Advertisement

PF ಖಾತೆಗಳಿಗೆ ಬಡ್ಡಿ ಜಮೆ ಪ್ರಕ್ರಿಯೆ ಆರಂಭ

09:18 PM Nov 10, 2023 | Team Udayavani |

ನವದೆಹಲಿ: ಭವಿಷ್ಯ ನಿಧಿ(ಪಿಎಫ್) ಖಾತೆಗಳಿಗೆ ಬಡ್ಡಿ ಜಮೆ ಮಾಡುವ ಪ್ರಕ್ರಿಯೆಯನ್ನು ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆ(ಇಪಿಎಫ್ಒ) ಆರಂಭಿಸಿದೆ. “ಈಗಾಗಲೇ 24 ಕೋಟಿಗೂ ಅಧಿಕ ಪಿಎಫ್ ಖಾತೆಗಳಿಗೆ ಬಡ್ಡಿ ಜಮೆ ಮಾಡಲಾಗಿದೆ’ ಎಂದು ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್‌ ಇತ್ತೀಚಿಗೆ ತಿಳಿಸಿದ್ದಾರೆ. 2022-23ರ ಹಣಕಾಸು ವರ್ಷದಲ್ಲಿ ಇಪಿಎಫ್ ಖಾತೆಗಳಿಗೆ ವಾರ್ಷಿಕ ಬಡ್ಡಿ ಶೇ. 8.15ರಷ್ಟು ಇದೆ.

Advertisement

“ಪಿಎಫ್ ಖಾತೆಗಳಿಗೆ ಬಡ್ಡಿ ಜಮೆ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಶೀಘ್ರದಲ್ಲೇ ಎಲ್ಲಾ ಖಾತೆಗಳಿಗೂ ಜಮೆಯಾಗಲಿದೆ. ಅಲ್ಲಿಯವರೆಗೂ ತಾಳ್ಮೆಯಿಂದ ಕಾಯಿರಿ’ ಎಂದು ಇಪಿಎಫ್ಒ ಸ್ಪಷ್ಟಪಡಿಸಿದೆ. ಇಪಿಎಫ್ಒ ವೆಬ್‌ಸೈಟ್‌, “ಉಮಾಂಗ್‌’ ಆ್ಯಪ್‌ ಮೂಲಕ ಪಿಎಫ್ ಖಾತೆದಾರರು ತಮ್ಮ ಖಾತೆಯ ಸ್ಥಿತಿಗತಿಯನ್ನು ಪರಿಶೀಲಿಸಬಹುದು. ಅಲ್ಲದೇ ನೋಂದಾಯಿತ ಬಳಕೆದಾರರು 011-22901406 ಗೆ ಮಿಸ್‌ ಕಾಲ್‌ ನೀಡುವ ಮೂಲಕ ಮಾಹಿತಿಯನ್ನು ಪಡೆಯಬಹುದು.

 

Advertisement

Udayavani is now on Telegram. Click here to join our channel and stay updated with the latest news.

Next