ಮೀನುಗಾರಿಕೆಯಲ್ಲಿ ಸಮುದ್ರ ಮೀನುಗಾರಿಕೆ ಮತ್ತು ಜಲಕೃಷಿ ಎಂಬ ಎರಡು ವಿಧಾನಗಳಿವೆ. ಭಾರತದಲ್ಲಿ ಸದ್ಯ ಜಲಕೃಷಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ದೇಶೀಯ ಸಿಗಡಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಇರುವುದರಿಂದ ಮೀನುಗಳ ಪೈಕಿ ಶೇ. 75ರಷ್ಟು ರಫ್ತು ಆಹಾರವಾಗಿ ಸಿಗಡಿ ಮಾರಾಟವಾಗುತ್ತಿದೆ. ಅದಕ್ಕಾಗಿ ಜಲಕೃಷಿ ಅಭಿವೃದ್ಧಿಯಾಗುತ್ತಿದೆ. ಹೀಗಾಗಿ ಮೀನುಗಾರಿಕಾ ಕ್ಷೇತ್ರದಲ್ಲಿ ಅವಕಾಶಗಳು ಹೆಚ್ಚಾಗುತ್ತಲೇ ಇವೆ.
Advertisement
Qಜಲಕೃಷಿಗೆ ನಗರದಲ್ಲಿ ಒತ್ತು ನೀಡಲಾಗುತ್ತಿದೆಯೇ?ಜಲಕೃಷಿ ಮಾಡಲು ಸಾಕಷ್ಟು ಸ್ಥಳಾವಕಾಶವಿರುವ ಕೊಳಬೇಕು. ಆದರೆ ನಗರ ಪ್ರದೇಶದಲ್ಲಿ ಕೊಳ ನಿರ್ಮಾಣಕ್ಕೆ ಸ್ಥಳಾವಕಾಶ ಸಿಗುವುದು ವಿರಳ. ಹಾಗಾಗಿ ನಗರಗಳಲ್ಲಿ ಇದಕ್ಕೆ ಅಷ್ಟೊಂದು ಒತ್ತು ನೀಡಲಾಗುತ್ತಿಲ್ಲ. ಆದರೆ ಗ್ರಾಮೀಣ ಭಾಗದಲ್ಲಿ ಜಲಕೃಷಿ ಹೆಚ್ಚು ಅಭಿವೃದ್ಧಿಯಾಗತೊಡಗಿದೆ.
ಇಲ್ಲಿನ ಜಲ ಆಹಾರವು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಹೋಗುವುದರಿಂದ ಸಂಸ್ಕರಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಇದರಿಂದ ಸಂಸ್ಕರಣಾ ಇಂಡಸ್ಟ್ರಿಗಳು ಅಭಿವೃದ್ಧಿಯಾಗುತ್ತಿವೆ. ಹೀಗಾಗಿ ಸಹಜವಾಗಿ ವಿದ್ಯಾರ್ಥಿಗಳಿಗೆ ಅವಕಾಶ ಸೃಷ್ಟಿಯಾಗುವುದರಿಂದ ಕಲಿಕಾಸಕ್ತಿಯೂ ಬೆಳೆಯುತ್ತಿದೆ. Qಮೀನುಗಾರಿಕಾ ವಿಜ್ಞಾನ ಪದವೀಧರರು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುತ್ತಾರೆಯೇ?
ಜಲಕೃಷಿ ಬೆಳೆಯುತ್ತಿರುವುದೇ ಗ್ರಾಮೀಣ ಭಾಗದಲ್ಲಿ. ಇದಕ್ಕೆ ವೈಶಿಷ್ಟ ್ಯಪೂರ್ಣ ತಾಂತ್ರಿಕತೆಗಳನ್ನು ಅಳವಡಿಸಿಯೇ ಬೆಳೆಸಬೇಕು. ಆದರೆ ಇದನ್ನು ನಿರ್ವಹಿಸಲು ಕ್ಷೇತ್ರ ಪರಿಣತರೇ ಬೇಕಾಗುತ್ತದೆ. ಹೀಗಾಗಿ ಮೀನುಗಾರಿಕಾ ವಿಜ್ಞಾನ ಕಲಿತವರೇ ಜಲಕೃಷಿ ಕೆಲಸಗಳನ್ನು ನಿರ್ವಹಿಸುತ್ತಾರೆ. ಇದಕ್ಕಾಗಿ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಲು ಪದವೀಧರರು ತೆರಳುತ್ತಾರೆ.
Related Articles
ಮೀನುಗಾರಿಕೆ ಶಿಕ್ಷಣವು ವಿಜ್ಞಾನದ ಒಂದು ಭಾಗ. ಪ್ರಾಯೋಗಿಕ ಶಿಕ್ಷಣಕ್ಕೇ ಇಲ್ಲಿ ಹೆಚ್ಚು ಒತ್ತು. ಹೀಗಾಗಿ ಪ್ರಾಯೋಗಿಕ ಶಿಕ್ಷಣದ ಮೂಲಕವೇ ತಿಳಿದುಕೊಳ್ಳಬೇಕು.
Advertisement
Qಮೀನುಗಾರಿಕಾ ವಿಜ್ಞಾನದಲ್ಲಿ ಸಂಶೋಧನೆಗೆ ಆದ್ಯತೆ ಹೇಗಿದೆ?ಜಲಕೃಷಿ ಮಾಡುವಾಗ ಅದಕ್ಕೆ ತಟ್ಟುವ ರೋಗಗಳ ನಿವಾರಣೆ, ರೋಗಗಳನ್ನು ತಡೆಗಟ್ಟುವುದು ಹೇಗೆ, ಅದಕ್ಕೆ ಬೇಕಾದ ತಾಂತ್ರಿಕ ಪರಿಣತಿ ಈ ಬಗ್ಗೆ ಸಂಶೋಧನೆಗಳು ಅಗತ್ಯವಿದೆ. ಹಾಗಾಗಿ ಸಂಶೋಧನಾ ಕ್ಷೇತ್ರದಲ್ಲಿ ಆದ್ಯತೆ ಜಾಸ್ತಿ ಇದೆ. ಧನ್ಯಾ ಬಾಳೆಕಜೆ