Advertisement

ಚೆಟ್ರಿ ಪಡೆಗೆ ಇಂಟರ್‌ಕಾಂಟಿನೆಂಟಲ್‌ ಕಿರೀಟ

06:50 AM Jun 11, 2018 | |

ಮುಂಬೈ: ಸುನೀಲ್‌ ಚೆಟ್ರಿ ಪ್ರಚಂಡ ಸಾಹಸದ ನೆರವಿನಿಂದ ಭಾರತ ತಂಡ 2-0 ಗೋಲುಗಳ ಅಂತರದಿಂದ ಇಂಟರ್‌ಕಾಂಟಿನೆಂಟಲ್‌ ಕಪ್‌ ಫ‌ುಟ್‌ಬಾಲ್‌ ಪ್ರಶಸ್ತಿಯನ್ನು ಗೆದ್ದಿದೆ.

Advertisement

ಮುಂಬೈ ಫ‌ುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಆರಂಭದಿಂದಲೂ ಕೀನ್ಯಾಕ್ಕೆ ಒತ್ತಡ ಹೇರಿತು. ಪಂದ್ಯದ 8ನೇ ನಿಮಿಷದಲ್ಲಿ ಮುನ್ನುಗ್ಗಿದ ಸುನೀಲ್‌ ಚೆಟ್ರಿ ಮೊದಲ ಗೋಲು ದಾಖಲಿಸಿಯೇ ಬಿಟ್ಟರು. ಅಲ್ಲಿಗೆ ಭಾರತ 1-0 ಅಂತರದ ಮುನ್ನಡೆ ಪಡೆದುಕೊಂಡಿತು. ಇದಾದ ಬಳಿಕ ಕೀನ್ಯಾಕ್ಕೆ ಭಾರತ ಮತ್ತೂಂದು ಶಾಕ್‌ ನೀಡಿತು. ಒಟ್ಟಾರೆ 29ನೇ ನಿಮಿಷದಲ್ಲಿ ಸುನೀಲ್‌ ಚೆಟ್ರಿ ಮತ್ತೂಂದು ಗೋಲು ಸಿಡಿಸಿದರು. ಅಲ್ಲಿಗೆ ಭಾರತ ಒಟ್ಟು 2-0 ಅಂತರದ ಭರ್ಜರಿ ಮುನ್ನಡೆ ಪಡೆದುಕೊಂಡಿತು.

ಹಿನ್ನಡೆ ಅನುಭವಿಸಿದ ಕೀನ್ಯಾ: ಸುನೀಲ್‌ ಚೆಟ್ರಿ ನೀಡಿದ ಶಾಕ್‌ನಿಂದ ಕೀನ್ಯಾ ಚೇತರಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿತು. ಕೊನೆ ಹಂತದವರೆಗೂ ಗೋಲು ಲಭಿಸುವ ಆಶಾ ಭಾವನೆ ಇಟ್ಟುಕೊಂಡಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಕೀನ್ಯಾ ಆಟಗಾರರ ಎಲ್ಲ ತಂತ್ರವನ್ನು ಭಾರತೀಯ ಆಟಗಾರರು ವಿಫ‌ಲಗೊಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

33 ಲಕ್ಷ ರೂ.ಬಾಚಿದ ಭಾರತ: ಚಾಂಪಿಯನ್‌ ಭಾರತ ಪ್ರಶಸ್ತಿ ಮೊತ್ತ ರೂ.33 ಲಕ್ಷವನ್ನು ಜೇಬಿಗಿಳಿಸಿಕೊಂಡಿತು. ರನ್ನರ್‌ಅಪ್‌ ಕೀನ್ಯಾ 16 ಲಕ್ಷ ರೂ.ವನ್ನು ತನ್ನದಾಗಿಸಿಕೊಂಡಿತು. ಪಂದ್ಯ ಪುರುಷ ಸುನೀಲ್‌ ಚೆಟ್ರಿ 5 ಲಕ್ಷ ರೂ. ಪಡೆದರು.

ಮೆಸ್ಸಿ ದಾಖಲೆ ಸಮಗಟ್ಟಿದ ಚೆಟ್ರಿ
ಖ್ಯಾತ ಫ‌ುಟ್‌ಬಾಲಿಗ ಲಯೋನೆಲ್‌ ಮೆಸ್ಸಿ ಅಂತಾರಾಷ್ಟ್ರೀಯ ಫ‌ುಟ್‌ಬಾಲ್‌ ಕೂಟದಲ್ಲಿ ಒಟ್ಟಾರೆ 64 ಗೋಲು ಸಿಡಿಸಿದ ವಿಶ್ವದ ಮೊದಲ ಫ‌ುಟ್‌ಬಾಲಿಗರಾಗಿದ್ದಾರೆ. ಇದೀಗ ಈ ದಾಖಲೆಯನ್ನು ಭಾರತ ನಾಯಕ ಸುನೀಲ್‌ ಚೆಟ್ರಿ (64 ಗೋಲು) ಸಿಡಿಸಿ ಸಮಗೊಳಿಸಿದ್ದಾರೆ. ಅಷ್ಟು ಮಾತ್ರವಲ್ಲ ಚುರುಕಿನ ಗೋಲು ವೀರ ಎನಿಸಿಕೊಂಡಿದ್ದಾರೆ. ಕಳೆದ 6 ಪಂದ್ಯಗಳಲ್ಲಿ ಚೆಟ್ರಿ 10 ಗೋಲು ಸಿಡಿಸಿದ್ದರು. 81 ಗೋಲು ಸಿಡಿಸಿರುವ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ 81 ಗೋಲು ಸಿಡಿಸಿ  3ನೇ ಸ್ಥಾನದಲ್ಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next