Advertisement
ಕೋಲಾರದ ಕೆ.ಎಂ.ಸಂದೇಶ್ ಸಾಮಾಜಿಕ ಹೋರಾಟಗಳ ಗುರಿ ಇಟ್ಟುಕೊಂಡು ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆ ಜನವರಿ 13, 2017ರಂದು ಆರಂಭಿಸಿದ್ದರು. ಮೊದಲು ಸಂಘಟನೆಮುಖ್ಯ ಉದ್ದೇಶ ದಲಿತರು, ಮಹಿಳೆಯರು, ಬಡವರು ಹಾಗೂ ಶೋಷಣೆಗೊಳಪಟ್ಟವರಿಗೆನೆರವಾಗುವುದು. ಅರ್ಹರಿಗೆ ಸರ್ಕಾರದ ಸೌಲಭ್ಯ ಕಲ್ಪಿಸುವುದು. ಅನ್ಯಾಯ ಖಂಡಿಸಿ ಪ್ರತಿಭಟಿಸುವಉದ್ದೇಶ ಹೊಂದಿತ್ತು. ಆದರೆ, ಸಂಘಟನೆ ಆರಂಭಿಸಿದ 5ನೇ ದಿನಕ್ಕೆ ಸಮಿತಿಗೆ ಅಂತರ್ಜಾತಿ ವಿವಾಹ ಮಾಡಿಸುವ ಅವಕಾಶ ಪ್ರಾಪ್ತಿಯಾಗಿತ್ತು.
Related Articles
Advertisement
100ನೇ ವಿವಾಹ: ಬಂಗಾರಪೇಟೆ ತಾಲೂಕಿನ ಯುವ ಜೋಡಿಯೊಂದು ತಮಗೆ ಅಂತರ್ಜಾತಿ ವಿವಾಹ ಮಾಡಿಕೊಡಬೇಕೆಂಬ ಬೇಡಿಕೆ ಇಟ್ಟಿತ್ತು. ಅಂಬೇಡ್ಕರ್ ಸೇವಾ ಸಮಿತಿ ತನ್ನ 100ನೇ ಅಂತರ್ಜಾತಿ ವಿವಾಹವಾಗಿ 2022ರ ಪ್ರೇಮಿಗಳ ದಿನದಂದು ಕೋಲಾರದ ನಚಿಕೇತ ನಿಲಯ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆ ಮುಂಭಾಗ ನಡೆಸಿತು. ಸಂವಿಧಾನ ಪೀಠಿಕೆಯ ವಾಗ್ಧಾನದೊಂದಿಗೆ ಪ್ರೇಮಿಗಳು ಸತಿಪತಿಗಳಾದರು.
ಮಾಜಿ ಸಚಿವ ವರ್ತೂರು ಪ್ರಕಾಶ್, ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದಅರುಣ್‌ಪ್ರಸಾದ್, ಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್ ಇತರರು ಅತಿಥಿಗಳಾಗಿ ಆಗಮಿಸಿ ನೂತನ ವಧುವರರನ್ನು ಆಶೀರ್ವದಿಸಿದರು.
ಮೊದಲ ಮದುವೆಗೆ ಅಡ್ಡಿ, ಬೆದರಿಕೆ: ಸಂಘಟನೆ 5 ವರ್ಷದಲ್ಲಿ 100 ಪ್ರೇಮ ವಿವಾಹ ಸುಗಮವಾಗಿ ನಡೆಸಿದ್ದು, ಅಡ್ಡಿ ಆತಂಕಗಳು ಇರಲೇ ಇಲ್ಲ ಎಂದೇನಿಲ್ಲ. ಏಕೆಂದರೆ, ಎಎಸ್‌ಎಸ್‌ಕೆ ಮಾಡಿಸಿದ್ದ ಮೊದಲ ಮದುವೆಯಲ್ಲಿಯೇ ಅಡ್ಡಿ ಆತಂಕ, ಬೆದರಿಕೆಗಳನ್ನು ಎದುರಿಸಬೇಕಾಗಿತ್ತು. ಇದ್ಯಾವುದನ್ನು ಲೆಕ್ಕಿಸದೆ ಕೆ.ಎಂ.ಸಂದೇಶ್ ಪ್ರೇಮಿಗಳನ್ನು ವಿವಾಹ ಬಂಧನಕ್ಕೊಳಪಡಿಸುವಲ್ಲಿ ಯಶಸ್ವಿಯಾಗಿದ್ದರು.
ಮದುವೆ ಆಗುತ್ತಿದ್ದಂತೆಯೇ ನವ ದಂಪತಿಗಳೊಂದಿಗೆ ಗಲ್‌ಪೇಟೆ ಠಾಣೆಗೆ ತೆರಳಿ ಕಾನೂನಿನ ರಕ್ಷಣೆ ಕೊಡಿಸುವಲ್ಲಿಯೇ ಸಫಲವಾಗಿದ್ದರು.
ಅಂತರ್ಜಾತಿಗೆ ಆದ್ಯತೆ: ಅಂಬೇಡ್ಕರ್ ಸೇವಾ ಸಮಿತಿ ಈವರೆಗೂ ನಡೆಸಿರುವ 100 ಜೋಡಿ ವಿವಾಹಗಳು ಅಂತರ್ಜಾತಿ ಆಗಿರುವುದು ವಿಶೇಷ. ಇಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರೇಮಿಗಳು ಸಂಘಟನೆಯ ಸಹಾಯ ಕೇಳುತ್ತಿದ್ದಾರೆ. ಸಮಾಜದಲ್ಲಿರುವ ಜಾತಿ ವ್ಯವಸ್ಥೆ ತೊಲಗಬೇಕಾದರೆ ಅಂತರ್ಜಾತಿ ವಿವಾಹ ಸಮಾಜದಲ್ಲಿ ಹೆಚ್ಚಾಗಿ ನಡೆಯಬೇಕೆಂದು ಅಂಬೇಡ್ಕರ್ ಪ್ರತಿಪಾದಿಸಿದ್ದರು. ಈ ಹಿನ್ನೆಲೆಯಲ್ಲಿ ಜಾತಿರಹಿತ ಸಮಾಜ ನಿರ್ಮಾಣದ ಗುರಿ ಇಟ್ಟುಕೊಂಡೇ ಅಂತರ್ಜಾತಿ ವಿವಾಹವನ್ನು ಎಎಸ್‌ಎಸ್‌ಕೆ ಹೋರಾಟದ ಭಾಗವಾಗಿಸಿಕೊಂಡಿದೆ.
ಮದುವೆ ನಂತರವೂ ಸಂಘಟನೆ ಬೆಂಬಲ : ಮದುವೆ ನಂತರ ಪೊಲೀಸರಿಗೂ ಮಾಹಿತಿನೀಡಲಾಗುತ್ತದೆ. ರಕ್ಷಣೆ ಕೋರಲಾಗುತ್ತದೆ. ಆನಂತರ ಸಂಘಟನೆಯ ಮೂಲಕವೇ ಯುವಕ, ಯುವತಿಯ ತಂದೆ ತಾಯಿಯನ್ನು ಭೇಟಿ ಮಾಡಿ ಪ್ರೇಮ ವಿವಾಹ ಕುರಿತಂತೆ ಮನವೊಲೈಸುವ ಕೆಲಸವೂ ಆಗುತ್ತದೆ. ಒಂದು ವೇಳೆ ತಂದೆ ತಾಯಿ ಒಪ್ಪದಿದ್ದರೆ ಸಂಘಟನೆಯಿಂದಲೇ ತಾತ್ಕಾಲಿಕವಾಗಿ ಮನೆ ಮಾಡಿಸಿ ಬದುಕಲು ಅವಕಾಶ ಕಲ್ಪಿಸಲಾಗುತ್ತದೆ. ಈಗಾಗಲೇ 100 ಜೋಡಿ ವಿವಾಹಗಳ ಪೈಕಿ ಒಂದೆರೆಡು ಜೋಡಿಗೆ ಈ ರೀತಿಯ ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಅಂಬೇಡ್ಕರ್ ಸೇವಾ ಸಮಿತಿಯಿಂದ ಇದುವರೆಗೂ 100 ಜೋಡಿ ಅಂತರ್‌ಜಾತಿ ವಿವಾಹ ನಡೆಸಲಾಗಿದೆ. ನೂರು ಜೋಡಿ ಸಂಘಟನೆ ಸಂಪರ್ಕದಲ್ಲಿದ್ದು, ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ.ಅಂತರ್‌ಜಾತಿ ವಿವಾಹ ನಡೆಸುವಾಗಎದುರಾಗುವ ಸಮಸ್ಯೆಗಳನ್ನು ಇದುವರೆಗೂ ಸಮರ್ಥವಾಗಿ ಎದುರಿಸಲಾಗಿದೆ. -ಕೆ.ಎಂ.ಸಂದೇಶ್, ಎಎಸ್‌ಎಸ್‌ಕೆ, ಸಂಸ್ಥಾಪಕ ಅಧ್ಯಕ್ಷ
-ಕೆ.ಎಸ್.ಗಣೇಶ್