಾಟಕ       6,773.05
ತಮಿಳುನಾಡು  6,570.63
ಆಂಧ್ರಪ್ರದೇಶ  1,377.53
ಒಡಿಶಾ           341.68

 

Advertisement

Udayavani is now on Telegram. Click here to join our channel and stay updated with the latest news.

Next