Advertisement

ಅಂತಾರಾಷ್ಟ್ರೀಯ ಕ್ರೀಡಾಪಟು ಕಾಶಿನಾಥ ನಾಯ್ಕ ಅವರಿಗೆ ಅಪಮಾನ

01:34 PM Nov 29, 2021 | Team Udayavani |

ಶಿರಸಿ: ಅಂತಾರಾಷ್ಟ್ರೀಯ ಕ್ರೀಡಾಪಟು ಮತ್ತು ರಾಷ್ಟ್ರಮಟ್ಟದ ತರಬೇತುದಾರ, ಸೈನಿಕ ಕಾಶಿನಾಥ ನಾಯ್ಕ ಅವರಿಗೆ ಜಿಲ್ಲಾ ಯೋಜನಾ ಸೇವಾ ಮತ್ತು ಕ್ರೀಡಾ ಇಲಾಖೆ ಮತ್ತು ಶಿರಸಿ ಶೈಕ್ಷಣಿಕ ಶಿಕ್ಷಣ ಇಲಾಖೆ ಅಪಮಾನ ಮಾಡಿರುವ ವರದಿ ತಡವಾಗಿ ಬೆಳಕಿಗೆ ಬಂದಿದೆ‌.

Advertisement

ಕಾಶಿನಾಥ ನಾಯ್ಕ ಅವರ ವಿಶೇಷ ಆಸಕ್ತಿಯಿಂದ ಶಿರಸಿಯ ಶ್ರೀ ಮಾರಿಕಾಂಬ ಜಿಲ್ಲಾ ಕ್ರೀಡಾಂಗಣದಲ್ಲಿ ನ.25 ರಂದು ಒಂದು ದಿನದ ದೈಹಿಕ ಶಿಕ್ಷಕರಿಗೆ ಕ್ರೀಡಾ ತರಬೇತಿ ಆಯೋಜಿಸಲಾಗಿತ್ತು. ಕ್ರೀಡಾ ತರಭೇತಿಯು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರವಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಶಿರಸಿ ಶೈಕ್ಷಣಿಕ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ ಸಹಯೋಗದಿಂದ ಜರುಗಿಸಲಾಗಿತ್ತು.

ಜಿಲ್ಲೆಯಲ್ಲಿ ಪ್ರತಿಭಾವಂತ ಯುವ ಕ್ರೀಡಾ ಪಟುವಿಗೆ ಉತ್ತೇಜಿಸುವ ಹಾಗೂ ಹೊಸ ಕ್ರೀಡಾ ತಂತ್ರಜ್ಞಾನ ದೈಹಿಕ ಶಿಕ್ಷಕರಿಗೆ ನೀಡುವ ಉದ್ದೇಶದಿಂದ ಪ್ರಾಯೋಗಿಕ ಹಾಗೂ ಸಿದ್ದಾಂತ ಪದ್ದತಿಯಲ್ಲಿ ಪ್ರಥಮ ಹಂತವಾಗಿ ಶಿರಸಿ ಶೈಕ್ಷಣಿಕ ಜಿಲ್ಲೆಯ ದೈಹಿಕ ಶಿಕ್ಷಕರಿಗೆ ಕ್ರೀಡಾ ತರಬೇತಿಯನ್ನು ಸ್ವ ಇಚ್ಛಾಶಕ್ತಿಯಿಂದ, ಉಚಿತವಾಗಿ ಕಾಶಿನಾಥ ಅವರ ಮುತುವರ್ಜಿಯಲ್ಲಿ ತರಬೇತಿ ಶಿಬಿರ ಸಂಘಟಿಸಲ್ಪಟ್ಟಿತ್ತು.

ಇದನ್ನೂ ಓದಿ:ಪ್ರಧಾನಿ ಮೋದಿಗೆ ‘ಜನಸೇವೆ’ಯ ಬಗ್ಗೆ ಈಗ ಅರಿವಾಗಿದೆ: ಸಿದ್ದರಾಮಯ್ಯ ವ್ಯಂಗ್ಯ

ಆದರೆ, ಯುವಜನ ಸೇವಾ ಇಲಾಖೆ ಹಾಗೂ ಶೈಕ್ಷಣಿಕ ಇಲಾಖೆಯು ದೈಹಿಕ ಶಿಕ್ಷಣ ಶಿಕ್ಷಕರಿಗೆ ಕ್ರೀಡಾ ತರಭೇತಿ ಹಾಜರಾದ ದೈಹಿಕ ಶಿಕ್ಷಕರಿಗೆ ನೀಡಿದ ಪ್ರಮಾಣ ಪತ್ರದಲ್ಲಿ ಔಚಿತ್ಯಕ್ಕೂ ತರಭೇತಿ ನೀಡಿದ ಕಾಶಿನಾಥ ನಾಯ್ಕ ಅವರ ಹೆಸರನ್ನು ಉಲ್ಲೇಖಿಸಿದೇ ಹಾಗೂ ಪ್ರಮಾಣ ಪತ್ರದಲ್ಲಿ ಸಹಿಯನ್ನು ದಾಖಲಿಸದೇ ಪ್ರಮಾಣ ಪತ್ರ ನೀಡಿರುವುದು ಪ್ರಮಾದಕ್ಕೆ ಕಾರಣವಾಗಿದೆ.

Advertisement

ಅಧಿಕಾರಿಗಳಿಂದ ಕಾಶಿನಾಥ ನಾಯ್ಕ ಅವರಿಗೆ ಉಂಟಾಗಿರುವ ಅವಮಾನಕ್ಕೆ ಸಾರ್ವಜನಿಕವಾಗಿ ಕ್ರೀಡಾಸಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ ಎಂದು ಸ್ಪಂದನಾ ಸ್ಪೋಟ್ಸ್ ಅಕಾಡೆಮಿ ಅಧ್ಯಕ್ಷ ಹಾಗೂ ಹಿರಿಯ ವಕೀಲ ಏ ರವೀಂದ್ರ ನಾಯ್ಕ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next