Advertisement
20 ಮಧ್ಯಂತರ ಜಾಮೀನು: ಪ್ರಸ್ತುತ ಮಂಡ್ಯಜಿಲ್ಲಾ ಕಾರಾಗೃಹದಲ್ಲಿದ್ದ 20 ಮಂದಿನ್ಯಾಯಾಂಗ ಬಂಧಿತ ಜೈಲು ಹಕ್ಕಿಗಳಿಗೆ 45ದಿನಗಳ ಮಧ್ಯಂತರ ಜಾಮೀನು ದೊರಕಿದೆ.
Related Articles
Advertisement
ಸೋಂಕು ಮುಕ್ತ ಜೈಲು: ಕೊರೊನಾ ಮೊದಲಅಲೆಯಲ್ಲಿ ಕಾರಾಗೃಹದಲ್ಲಿದ್ದ 20 ಮಂದಿಗೆಸೋಂಕು ಹರಡಿತ್ತು. ಎರಡನೇ ಅಲೆಯಲ್ಲಿಇಬ್ಬರಿಗೆ ಆವರಿಸಿತ್ತು. ಜೈಲು ಅ ಧಿಕಾರಿಗಳುಕೈಗೊಂಡ ಮುಂಜಾಗ್ರತೆ ಕ್ರಮದಿಂದಸೋಂಕು ಮುಕ್ತ ಜೈಲಾಗಿ ಮಾರ್ಪಟ್ಟಿದೆ.ಮುಂಜಾಗ್ರತೆ ಕ್ರಮ: ಇನ್ನೂ ಮಂಡ್ಯಕಾರಾಗೃಹದಲ್ಲಿನ ಬಂಧಿತರಿಗೆ ಸೋಂಕುಹರಡದಂತೆ ಅಗತ್ಯ ಮುಂಜಾಗ್ರತೆ ಕ್ರಮಕೈಗೊಳ್ಳಲಾಗಿದೆ. ಬಂಧಿತರ ಸಂದರ್ಶನಕ್ಕೆನಿರ್ಬಂಧ ಹೇರಲಾಗಿದೆ.
ಕಾರಾಗೃಹ ಆವರಣವನ್ನು ನಿತ್ಯ ರಸಾಯನಿಕ ದ್ರಾವಣ ಸಿಂಪಡಿಸಿ ಶುಚಿಗೊಳಿಸಲಾಗುತ್ತಿದೆ. ಕುಡಿಯಲುಬಿಸಿ ನೀರು, ಬಿಸಿಯೂಟ ನೀಡಲಾಗುತ್ತಿದೆ.ಜ್ವರ ಬಂದರೆ ಕಾರಾಗೃಹದ ಐಸೋಲೇಷನ್‌ಸೆಲ್‌ನಲ್ಲಿ ಚಿಕಿತ್ಸೆ ನೀಡಲಾಗುವುದು.ವಾರಕ್ಕೊಮ್ಮೆ ಮಿಮ್ಸ್ ವೈದ್ಯರು ನಿಯಮಿತವಾಗಿ ಭೇಟಿ ನೀಡಿ ಪರೀಕ್ಷೆ ನಡೆಸಲಿದ್ದು,ಮಾನಸಿಕ ತಜ್ಞರಿಂದಲ್ಲೂ ಆಪ್ತ ಸಮಾಲೋಚನೆನಡೆಯುತ್ತಿದೆ. ಯಾರಿಗಾದರೂ ಸೋಂಕುದೃಢಪಟ್ಟರೆ ಕೂಡಲೇ ಚಿಕಿತ್ಸೆ ನೀಡಲು ಎಲ್ಲರೀತಿಯ ಕ್ರಮ ವಹಿಸಲಾಗುತ್ತಿದೆ.
ಎಚ್.ಶಿವರಾಜು