Advertisement

ಅಂಚೆ ಇಲಾಖೆಯ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಕ್ಕೆ ಕತ್ತರಿ ; ಇದೀಗ ನಿಮಗೆಷ್ಟು  ಸಿಗುತ್ತೆ?

09:24 AM Apr 04, 2020 | Hari Prasad |

ಹೊಸದಿಲ್ಲಿ: ಕೋವಿಡ್ 19 ತುರ್ತುಪರಿಸ್ಥಿತಿಯ ಕಾರಣಕ್ಕಾಗಿ ಅಂಚೆ ಇಲಾಖೆಯ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಕ್ಕೆ ಕತ್ತರಿ ಬಿದ್ದಿದೆ. ಸುಕನ್ಯಾ ಸಮೃದ್ಧಿ ಯೋಜನೆಯ ವಾರ್ಷಿಕ ಬಡ್ಡಿದರ ಶೇ.8.4ರಿಂದ ಶೇ.7.6ಕ್ಕೆ ಇಳಿದಿದೆ.

Advertisement

ಈ ಮೊದಲು ಶೇ. 7.9 ವಾರ್ಷಿಕ ಬಡ್ಡಿದರ ಹೊಂದಿದ್ದ PPFಗೆ, ಈಗ ಶೇ.7.1 ಬಡ್ಡಿ ಸಿಗುವಂತಾಗಿದೆ. ಹಿರಿಯ ನಾಗರಿಕ ಉಳಿತಾಯ ಯೋಜನೆಯ ಬಡ್ಡಿದರ ಶೇ.8.6ರಿಂದ ಶೇ.7.4ಕ್ಕೆ ಇಳಿದಿದೆ.

ಲೆಕ್ಕಾಚಾರ ಹೀಗಿದೆ:
– ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಪ್ರತಿ ತಿಂಗಳು 1 ಸಾವಿರ ರೂ.ಕಟ್ಟಿದರೆ 15 ವರ್ಷಕ್ಕೆ 1.80 ಲಕ್ಷ ರೂ. ಆಗುತ್ತಿತ್ತು. 21 ವರ್ಷಕ್ಕೆ 5,70,205 ರೂ. ಕೈಗೆ ಸಿಗಬೇಕಿತ್ತು. ಆದರೆ ಈಗ ಸಿಗುವ ಮೊತ್ತ 5,10,373 ರೂ.

– PPFನಲ್ಲಿ ಪ್ರತಿ ತಿಂಗಳು 1 ಸಾವಿರ ಕಟ್ಟಿದರೆ 15 ವರ್ಷಕ್ಕೆ 1.80 ಲಕ್ಷ ಆಗುತ್ತಿತ್ತು. 15ನೇ ವರ್ಷದಲ್ಲಿ 3,37,108 ರೂ. ಕೈಗೆ ಸಿಗುತ್ತಿತ್ತು. ಪರಿಷ್ಕೃತ ಬಡ್ಡಿದರಲ್ಲಿ 3,15,572 ರೂ. ಸಿಗಲಿದೆ.

– ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ 1 ಲಕ್ಷ ರೂ. ಠೇವಣಿ ಇಟ್ಟರೆ, 3 ತಿಂಗಳಿಗೊಮ್ಮೆ (ಶೇ.8.6) 2,150 ರೂ. ಸಿಗುತ್ತಿತ್ತು. ಈಗ ಶೇ.7.4ಕ್ಕೆ ಇಳಿದಿದ್ದು, 3 ತಿಂಗಳಿಗೊಮ್ಮೆ 1,850 ರೂ. ಸಿಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next