Advertisement

ಬಡ್ಡಿರಹಿತ ಸಾಲ, ಅನ್ನಭಾಗ್ಯ ಕ್ರಾಂತಿಕಾರಿ ನಿರ್ಧಾರ

07:06 AM Jun 04, 2020 | Lakshmi GovindaRaj |

ಶಿಡ್ಲಘಟ್ಟ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೊಳಿಸಿದ ಅನ್ನಭಾಗ್ಯ ಮತ್ತು ಮಹಿಳಾ ಸ್ವಸಹಾಯ ಸಂಘಗಳಿಗೆ ಬಡ್ಡಿರಹಿತ ಸಾಲ ಸೌಲಭ್ಯ ಸಹಿತ ಅನೇಕ ಯೋಜನೆಗಳಿಂದ ರಾಜ್ಯದಲ್ಲಿ ಕ್ರಾಂತಿ ಕಾರಿ ಬದಲಾವಣೆಯಾಗಿದೆ  ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

Advertisement

ತಾಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್‌ನಿಂದ ಮಂಜೂರಾದ 1.2 ಕೋಟಿ ರೂ.ಗಳ ಚೆಕ್‌ಗಳನ್ನು  ಎಸ್‌ಎಫ್‌ಸಿಎಸ್‌ ಬ್ಯಾಂಕ್‌ನಿಂದ ವಿತರಿಸಿ  ಮಾತನಾಡಿದ ಅವರು, ಯಾರೇ ಆದರೂ ಉತ್ತಮವಾಗಿ ಕೆಲಸ ಮಾಡಿದರೆ ಅವರನ್ನು ನೆನಪು ಮಾಡಿಕೊಳ್ಳಬೇಕು. ಶಾಸಕ ವಿ.ಮುನಿಯಪ್ಪ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾ ರವಿದ್ದರೂ ಸಹ ಕೊರೊನಾ ಸೋಂಕು  ನಿಯಂತ್ರಣ ಮಾಡುವುದರಲ್ಲಿ ವಿಫಲರಾಗಿದ್ದಾರೆ.

ಕ್ಷೇತ್ರದ ಅಭಿವೃದಿಟಛಿಗೆ ಮಂ ಜೂರಾದ ಅನುದಾನವನ್ನು ಹಿಂತೆಗೆದು ಕೊಳ್ಳುತ್ತಿರುವುದರಿಂದ ಪ್ರಗತಿ ಕುಂಠಿತವಾಗಿದೆ ಎಂದರು. ಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ನಾಗ ರಾಜ್‌,  ಕೋಚಿಮುಲ್‌ ನಿರ್ದೇಶಕ   ಶ್ರೀನಿವಾಸ್‌ ರಾಮಯ್ಯ, ಡಿಸಿಸಿ ಬ್ಯಾಂಕ್‌ ನ ವ್ಯವಸ್ಥಾಪಕ ಆನಂದ್‌, ಮಳಮಾಚನ ಹಳ್ಳಿ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ಸದಸ್ಯ ಭೈರೇಗೌಡ, ಎಸ್‌ಎಫ್‌ಸಿಎಸ್‌ ಬ್ಯಾಂಕ್‌ ಅಧ್ಯಕ್ಷ ತಾದೂರು ಮುನಿಯಪ್ಪ, ಸಿಇಒ  ಉಷಾರಾಣಿ, ಮಳಮಾಚನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ರಾಮಾಂಜಿ, ಭೈರೇಗೌಡ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next