ವೇಟ್‌ಲಿಫ್ಟರ್ ಸಂಜಿತಾ ಚಾನು ಪ್ರಕರಣಕ್ಕೆ ಈಗ ಹೊಸದೊಂದು ತಿರುವು ಸಿಕ್ಕಿದೆ.
Advertisement
ಐಡಬ್ಲ್ಯೂಎಫ್ (ಅಂತಾರಾಷ್ಟ್ರೀಯ ವೇಟ್ ಲಿಫ್ಟಿಂಗ್ ಒಕ್ಕೂಟ) ಅಧಿಕಾರಿ ತಪ್ಪಿನಿಂದಾಗಿ ಸಂಜಿತಾ ಚಾನು ತನ್ನದಲ್ಲದ ತಪ್ಪಿಗೆ ಶಿಕ್ಷೆಅನುಭವಿಸಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ಈ ಬೆನ್ನಲ್ಲೇ ಸಂಜಿತಾ ಚಾನು ಪ್ರಕರಣದಲ್ಲಿ ನನ್ನನ್ನು ಅನ್ಯಾಯವಾಗಿ ಸಿಲುಕಿಸಲಾಗಿದ್ದು ಹೆಚ್ಚಿನ ತನಿಖೆ ನಡೆಸಿ ಸತ್ಯಾಸತ್ಯತೆ ಬಯಲಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ. ಸಂಜಿತಾ ಅವರನ್ನು ಪರೀಕ್ಷಿಸಿದ ಮಾದರಿಯಲ್ಲಿ ವ್ಯತ್ಯಾಸವಾಗಿದ್ದು, ತೆಗೆದುಕೊಂಡಿದ್ದು ಒಂದು ಮಾದರಿ, ಬಳಿಕ ಫಲಿತಾಂಶ ಪ್ರಕಟಿಸಿದ್ದು ಮತ್ತೂಂದು ಮಾದರಿಯಿಂದ ಎನ್ನಲಾಗಿದೆ. ಈ ಬಗ್ಗೆ ತನಿಖೆ ಆರಂಭವಾಗಿದೆ. ಸಂಜಿತಾರದ್ದು ತಪ್ಪಲ್ಲ ಎನ್ನುವುದು ಸಾಬೀತಾದರೆ ಆರೋಪದಿಂದ ಹೊರಬರಲಿದ್ದಾರೆ.