Advertisement

ಮನೆಯಂಗಳದ ಅಂದಕ್ಕೆ ಇಂಟರ್‌ಲಾಕ್‌ ಮೆರುಗು

10:36 PM Jan 24, 2020 | mahesh |

ಮನೆ ಸುಂದರವಾಗಿರಬೇಕು. ಮನೆ ಮುಂದಿನ ಅಂಗಳ ವಿನೂತನವಾಗಿರಬೇಕು ಎನ್ನುವುದು ಎಲ್ಲರ ಆಸೆ. ಅದಕ್ಕಾಗಿ ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಾರೆ. ಮನೆಯ ಮುಂದಿನ ಅಂಗಳದಲ್ಲಿ ಗಾರ್ಡನಿಂಗ್‌ ಒಂದು ಟ್ರೆಂಡ್‌ ಆದರೆ ಇನ್ನೊಂದೆಡೆ ಇಂಟರ್‌ಲಾಕ್‌ ಮೂಲಕ ಅಂಗಳವನ್ನು ಸುಂದರವಾಗಿಸುತ್ತಾರೆ. ಇಂಟರ್‌ಲಾಕ್‌ನಲ್ಲೂ ಹಲವಾರು ವಿಧಗಳಿದ್ದು, ಅವುಗಳ ಸರಿಯಾದ ಆಯ್ಕೆಯೂ ಅಗತ್ಯ. ಇಂಟರ್‌ಲಾಕ್‌ನಲ್ಲಿ ಹೊಸ ಹೊಸ ವಿನ್ಯಾಸ, ಬಣ್ಣಗಳಲ್ಲಿ ಟ್ರೆಂಡ್‌ಗಳು ಬಂದಿವೆ. 

Advertisement

ಟ್ರೆಂಡಿಂಗ್‌ ಇಂಟರ್‌ಲಾಕ್‌
ಹೇರಿಂಗ್‌ಬೋನ್‌ ಕಿಚನ್‌ ಟೈಲ್ಸ್‌ ಮಾದರಿಯ ಇಂಟರ್‌ಲಾಕ್‌ ಇಂದು ಹೆಚ್ಚು ಟ್ರೆಂಡಿಂಗ್‌ ಆಗುತ್ತಿದೆ. ಇದು ಮನೆಯ ಅಂಗಳಕ್ಕೆ ಸುಂದರವಾದ ಲುಕ್‌ ನೀಡುತ್ತದೆ.

ರಾಂಡಮ್‌ ಪ್ಯಾಟರ್ನ್
ರಾಂಡಮ್‌ ಪ್ಯಾಟರ್ನ್ಗಳು ಹೆಚ್ಚು ಬಳಕೆಯಾಗುತ್ತಿದ್ದು, ಇದು ಹೆಚ್ಚು ಕಂಫ‌ಟೇìಬಲ್‌ ಮತ್ತು ಹ್ಯಾಂಡ್‌ಮೇಡ್‌ ಮಾದರಿಯಂತೆ ಕಾಣುತ್ತದೆ.

ರನ್ನಿಂಗ್‌ ಬಾಂಡ್‌
ಹೆಚ್ಚು ಆಕರ್ಷಕವಾಗಿ ಕಾಣಬೇಕಾದರೆ ರನ್ನಿಂಗ್‌ ಬಾಂಡ್‌ ಇಂಟರ್‌ಲಾಕ್‌ ಉತ್ತಮ. ಪ್ಲ್ರಾಗ್‌ಸ್ಟೋನ್‌ಗಳನ್ನು ಮಧ್ಯದಲ್ಲಿ ಬಳಸುವುದರಿಂದ ಇನ್ನಷ್ಟು ಆಕರ್ಷಕವಾದ ನೋಟ ನೀಡುತ್ತದೆ.

ನಿರ್ವಹಣೆಗೂ ಮಹತ್ವ ನೀಡಿ
ಇಂಟರ್‌ಲಾಕ್‌ಗಳು ಮನೆಗೆ ಸುಂದರ ನೋಟ ನೀಡುತ್ತವೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಬೇಕು ಮತ್ತು ಅದರ ನಿರ್ವಹಣೆಗೂ ಹೆಚ್ಚು ಮಹತ್ವ ನೀಡಬೇಕು. ಇಂಟರ್‌ಲಾಕ್‌ನಲ್ಲಿ ಸಾಮಾನ್ಯವಾಗಿ ಬೇಗ ಮಣ್ಣು ಹಿಡಿಯುವುದು ಮತ್ತು ಜಾರುವ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಅದರ ನಿರ್ವಹಣೆಗೂ ಹೆಚ್ಚು ಮಹತ್ವ ನೀಡಬೇಕು.

Advertisement

ಇಂಟರ್‌ಲಾಕ್‌ನ ಆಯ್ಕೆ
ಮನೆಗೆ ಬಳಸುವ ಇಂಟರ್‌ಲಾಕ್‌ಗಳ ಆಯ್ಕೆಗೆ ಹೆಚ್ಚು ಮಹತ್ವ ನೀಡಬೇಕು. ಸಾಮಾನ್ಯವಾಗಿ ಇಂಟರ್‌ಲಾಕ್‌ ಅನ್ನು ಮನೆಯನ್ನು ಸುಂದರಗೊಳಿಸಲು ಬಳಕೆ ಮಾಡಿದರೂ ಅದರಿಂದ ಅಪಾಯವೂ ಇದೆ. ಆದ್ದರಿಂದ ಇಂಟರ್‌ಲಾಕ್‌ ಆಯ್ಕೆಯಲ್ಲಿ ಹೆಚ್ಚು ಎಚ್ಚರಿಕೆ ಅಗತ್ಯ.

ಪರ್ಮಯೇಬಲ್‌, ಪಿಂಗಾಣಿ ಇಂಟರ್‌ಲಾಕ್‌
ಇಂಟರ್‌ಲಾಕ್‌ನಲ್ಲಿ ಬಣ್ಣ, ಆಕಾರಗಳನ್ನು ಹೊರತುಪಡಿಸಿ ಒಂದಷ್ಟು ಹೊಸ ಆವಿಷ್ಕಾರಗಳು ಬರುತ್ತಿವೆ. ಪರ್ಮಯೇಬಲ್‌ (ಪ್ರವೇಶ ಸಾಧ್ಯ) ಹೊಸ ಮಾದರಿ ಯಾಗಿದ್ದು, ಇದರ ಮೂಲಕ ಅಂಗಳದ ನೀರು ಇಂಗುತ್ತದೆ. ಈ ಇಂಟರ್‌ಲಾಕ್‌ ಹಾಕುವಾಗ ಹಲವು ಹಂತಗಳಿವೆ. ಒಳಗಡೆ ನೀರು ಹೋಗುವಷ್ಟು ಜಾಗವಿದ್ದು, ನೀರು ಇಂಗುವುದಕ್ಕೆ ಇದು ಸಹಕಾರಿ. ಇನ್ನೊಂದು ಆವಿಷ್ಕಾರವೆಂದರೆ ಪಿಂಗಾಣಿ ಫೇವರ್‌ಗಳು. ಇದು ಅಸಾಧಾರಣ ಬಾಳಿಕೆ ಬರುವ ಮತ್ತು ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಇಂಟರ್‌ಲಾಕ್‌. ನಯವಾದ ಪಿಂಗಾಣಿಯಿಂದ ಮಾಡಿದ ಇದು ಹೆಚ್ಚು ಆಕರ್ಷಕವಾಗಿ ಕಾಣಿಸುತ್ತದೆ. ಜತೆಗೆ ಇದು ಬೆಳಕನ್ನು ಪ್ರತಿಫ‌ಲಿಸುವ ಶಕ್ತಿ ಹೊಂದಿದೆ.

1 ಬಜೆಟ್‌ ಯಾವ ರೀತಿ ಇದೆ ಮತ್ತು ಮನೆಗೆ ಹೊಂದಿಕೊಳ್ಳವಂತಹ ಇಂಟರ್‌ಲಾಕ್‌ ಆಯ್ಕೆ ಮಾಡಿಕೊಳ್ಳಿ. 

2 ಇಂಟರ್‌ಲಾಕ್‌ ಖರೀದಿಸುವಾಗ ಅದರ ಕುರಿತು ಸರಿಯಾದ ಮಾಹಿತಿ ಪಡೆದುಕೊಳ್ಳಿ. 

– ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next