Advertisement

ಗಂಧದ ಕುಡಿ/ಚಂದನ್‌ವನ್‌ ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

12:25 PM Dec 03, 2018 | |

ಮುಂಬಯಿ: ಮುಂಬಯಿಯ ಮೂನ್‌ವೈಟ್‌ ಫಿಲಂಸ್‌ ವತಿಯಿಂದ ನ. 24 ಮತ್ತು ನ. 25ರಂದು ನಗರದಲ್ಲಿ  ಎರಡು ದಿನಗಳ ಕಾಲ ನಡೆದ ಮೂನ್‌ವೈಟ್‌ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗಂಧದ ಕುಡಿ/ಚಂದನ್‌ವನ್‌ ಕನ್ನಡ ಮತ್ತು ಮರಾಠಿ ಚಿತ್ರಕ್ಕೆ ಹಲವಾರು ಪ್ರಶಸ್ತಿಗಳು ಲಭಿಸಿವೆ.

Advertisement

ಭಾರತದ ವಿವಿಧ ರಾಜ್ಯಗಳ ವಿವಿಧ ಭಾಷೆಗಳ ಹಾಗೂ ವಿದೇಶಗಳ ಸಾವಿರಕ್ಕೂ ಅಧಿಕ ಚಲನಚಿತ್ರಗಳು ಈ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದು, 50 ವಿಭಾಗ ಗಳಲ್ಲಿ ವಿವಿಧ ಪ್ರಶಸ್ತಿಗಳನ್ನು ನೀಡಲಾಗಿದೆ.

ಅವುಗಳಲ್ಲಿ ಗಂಧದ ಕುಡಿ/ಚಂದನ್‌ವನ್‌ ಚಲನ ಚಿತ್ರವು ಅತ್ಯುತ್ತಮ ಚಲನಚಿತ್ರ, ಚಿತ್ರದ ನಿರ್ದೇಶನಕ್ಕಾಗಿ ಸಂತೋಷ್‌ ಕುಮಾರ್‌ ಕಟೀಲು ಅವರಿಗೆ ಅತ್ಯುತ್ತಮ ನಿರ್ದೇಶಕ ಹಾಗೂ ಚಿತ್ರದಲ್ಲಿನ ನಟನೆಗಾಗಿ ಕನ್ನಡ ಚಿತ್ರರಂಗದ ಹಿರಿಯ ನಟ ರಮೇಶ್‌ ಭಟ್‌ ಹಾಗೂ ಕಿರುತೆರೆ ನಟಿ ಜ್ಯೋತಿ ರೈ ಅವರಿಗೆ ಅತ್ಯುತ್ತಮ ನಟ ಮತ್ತು ಅತ್ಯುತ್ತಮ ನಟಿ ಪ್ರಶಸ್ತಿಗಳು ಲಭಿಸಿದೆ.

ಅಲ್ಲದೆ ಚಿತ್ರದಲ್ಲಿ ನಟಿಸಿದ ಬಾಲನಟರಾದ ಬೇಬಿ ನಿಧಿ ಸಂಜೀವ ಶೆಟ್ಟಿ, ಬೇಬಿ ಕೀಷಾ, ಮಾ| ವಿಘ್ನೇಶ್‌, ಮಾ| ಶ್ರೀಶ  ಶೆಟ್ಟಿ, ಮಾ| ಶ್ರೇಯಸ್‌ ಶೆಟ್ಟಿ, ಬೇಬಿ ಆ್ಯಶ್ಲಿನ್‌ ಡಿಸೋಜಾ, ಬೇಬಿ ಪ್ರಣತಿ ಅವರು ವಿಶೇಷ ಪ್ರಶಸ್ತಿಯನ್ನು ಪಡೆದಿದ್ದಾರೆ. 

ಹಲವು ಪ್ರಶಸ್ತಿಗಳೊಂದಿಗೆ ಈ ಚಲನಚಿತ್ರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು. ಚಿತ್ರವು ಅತ್ಯುತ್ತಮ ಮೂಲಕಥೆ ಹಾಗೂ ಅತ್ಯುತ್ತಮ ಕಥಾ ಲೇಖಕ ವಿಭಾಗದಲ್ಲಿ ಸಂತೋಷ್‌ ಶೆಟ್ಟಿ ಕಟೀಲು, ಅತ್ಯುತ್ತಮ ಸಂಕಲನ ವಿಭಾಗದಲ್ಲಿ ರವಿರಾಜ್‌ ಗಾಣಿಗ, ಅತ್ಯುತ್ತಮ ಹಿನ್ನೆಲೆ ಸಂಗೀತ ವಿಭಾಗದಲ್ಲಿ ಪ್ರಸಾದ್‌ ಕೆ. ಶೆಟ್ಟಿ, ಅತ್ತುತ್ತಮ ಛಾಯಾಗ್ರಹಣ ವಿಭಾಗದಲ್ಲಿ ಸಚಿನ್‌ ಎಸ್‌. ಶೆಟ್ಟಿ ಕಾಪು, ಅತ್ಯುತ್ತಮ ದೃಶ್ಯ ಸಂಯೋಜನೆ ವಿಭಾಗದಲ್ಲಿ ಇಮೇಜಿನೇಷನ್‌ ಮೂವೀಸ್‌ ಮಂಗಳೂರು ನಾಮ ನಿರ್ದೇಶನಗೊಂಡಿದೆ.

Advertisement

ನ. 25 ರಂದು ಮಲಾಡ್‌ನ‌ ಆಸ್ಪೀ ಆಡಿಟೋರಿಯಂನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿತ್ರದ ನಿರ್ಮಾಪಕ ಸತ್ಯೇಂದ್ರ ಪೈ, ಸಹ ನಿರ್ದೇಶಕಿ ಪ್ರೀತಾ ಮಿನೇಜಸ್‌, ಸಂಗೀತ ನಿರ್ದೇಶಕ ಪ್ರಸಾದ್‌ ಕೆ. ಶೆಟ್ಟಿ, ಕನ್ನಡ ಚಿತ್ರರಂಗದ ಹಿರಿಯ ನಟ ರಮೇಶ್‌ ಭಟ್‌, ಬಾಲನಟಿ ನಿಧಿ ಸಂಜೀವ ಶೆಟ್ಟಿ, ನಗರದ ರಂಗಕರ್ಮಿ ಅರವಿಂದ ಶೆಟ್ಟಿ ಕೊಜಕ್ಕೊಳ್ಳಿ ಅವರು ಪಾಲ್ಗೊಂಡು ಪ್ರಶಸ್ತಿ ಸ್ವೀಕರಿಸಿದರು.

ಸಮಾರಂಭದಲ್ಲಿ ಪದ್ಮಶ್ರೀ ಭಜನ್‌ ಸಾಮ್ರಾಟ್‌ ಅನೂಪ್‌ ಜಲೋಟ್‌, ಬ್ರೈಟ್‌ ಔಟ್‌ಡೋರ್‌, ಮೀಡಿಯಾ ಮುಖ್ಯಸ್ಥ ಯೋಗೇಶ್‌ ಲಕಾನಿ, ಪಾಪು ಮಾಲು, ರಾಹಾತ್‌ ಜಿಯಾ, ಆರ್‌. ಡಿ. ತ್ಯಾಗಿ, ಇಂಡಿಯನ್‌ ಐಡಾಲ್‌ ಪ್ರಸಿದ್ಧಿಯ ರವಿ ತ್ರಿಪಾಠಿ, ಮೂನ್‌ವೈಟ್‌ ಸ್ಥಾಪಕ ದೇರ್ವಾಶಿಲ್‌ ಸರ್‌ಗಮ್‌ ಅವರು ಉಪಸ್ಥಿತರಿದ್ದರು. ಪಂಡಿತ್‌ ಸುಹಾಶಿತ್‌ ರಾಜ್‌, ಆರ್‌. ಜೆ. ರಾಹತ್‌ ಜಫ್ರೀ ತೀರ್ಪುಗಾರರಾಗಿ ಸಹಕರಿಸಿದರು.

ಗಂಧದ ಕುಡಿ/ಚಂದನ್‌ವನ್‌ ಚಿತ್ರವು ಮನೋರಂಜನೆಯ ಜೊತೆಗೆ ಸಂಪೂರ್ಣ ಹಾಸ್ಯ ಹಾಗೂ ವಿಭಿನ್ನ ಪಾತ್ರಗಳೊಂದಿಗೆ ಪರಿಸರ ಸಂರಕ್ಷಣೆಯ ಕಾಳಜಿಯನ್ನು ಜಾಗೃತಗೊಳಿಸುಳಿಸುವ ಪ್ರಯತ್ನವನ್ನು ಚಿತ್ರರಂಗದಲ್ಲಿ ಮೊಟ್ಟಮೊದಲ ಬಾರಿಗೆ ವಿಭಿನ್ನ ಶೈಲಿಯಲ್ಲಿ ನಿರ್ದೇಶಿಸಲಾಗಿದ್ದು, ಶೀಘ್ರದಲ್ಲಿ ಕನ್ನಡ ಮತ್ತು ಮರಾಠಿ ಭಾಷೆಗಳಲ್ಲಿ ತೆರೆಕಾಣಲಿದೆ.

Advertisement

Udayavani is now on Telegram. Click here to join our channel and stay updated with the latest news.

Next