Advertisement

ಅರವಿಂದ್‌ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು? ಸುಪ್ರೀಂ ಸುಳಿವು

12:02 PM May 04, 2024 | Team Udayavani |

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧಿಸಿದಂತೆ ಮಾ.21ರಿಂದಲೂ ಬಂಧನದಲ್ಲಿರುವ ದಿಲ್ಲಿ ಸಿಎಂ ಅರವಿಂದ್‌
ಕೇಜ್ರಿವಾಲ್‌ಗೆ ಕೊನೆಗೂ ಮಧ್ಯಂತರ ಜಾಮೀನು ಸಿಗುವ ಸೂಚನೆ ಸಿಕ್ಕಿದೆ. ಖುದ್ದು ಸುಪ್ರೀಂಕೋರ್ಟ್‌ ಈ ಬಗ್ಗೆ ಸುಳಿವು ನೀಡಿದ್ದು, ಲೋಕಸಭೆ ಚುನಾವಣೆ ದೃಷ್ಟಿಯಿಂದ ಮಧ್ಯಂತರ ಜಾಮೀನು ವಿಚಾರವನ್ನು ಪರಿಗಣಿಸುವುದಾಗಿ ಹೇಳಿದೆ.

Advertisement

ಇದನ್ನೂ ಓದಿ:ಬಿಗ್‌ಬಾಸ್‌ ವಿಜೇತ ಎಲ್ವಿಶ್‌ ಯಾದವ್‌ ವಿರುದ್ಧ ಅಕ್ರಮ ವರ್ಗಾವಣೆ ಕೇಸ್‌ ದಾಖಲಿಸಿದ ಇ.ಡಿ

ಬಂಧನ ಪ್ರಶ್ನಿಸಿ ಕೇಜ್ರಿವಾಲ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸಂಜೀವ್‌ ಖನ್ನಾ ಹಾಗೂ ನ್ಯಾಯಮೂರ್ತಿ ದೀಪಂಕರ್‌ ದತ್ತಾ ಅವರ ನ್ಯಾಯಪೀಠವು ಆಲಿಸಿದೆ.ಅರ್ಜಿ ವಿಚಾರಣೆ ಶುಕ್ರವಾರ ಪೂರ್ಣಗೊಳ್ಳದ ಕಾರಣ ಮೇ 7ರ ಮಂಗಳವಾರಕ್ಕೆ ಮುಂದಿನ ವಿಚಾರಣೆಗೆ ದಿನಾಂಕ ನಿಗದಿ ಪಡಿಸಿದೆ.

ಮಂಗಳವಾರವೂ ವಿಚಾರಣೆ ಪೂರ್ಣಗೊಳ್ಳದೇ ಹೋದ ಸಂದರ್ಭದಲಿ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಧ್ಯಂತರ ಜಾಮೀನು ಕುರಿತಾದ ವಿಷಯವನ್ನು ಪರಿಗಣಿಸುವ ಸಾಧ್ಯತೆಗಳಿದೆ. ಈ ಹಿನ್ನೆಲೆಯಲ್ಲಿ ವಾದ ಮಂಡಿಸಲು ಸಿದ್ದರಾಗಿ ಬರುವಂತೆಯೂ ಜಾರಿ ನಿರ್ದೇನಾಲಯದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌
ಜನರಲ್‌ ಎಸ್‌.ವಿ.ರಾಜು ಅವರಿಗೆ ತಿಳಿಸಿದೆ. ಜತೆಗೆ ಮಧ್ಯಂತರ ಜಾಮೀನು ಅರ್ಜಿಯನ್ನು ಪರಿಗಣಿಸುವುದಾಗಿ ಹೇಳಿದ್ದೇವೆ ವಿನಃ ಜಾಮೀನು ನೀಡುತ್ತೇವೆ ಎಂದಿಲ್ಲ ಹಾಗಾಗಿ ಎರಡೂ ಕಡೆಯವರು ಈ ಬಗ್ಗೆ ಊಹಾಪೋಹಾಗಳನ್ನು ಸೃಷ್ಟಿಸಿಕೊಳ್ಳಬಾರದು ಎಂದೂ ನ್ಯಾಯಪೀಠ ಹೇಳಿದೆ.

ಅನಾರೋಗ್ಯ ಪೀಡಿತ ಪತ್ನಿಯ ಭೇಟಿಗೆ ಸಿಸೋಡಿಯಾಗೆ ಹೈಕೋರ್ಟ್‌ ಸಮ್ಮತಿ ‌

Advertisement

ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧಿಸಿದ ಪ್ರಕರಣದಲ್ಲಿ ಜೈಲಿನಲ್ಲಿರುವ ಆಪ್‌ ನಾಯಕ ಮನೀಷ್‌ ಸಿಸೋಡಿಯಾ ಅವರು ವಾರಕ್ಕೊಮ್ಮೆ ತಮ್ಮ ಅನಾರೋಗ್ಯ ಪೀಡಿತ ಪತ್ನಿಯನ್ನು ಭೇಟಿಯಾಗುವುದಕ್ಕೆ ದೆಹಲಿ ಹೈಕೋರ್ಟ್‌ ಅನುಮತಿ ನೀಡಿದೆ.

ಅಕ್ರಮ ಹಣವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಸಿಸೋಡಿಯಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಏ.30ರಂದು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಸ್ವರ್ಣಕಾಂತ್‌ ಶರ್ಮಾ ಅವರ ಪೀಠವು ಸಿಸೋಡಿ ಯಾಗೆ ಜಾಮೀನು ನೀಡಬಹುದೇ ಎಂಬ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಇಡಿ ಮತ್ತು ಸಿಬಿಐಗೆ ನೋಟಿಸ್‌ ಜಾರಿಗೊಳಿಸಿದೆ. ಅರ್ಜಿಗಳು ವಿಚಾರಣೆ ಯಲ್ಲಿರುವಾಗಲೂ ವಾರಕ್ಕೊಮ್ಮೆ ಸಿಸೋಡಿಯಾ ಪತ್ನಿಯನ್ನು ಭೇಟಿಯಾಗಬಹುದೆಂದು ಸ್ಥಳೀಯ ಕೋರ್ಟ್‌ ಆದೇಶವನ್ನು ಮುಂದುವರಿಸಲು ಸಮ್ಮತಿಸಿದೆ. ಮೇ 8ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next