ಗಂಗಾನದಿ ದಡದಲ್ಲಿರುವ ವಾರಣಾಸಿ 3000 ವರ್ಷಗಳ ಹಳೆಯದ್ದು, ಹಿಂದೂ ಪುರಾಣಗಳ ಪ್ರಕಾರ ಶಿವನು 5000 ವರ್ಷಗಳ ಹಿಂದೆ ಈ ನಗರವನ್ನು ಖರೀದಿಸಿದ್ದು ಎಂಬ ಪ್ರತೀತಿ ಇದೆ.
Advertisement
2. ಶ್ರೀನಗರದ ದಾಲ್ ಸರೋವರದಲ್ಲಿರುವ ವಿಶ್ವದ ಏಕೈಕ ತೇಲುವ ಅಂಚೆ ಕಚೇರಿಭಾರತವು ಅಂಚೆ ಕಚೇರಿಗಳಿಗೆ ಹೆಸರುವಾಸಿಯಾಗಿದೆ. ಶ್ರೀನಗರದ ದಾಲ್ ಸರೋವರದಲ್ಲಿ ತೇಲುವ ಅಂಚೆ ಕಚೇರಿಯನ್ನು ಹೊಂದಿದೆ. ಇದು ದೋಣಿಮನೆಯ ಮೇಲೆ ನೆಲೆಗೊಂಡಿದ್ದು ಅಂಚೆ ಚೀಟಿಗಳ ಸಂಗ್ರಹಾಲಯವನ್ನು ಒಳಗೊಂಡಿದೆ.
ಮೇಘಾಲಯದಲ್ಲಿರುವ ಮಾವ್ಸಿನ್ರಾಮ್ ಪಟ್ಟಣದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದು, ಇಲ್ಲಿ 11, 873 ಮಿ.ಮೀ. ಮಳೆಯಾಗುತ್ತಿದೆ. ಇಲ್ಲಿ ಎಲ್ಲಾ ಕಾಲದಲ್ಲಿಯೂ ಮಳೆ ಬೀಳುವ ಏಕೈಕ ಸ್ಥಳವಾಗಿದ್ದು ಗಿನ್ನೆಸ್ ದಾಖಲೆ ಬೀರಿದೆ. 4.ಶಿಂಗ್ನಾಪುರ ಮನೆಗಳಿಗೆ ಬಾಗಿಲೇ ಇಲ್ಲ
ಮಹಾರಾಷ್ಟ್ರದ ಈ ಗ್ರಾಮದಲ್ಲಿ ಯಾವುದೇ ಮನೆ ಮತ್ತು ಸಂಸ್ಥೆಗಳಿಗೆ ಬಾಗಿಲುಗಳಿಲ್ಲ. ಇಲ್ಲಿ ಜನರು ಭಗವಾನ್ ಶನಿ ಪಟ್ಟಣದ ರಕ್ಷಕ ಎಂದು ನಂಬಿದ್ದು ನಿವಾಸಿಗಳು ಯಾವುದೇ ಆತಂಕವಿಲ್ಲದೆ ಬದುಕುತ್ತಿದ್ದಾರೆ.
Related Articles
ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯ ಒಂದು ಸಣ್ಣ ಹಳ್ಳಿಯು ಹೆಚ್ಚಿನ ಸಂಖ್ಯೆಯ ಐಎಎಸ್ ಅಧಿಕಾರಿಗಳನ್ನು ಹೊಂದಿದ್ದು ಇತಿಹಾಸ ಸೃಷ್ಟಿಸಿದ ಗ್ರಾಮವಾಗಿದೆ. ಇಲ್ಲಿ ಸುಮಾರು 75 ಮನೆಗಳಿದ್ದು 47 ಅಧಿಕಾರಿಗಳನ್ನು ಭಾರತೀಯ ಆಡಳಿತಕ್ಕೆ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದಲ್ಲದೆ ಈ ಹಳ್ಳಿಯ ಅನೇಕರು ಇಸ್ರೋ, ಪರಮಾಣು ಕೇಂದ್ರಗಳಲ್ಲಿ, ವಿಶ್ವಬ್ಯಾಂಕ್‌ನಂತಹ ಪ್ರತಿಷ್ಟಿತ ಕಂಪೆನಿಗಳಲ್ಲಿ ಸೇರುವ ಮೂಲಕ ತಮ್ಮ ವೃತ್ತಿ ಜೀವನವನ್ನು ರೂಪಿಸಿಕೊಂಡಿªದಾರೆ.
Advertisement
6. ವಿಶ್ವದ ಅತ್ಯುನ್ನತ ಕ್ರಿಕೆಟ್ ಮೈದಾನಭಾರತ ಕ್ರಿಕೆಟ್ ಪ್ರೀತಿಸುವ ರಾಷ್ಟ್ರವೆನ್ನುವುದು ಎಲ್ಲರಿಗೂ ಸಾಮಾನ್ಯವಾಗಿ ತಿಳಿದ ಸತ್ಯ. ಭಾರತದ ಹಲವೆಡೆ ಮೈದಾನಗಳೂ ಇವೆ. ಆದರೆ ಹಿಮಾಚಲ ಪ್ರದೇಶದ ಚೈಲ್‌ನಲ್ಲಿರುವ ಈ ಮೈದಾನ 2,144 ಮೀ. ಎತ್ತರದಲ್ಲಿದ್ದು ಗಿನ್ನಿಸ್ ದಾಖಲೆಯಲ್ಲಿ ಅತ್ಯುನ್ನತ ಕ್ರಿಕೆಟ್ ಮೈದಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.