Advertisement

ಕ್ರೀಡಾಲೋಕದ ಅಚ್ಚರಿ; ದೇಶ ಕಂಡ “ಆ” ದಿಗ್ಗಜ ಆಟಗಾರ ಪಾಕ್ ಪರ ಆಡಿದ್ದ!

11:33 AM Jan 12, 2019 | |

ಶತಮಾನಗಳ ಹಿಂದೆ ಆಂಗ್ಲರ ನಾಡಿನಲ್ಲಿ  ಆರಂಭವಾದ ಕ್ರಿಕೆಟ್ ಆಟ ಈಗ ಸಾಕಷ್ಟು ಬದಲಾವಣೆ ಕಂಡಿದೆ. ಅನಿಯಮಿತ ದಿನಗಳ ಪಂದ್ಯವಾಗಿದ್ದ ಕ್ರಿಕೆಟ್ ನಂತರ ಐದು ದಿನಗಳ ಟೆಸ್ಟ್ ಮ್ಯಾಚ್, 60 ಓವರ್ ನ ಏಕದಿನ ಪಂದ್ಯ, ನಂತರ 50  ಓವರ್ ಗೆ ಇಳಿಯಿತು. ಈಗ ಟಿ.20 ಯುಗ. ಈ ಕಾಲಘಟ್ಟದಲ್ಲಿ ಅನೇಕ ದಾಖಲೆಗಳು ದಾಖಲಾಗಿವೆ. ಆದರೆ ಕೆಲವು ದಾಖಲೆಗಳು ನಂಬುವುದು ಕಷ್ಟ. ಅಂತಹ ಕೆಲವು ವಿಚಿತ್ರ ಆದರೂ ಕುತೂಹಲ ಭರಿತ ದಾಖಲೆಗಳು ಇಲ್ಲಿವೆ. 

Advertisement


* ಒಂದು ಪಂದ್ಯದಲ್ಲಿ ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡದೇ ಯಾರಾದರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದು ನೋಡಿದ್ದೀರಾ? ಹೌದು, ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್ ಕೇವಲ ಫೀಲ್ಡಿಂಗ್ ಮಾಡಿ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಪಂದ್ಯದಲ್ಲಿ ಜಾಂಟಿ ರೋಡ್ಸ್ 7  ಕ್ಯಾಚ್ ಪಡೆದಿದ್ದರು. ಅದೂ ಕೂಡಾ ಬದಲಿ ಆಟಗಾರನಾಗಿ ಆಡಿ . !


*  ವಿಶ್ವ ಕಪ್ ಕೂಟದಲ್ಲಿ ಅತೀ ಹೆಚ್ಚು ಬಾರಿ  300ಕ್ಕೂ ಹೆಚ್ಚು ಗುರಿ ಬೆನ್ನಟ್ಟಿ ಗೆದ್ದ ದೇಶ ಯಾವುದು ಗೊತ್ತಾ ?  ಅದು ಭಾರತವಲ್ಲ. ಬದಲಾಗಿ ಐರ್ಲ್ಯಾಂಡ್ ! ಹೌದು, ಐರ್ಲ್ಯಾಂಡ್ 3 ಸಲ 300 ಕ್ಕೂ ಹೆಚ್ಚು ಗುರಿಯನ್ನು ಬೆನ್ನಟ್ಟಿ ವಿಜಯಿಯಾಗಿದೆ. 

* ಕ್ರಿಸ್ ಗೇಲ್ ಟೆಸ್ಟ್ ಪಂದ್ಯದ ಮೊದಲ ಎಸೆತದಲ್ಲೇ ಸಿಕ್ಸ್ ಬಾರಿಸಿದ ವಿಶ್ವದ  ಮೊದಲ ಮತ್ತು ಏಕೈಕ ಬ್ಯಾಟ್ಸಮನ್ . 


* ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೇನ್ ಮೆಕ್ ಗ್ರಾಥ್ ಹೆಸರಿನಲ್ಲಿ ಒಂದು ವಿಚಿತ್ರ ದಾಖಲೆಯಿದೆ. ಮೆಕ್ ಗ್ರಾಥ್ ತಮ್ಮ ಕ್ರಿಕೆಟ್ ಜೀವನದಲ್ಲಿ ರನ್ ಗಳಿಸಿದಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ . ಇಂತಹ ದಾಖಲೆ ಬೇರೆ ಯಾರ ಹೆಸರಲ್ಲಿಯೂ ಇಲ್ಲ. ಮೆಕ್ ಗ್ರಾಥ್ ತಮ್ಮ ಕ್ರಿಕೆಟ್ ಬಾಳ್ವೆಯಲ್ಲಿ ಬರೋಬ್ಬರಿ 916 ವಿಕೆಟ್ ಪಡೆದಿದ್ದರೆ, ರನ್ ಗಳಿಸಿದ್ದು ಮಾತ್ರ ಕೇವಲ 756  .  

* ಸಚಿನ್ ತೆಂಡೂಲ್ಕರ್ ರ ‘ನರ್ವಸ್ ನೈಂಟಿ’ ಬಗ್ಗೆ ಕೇಳಿರಬಹುದು. ಸಚಿನ್ ಶತಕದ ಹೊಸ್ತಿಲಿಗೆ ಬಂದು ಔಟ್ ಆಗುತ್ತಿದ್ದುದು ಈಗ ಇತಿಹಾಸ. ಸಚಿನ್ ಹೀಗೆ ಶತಕದ ಹೊಸ್ತಿಲಲ್ಲಿ ಅಂದರೆ 90  ರನ್ ಗಳಿಸಿದ ನಂತರ ಶತಕ ಪೂರೈಸದೆ ಔಟ್ ಆಗಿರುವುದು ಒಟ್ಟು 17 ಬಾರಿ. 


* 1989ರಲ್ಲಿ ಸಚಿನ್ ತೆಂಡೂಲ್ಕರ್ ರೊಂದಿಗೆ ವಿಶ್ವದಾದ್ಯಂತ ಒಟ್ಟು 23 ಇತರ ಆಟಗಾರರು ಅಂತಾರಾಷ್ತ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ಅವರಲ್ಲಿ ಕೊನೆಯದಾಗಿ ನಿವೃತ್ತಿ ಹೊಂದಿದವರು ತೆಂಡೂಲ್ಕರ್. ( 2013) ಸಚಿನ್ ಗಿಂತ ಮೊದಲು ವಿದಾಯ ಹೇಳಿದವರು ನ್ಯೂಜಿಲಂಡ್ ನ ಕ್ರಿಸ್ ಕ್ರೈನ್ಸ್. ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದ್ದು 2004ರಲ್ಲಿ . 

Advertisement

* ಸರ್ ಡಾನ್ ಬ್ರಾಡ್ಮನ್ ಯಾರಿಗೆ ಗೊತ್ತಿಲ್ಲ ಹೇಳಿ. ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರ. ಆದರೆ ಅವರು ಸಿಕ್ಸ್ ಬಾರಿಸುವಲ್ಲಿ ಬಹಳಷ್ಟು ಸಲ ಸಫಲರಾಗಿರಲಿಲ್ಲ ಎಂಬುವುದನ್ನು ನಾವು ಒಪ್ಪಿಕೊಳ್ಳಲೇಬೇಕು. ಯಾಕೆಂದರೆ ಬ್ರಾಡ್ಮನ್ ತಮ್ಮ ಸಂಪೂರ್ಣ ಕ್ರಿಕೆಟ್ ಬಾಳ್ವೆಯಲ್ಲಿ ಸಿಡಿಸಿದ ಸಿಕ್ಸ್ ಗಳ ಸಂಖ್ಯೆ ಕೇವಲ 6. 


* 60 ಓವರ್ ಗಳ ಏಕದಿನ ವಿಶ್ವಕಪ್, 50 ಓವರ್ ಗಳ ಮತ್ತು ಟಿ 20 ವಿಶ್ವಕಪ್ ಗೆದ್ದ ಏಕೈಕ ತಂಡ ಭಾರತ.  1983, 2007 ಮತ್ತು 2011ರಲ್ಲಿ ಭಾರತ ವಿಶ್ವಕಪ್ ಎತ್ತಿ ಹಿಡಿದಿತ್ತು. ಹಾಗೆಯೇ ಎಲ್ಲಾ ಮಾದರಿಯ ವಿಶ್ವಕಪ್ ಫೈನಲ್ ನಲ್ಲಿ ಸೋಲುಂಡ ಏಕೈಕ ದೇಶ ಇಂಗ್ಲೆಂಡ್. 1979 ರಲ್ಲಿ 60 ಓವರ್ ವಿಶ್ವಕಪ್,1992ರ 50 ಓವರ್ ವಿಶ್ವಕಪ್ ಫೈನಲ್, 2016ರಲ್ಲಿ 20 ಓವರ್ ಫೈನಲ್ ಪಂದ್ಯಗಳಲ್ಲಿ ಸೋಲನುಭವಿಸಿತ್ತು. 

*ಸಚಿನ್ ತೆಂಡೂಲ್ಕರ್ ಭಾರತ ದೇಶ ಕಂಡ ದಿಗ್ಗಜ ಆಟಗಾರ. ಆದರೆ ಸಚಿನ್ ಭಾರತಕ್ಕಿಂತ ಮೊದಲು ಪಾಕಿಸ್ತಾನ ತಂಡದ ಪರವಾಗಿ ಆಡಿದ್ದರು ಎಂದರೆ ನಂಬಲು ಸಾಧ್ಯವೇ ! ಹೌದು, 1987ರಲ್ಲಿ ಮುಂಬೈನ ಬ್ರೆಬೊರ್ನ್ ಸ್ಟೇಡಿಯಮ್ ನಲ್ಲಿ ಅಭ್ಯಾಸ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಬದಲಿ ಆಟಗಾರನಾಗಿ ಪಾಕಿಸ್ತಾನದ ಪರವಾಗಿ ಆಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next