Advertisement
ಪ್ರತಿ ನಿತ್ಯ ವಾಹನಗಳು ಹರಸಾಹಸಪಡುತ್ತ ಸಂಚರಿಸಿದರೆ, ಪಾದಚಾರಿಗಳು ಕಿತ್ತುಹೋದ ಇಂಟರ್ ಲಾಕ್‌ನ ಕಲ್ಲುಗಳನ್ನು ಎಡವಿಕೊಂಡು ತೆರಳಬೇಕಾಗಿದ್ದು, ನಗರಾಡಳಿತಕ್ಕೆ ಹಿಡಿಶಾಪ ಹಾಕಿಕೊಂಡೇ ಮುಂದುವರಿಯುತ್ತಾರೆ.
Related Articles
ಒಂದೆಡೆ ಕೆವಿಜಿ ಕ್ಯಾಂಪಸ್‌ನ ಮೆಡಿಕಲ್ ಕಾಲೇಜು, ಡೆಂಟಲ್ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್, ನರ್ಸಿಂಗ್ ಕಾಲೇಜಿಗೆ ಸಂಪರ್ಕ ಕಲ್ಪಿಸುತ್ತದೆ. ಮತ್ತೂಂದೆಡೆ ಜೆಎಂಎಫ್‌ಸಿ ನ್ಯಾಯಾಲಯ, ಶಿಕ್ಷಣ ಕಚೇರಿ, ಅಲ್ಲದೆ ಇನ್ನೆರಡು ರಸ್ತೆಗಳು ತಾಲೂಕು ಕಚೇರಿ, ಮೆಸ್ಕಾಂ, ಕೃಷಿ ಇಲಾಖೆ, ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ, ಗ್ರಂಥಾಲಯ, ಕಂದಾಯ ನಿರೀಕ್ಷಕರ ಕಚೇರಿ, ತಾಲೂಕು ಚಾಯತ್‌ಗಳನ್ನು ಸಂಪರ್ಕಿಸುತ್ತದೆ.
Advertisement
ಇದೇ ರಸ್ತೆಯಲ್ಲಿ ಸಂಚರಿಸಿದರೆ ಇಲ್ಲಿಯ ಭಸ್ಮಡ್ಕ, ಕುರುಂಜಿಗುಡ್ಡೆ ಮೊದಲಾದ ಪ್ರದೇಶಗಳಿಗೆ ಸಂಪರ್ಕವಿದೆ. ಇಲ್ಲಿ ಸಾವಿರಾರು ಮನೆಗಳಿವೆ. ಅಲ್ಲದೆ ತುರ್ತು ಚಿಕಿತ್ಸೆಗೆಂದು ಇಲ್ಲಿನ ವೈದ್ಯಕೀಯ ಕಾಲೇಜಿಗೆ ರೋಗಿಗಳನ್ನು ಕರೆತರುವ ಸಂದರ್ಭದಲ್ಲೂ ಸಮಸ್ಯೆಯುಂಟಾಗುತ್ತಿದೆ.
ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿರುವ ಕಾರಣ ಸಾಧಾರಣ ಸಾಮರ್ಥ್ಯದ ಇಂಟರ್ ಲಾಕ್ ಅಳವಡಿಸಿದರೆ ಅದು ವ್ಯರ್ಥವಾಗಬಹುದು. ಆದ್ದರಿಂದ ಇಲ್ಲಿಗೆ ಶಾಶ್ವತ ವ್ಯವಸ್ಥೆಗಾಗಿ ಕಾಂಕ್ರೀಟ್ ಕಾಮಗಾರಿ ನಡೆಸುವುದೇ ಸೂಕ್ತವೆನಿಸಿದ್ದು, ಶೀಘ್ರ ಈ ಸಮಸ್ಯೆಯನ್ನು ಪರಿಹರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಶಾಶ್ವತ ವ್ಯವಸ್ಥೆ ಅಗತ್ಯಶಾಶ್ವತ ವ್ಯವಸ್ಥೆಗಾಗಿ ಕಾಂಕ್ರೀಟ್ ಕಾಮಗಾರಿ ಸೂಕ್ತವಾಗಿದ್ದು, ಅಂದಾಜು ರೂ. 10 ಲಕ್ಷಕ್ಕೂ ಅಧಿಕ ಮೊತ್ತದ ಅಗತ್ಯವಿದೆ. ಆದರೆ ಇಷ್ಟೊಂದು ಮೊತ್ತ ನಗರ ಪಂಚಾಯತ್‌ನಲ್ಲಿ ಇಲ್ಲದ ಕಾರಣ ಅಸಾಧ್ಯವಾಗಿದೆ. ಕೆವಿಜಿ ಎಂಜಿನಿಯರಿಂಗ್ ಕಾಲೇಜಿನವರು ಅಂದಾಜುಪಟ್ಟಿ ತಯಾರಿಸಿ ಮನವಿ ಮಾಡಿದ್ದರು. ನಾನೂ ನ.ಪಂ.ಗೆ ಹಲವಾರು ಬಾರಿ ಮನವಿ ಮಾಡಿದ್ದೆ.
– ಕಿರಣ್ ಕುರುಂಜಿ,
ನ. ಪಂ. ವಾರ್ಡ್ ಸದಸ್ಯ ಕಿತ್ತುಹೋದ ಇಂಟರ್‌ಲಾಕ್
ಇಲ್ಲಿನ ರಸ್ತೆಗೆ ಹಾಕಿರುವ ಇಂಟರ್‌ಲಾಕ್ ಕಿತ್ತುಹೋಗಿದೆ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಸಹಿತ ಪಾದಚಾರಿಗಳಿಗೆ ತೊಡಕಾಗುತ್ತಿದೆ. ಇದರಿಂದಾಗಿ ಇಲ್ಲಿ ವಾಹನ ಅಪಘಾತಗಳು ಸಂಭವಿಸಿವೆ. ಇಲ್ಲಿಯ ಸಮಸ್ಯೆಯ ಬಗ್ಗೆ ನಗರ ಪಂಚಾಯತ್‌ಗೆ ನಾವು ತಿಳಿಸಿದ್ದರೂ ಭರವಸೆ ಮಾತ್ರ ನೀಡಿದ್ದಾರೆ. ಆದರೆ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ.
– ರಾಧಾಕೃಷ್ಣ,
ಬಿಎಂಎಸ್ ಆಟೋರಿಕ್ಷಾ ಯೂನಿಯನ್
ತಾಲೂಕಾಧ್ಯಕ ಭರತ್ ಕನ್ನಡ್ಕ