Advertisement

Desi Swara: ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ

01:01 PM Jun 29, 2024 | Team Udayavani |

ದೋಹಾ:ಕತಾರ್‌ನಲ್ಲಿರುವ ಏಷ್ಯನ್‌ ಕ್ರಿಕೆಟ್‌ ಆಟದ ಮೈದಾನದಲ್ಲಿ ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ 10ನೇ ಆವೃತ್ತಿಯನ್ನು ಕತಾರ್‌ನ ಭಾರತೀಯ ರಾಜದೂತಾವಾಸದ ನೇತೃತ್ವದಲ್ಲಿ ಭಾರತೀಯ ಕ್ರೀಡಾ ಕೇಂದ್ರದ ಸಹಯೋಗದೊಂದಿಗೆ ನಡೆಸಲಾಯಿತು.

Advertisement

ಕತಾರ್‌ನ ಭಾರತೀಯ ಸಮುದಾಯಗಳು, ಭಾರತೀಯ ಸಾಂಸ್ಕೃತಿಕ ಕೇಂದ್ರ ಐಸಿಸಿ ಭಾರತೀಯ ಸಮುದಾಯ ಹಿತೈಷಿ ವೇದಿಕೆ ಐಸಿಬಿಎಫ್‌ ಹಾಗೂ ಭಾರತೀಯ ವ್ಯಾಪಾರಿಗಳ ಹಾಗೂ ವೃತ್ತಿಪರ ಸಮಿತಿಗಳ ಐಬಿಪಿಸಿ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ ಚಿತ್ರ ಪ್ರದರ್ಶಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

ಭಾರತೀಯ ರಾಯಭಾರಿಗಳಾದ ವಿಫುಲ್‌ ಅವರು ಮಾತನಾಡಿ, ಸ್ವಯಂ ಹಾಗೂ ಸಮಾಜಕ್ಕೆ ಯೋಗ ಎಂಬುದರ ಬಗ್ಗೆ ಒತ್ತು ನೀಡಿ ಮಾನವನ ಸಂಪೂರ್ಣ ಪ್ರಗತಿಗೆ ಭಾರತದ ಪುರಾತನ ಸಾಂಪ್ರದಾಯದ ಯೋಗವು ಮಹತ್ತರ ಕೊಡುಗೆ ನೀಡುತ್ತದೆ. ನಿರಂತರವಾಗಿ ಯೋಗಾಭ್ಯಾಸ ಹಾಗೂ ಧ್ಯಾನ ಪ್ರಾಣಾಯಾಮಗಳನ್ನು ಮಾಡುವುದರ ಮೂಲಕ ಮನುಷ್ಯನ ಮನಸ್ಸು ಹಾಗೂ ಶರೀರಕ್ಕೆ ಸಕಾರಾತ್ಮಕ ಪರಿವರ್ತನೆ ಆಗುತ್ತದೆ ಹಾಗೂ ಪ್ರಕೃತಿಯ ಸಮೀಪ ಕರೆದುಕೊಂಡು ಹೋಗುವುದಲ್ಲದೇ ಸಮಾಜದಲ್ಲಿ ಸೌಹಾರ್ದತೆಯನ್ನು ಪಸರಿಸುವಲ್ಲಿ ಕಾರಣವಾಗುತ್ತದೆ ಎಂದು ಹೇಳಿದರು.

Advertisement

ಯೋಗಾಭ್ಯಾಸ ಕಾರ್ಯಕ್ರಮದ ಮುಖ್ಯ ಅಂಶವೆಂದರೆ ಆಗಮಿಸಿದ್ದ 2,000ಕ್ಕೂ ಹೆಚ್ಚು ಯೋಗ ಪಟುಗಳು ಹಾಗೂ ಆಸಕ್ತರು, ಇವರಲ್ಲಿ ಮಕ್ಕಳು, ಯುವಜನರು ಹಾಗೂ ಮಹಿಳೆಯರು ಸೇರಿ ಸಮಾಜದ ವಿವಿಧ ಭಾಗದ ಜನರು ಇದ್ದರು. ಆಗಮಿಸಿದ್ದ ಎಲ್ಲರೂ ಒಂದೇ ಮೂಲ ಮಾರ್ಗದರ್ಶನದ ಆಧಾರದ ಮೇಲೆ ಯೋಗಾಭ್ಯಾಸವನ್ನು ಮಾಡಿದ್ದು ವಿಶೇಷ. ಹಿರಿಯರು ಹಾಗೂ ಕಿರಿಯರು ಸೇರಿ ಉತ್ಸಾಹ ಹಾಗೂ ಉಲ್ಲಾಸದಿಂದ ಯೋಗಾಭ್ಯಾಸವನ್ನು ಮಾಡಿದರು. ಕಾರ್ಯಕ್ರಮಕ್ಕೆ ಕಾರಣಿಕರ್ತರಾದ ಭಾರತೀಯ ಕ್ರೀಡಾ ಕೇಂದ್ರ, ಭಾರತೀಯ ಸಾಂಸ್ಕೃತಿಕ ಕೇಂದ್ರ, ಭಾರತೀಯ ಸಮುದಾಯ ಹಿತೈಷಿ ವೇದಿಕೆ ಮತ್ತು ಭಾರತೀಯ ವ್ಯಾಪಾರ ಹಾಗೂ ವೃತ್ತಿಪರ ಸಮಿತಿಯ ಅಧ್ಯಕ್ಷರುಗಳನ್ನು ಸಮ್ಮಾನಿಸಿ ಕಾರ್ಯಕ್ರಮವನ್ನು ಪೂರ್ಣಗೊಳಿಸಲಾಯಿತು.

ಯೋಗಾಭ್ಯಾಸದ ಮಹತ್ತರ ಕಾರ್ಯಕ್ರಮದಲ್ಲಿ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು 20 ಗುಂಪುಗಳನ್ನಾಗಿ ವಿಂಗಡಿಸಿ ಕಾರ್ಯಕರ್ತರನ್ನು ಒಳಗೊಂಡು ಆಗಮಿಸಿದ್ದ 2,000ಕ್ಕೂ ಹೆಚ್ಚು ಜನರಿಗೆ ಯೋಗಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಸ್ಥಳದಲ್ಲಿ ಕೇಳಲಾಯಿತು ಹಾಗೂ ಕಿರು ಉಡುಗೊರೆಗಳನ್ನು ವಿತರಿಸಲಾಯಿತು. ಬೈಂದೂರು ಮೂಲದ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಟಾಗಿಲು, ಹಾಗೂ ಸಾವಿರಾರು ಮಂದಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next