Advertisement

ಚಕ್ರಬಡ್ಡಿ ಮನ್ನಾ ಪ್ರಕರಣದ ವಿಚಾರಣೆ: ಕೇಂದ್ರದ ಅಫಿಡವಿಟ್‌ಗೆ ಸುಪ್ರೀಂ ಅಸಮಾಧಾನ

06:11 PM Oct 07, 2020 | Nagendra Trasi |

ನವದೆಹಲಿ:ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸಾಲ ಮರುಪಾವತಿ ಕಂತುಗಳ ಮುಂದೂಡಿಕೆಯ (ಲೋನ್‌ ಮೊರಟೋರಿಯಂ) ಅವಧಿಯ ಚಕ್ರಬಡ್ಡಿಯನ್ನು ಮನ್ನಾ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದ್ದು, ಅದು ಎಲ್ಲಾ ಸಾಲಗಾರರಿಗೂ ಸಮಾಧಾನಕರವಾದ ಕ್ರಮವಾಗಿಲ್ಲ ಎಂದು ಸುಪ್ರೀಂಕೋರ್ಟ್‌ ವ್ಯಾಖ್ಯಾನಿಸಿದೆ.

Advertisement

ಪ್ರಕರಣ ಸಂಬಂಧ ‌ ವಿವಿಧ ವಲಯಗ‌ಳಿಂದ ಸಲ್ಲಿಕೆಯಾಗಿರುವ ಆಕ್ಷೇಪಣಾ ಅರ್ಜಿಗಳ ‌ ವಿಚಾರಣೆ ನಡೆಸಿದ ‌ ನ್ಯಾಯಪೀಠ, ಈ ಆಕ್ಷೇಪಣೆಗಳಿಗೆ ಪ್ರತಿ
ಯಾಗಿ ಕೇಂದ್ರ ಸರ್ಕಾರ ‌ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿರುವ ಲೋಪಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟಿತು.  ಜೊತೆಗೆ, ಎಲ್ಲಾ ವಲಯಗಳ ‌ ಸಾಲಗಾರರ ‌ ಗೊಂದಲ
ಪರಿಹಾರ ‌ವಾಗುವಂತೆ ಸೂಕ್ತ ಪ್ರಕ‌ಟಣೆ ಹೊರತರು ವಂತೆ ಸೂಚಿಸಿತು.

ಮೂರು ಬಗೆಯ ಲೋಪ ಪತ್ತೆ: ಚಕ್ರಬಡ್ಡಿ ಮನ್ನಾ ವಿಚಾರದಲ್ಲಿ ಕೇಂದ್ರ ಸರ್ಕಾರ ಸಲ್ಲಿಸಿರುವ ಪ್ರಮಾಣ  ಪತ್ರದಲ್ಲಿ 3 ಬಗೆಯ ಲೋಪಗಳಿವೆ ಎಂದು ನ್ಯಾಯ
ಪೀಠ ಹೇಳಿತು. ಮೊದಲನೆಯದಾಗಿ, ಚಕ್ರಬಡ್ಡಿ ಮನ್ನಾ ವಿಚಾರವಾಗಿ ಕೇಂದ್ರ ಸರ್ಕಾರದಿಂದಾಗಲೀ, “ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ'(ಆರ್‌ಬಿ
ಐ)ದಿಂದಾಗಲೀ ಯಾವುದೇ “ಪರಿಣಾಮಕಾರಿ ಆದೇಶ’ ಅಥವಾ “ಸುತ್ತೋಲೆ’ ಪ್ರಕಟವಾಗಿಲ್ಲ.

ಎರಡನೆಯದಾಗಿ, ಕೊರೊನಾ ಸಾಂಕ್ರಾಮಿಕ ಘಟ್ಟ ದಲ್ಲಿ ಸಾಲಗಾರರ ಮೇಲಿನ ಸಾಲದ ಹೊರೆ ಇಳಿಕೆ ಮಾಡುವ ವಿಧಾನಗಳನ್ನು ಪರಿಶೋಧಿಸಿ ಸಲಹೆ
ನೀಡುವ ಸಲುವಾಗಿ ನೇಮಿಸಲಾಗಿದ್ದ ಕೆ.ವಿ.ಕಾಮತ್‌ ನೇತೃತ್ವದ ಸಮಿತಿಯ ವರದಿಯನ್ವಯವೇ ಚಕ್ರಬಡ್ಡಿ ಮನ್ನಾ ಮಾಡಲಾಗಿದೆಯೇ ಎಂಬುದರ ಬಗ್ಗೆ ಅಫಿಡ
ವಿಟ್‌ನಲ್ಲಿ ಸ್ಪಷ್ಟ ಉಲ್ಲೇಖವಿಲ್ಲ. ಅಸಲಿಗೆ, ವರದಿ ಯನ್ನು ಸರ್ಕಾರ ಸ್ವೀಕರಿಸಿದೆಯೇ ಅಥವಾ ತಿರಸ್ಕರಿಸಿ ದೆಯೇ ಎಂಬ ಬಗ್ಗೆಯೂ ಸ್ಪಷ್ಟವಾಗಿ ಹೇಳಲಾಗಿಲ್ಲ.

ಮೂರನೆಯದಾಗಿ, ಕಾಮತ್‌ ಸಮಿತಿ ವರದಿಯನ್ನು ಸಾರ್ವಜನಿಕ ಅವಗಾಹನೆಗಾಗಿ ಎಲ್ಲಿಯೂ ಅದನ್ನು ಅಧಿಕೃತವಾಗಿ ಪ್ರಕಟಿಸಿರುವ ಬಗ್ಗೆಯಾಗಲೀ
ಅಫಿಡವಿಟ್‌ನಲ್ಲಿ ಎಲ್ಲೂ ತಿಳಿಸಿಲ್ಲ ಎಂದು ನ್ಯಾಯ ಪೀಠ ಹೇಳಿತು.

Advertisement

ಬೇರೆ ಅಫಿಡವಿಟ್‌ಗೆ ಸೂಚನೆ: ಮೇಲೆ ತಿಳಿಸಿದ ಎಲ್ಲಾ ಲೋಪಗಳಿಗೆ ಸೂಕ್ತ ಉತ್ತರವಿರುವ ಬೇರೊಂದು ಅಫಿಡವಿಟ್‌ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಪೀಠ ಸೂಚಿಸಿತು. ಜೊತೆಗೆ, ಈಗಾಗಲೇ ಚಕ್ರಬಡ್ಡಿ ಮನ್ನಾ ವಿಚಾರಕ್ಕೆ ಸಂಬಂಧಿಸಿ ಅನೇಕ ವಲಯಗಳಿಂದ ಬಂದಿರುವ ಆಕ್ಷೇಪಣಾ ಅರ್ಜಿಗಳಿಗೆ ಅದರಲ್ಲೂ ವಿಶೇಷವಾಗಿ ರಿಯಲ್‌ ಎಸ್ಟೇಟ್ ವಲಯ ಹಾಗೂ ವಿದ್ಯುತ್‌ ಉತ್ಪಾದನಾ ವಲಯಗಳಿಂದ ಬಂದಿರುವ ಅರ್ಜಿಗಳಿಗೆ ಸೂಕ್ತ ಉತ್ತರ ನೀಡಬೇಕು ಎಂದು ಆದೇಶಿಸಿತು. ಇದೇ ವೇಳೆ, ಚಕ್ರಬಡ್ಡಿ ಮನ್ನಾದಿಂದ ಬ್ಯಾಂಕುಗಳಿಗೆ6 ಸಾವಿರಕೋಟಿ ರೂ. ಹೊರೆ ಬೀಳುತ್ತದೆ ಎಂದು ಕೇಂದ್ರ ಸರ್ಕಾರ ಅಂದಾಜು ಮಾಡಿರುವ ಬಗ್ಗೆಯೂ ಸ್ಪಷ್ಟನೆ ನೀಡು ವಂತೆ ನ್ಯಾಯಪೀಠ ಸೂಚಿಸಿ ವಿಚಾರಣೆಯನ್ನು ಅ.13ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next