Advertisement

ಗ್ರಾಮೀಣ ರೈತ‌ರೊಂದಿಗೆ ಸಂವಾದ

07:11 AM Jun 20, 2019 | Team Udayavani |

ತೆಕ್ಕಟ್ಟೆ: ಉಡುಪಿ ಜಲ್ಲಾ ಪಂಚಾಯತ್‌ ಮತ್ತು ಕೃಷಿ ಇಲಾಖೆ ಕುಂದಾಪುರ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಹಾಗೂ ತಾಲೂಕಿನ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಕುಂದಾಪುರ ಹೋಬಳಿ ಮಟ್ಟದ ಕೃಷಿ ಅಭಿಯಾನ-2019 ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಕಾರ್ಯಕ್ರಮದ ರೈತರರೊಂದಿಗೆ ಸಂವಾದವು ಕೊರ್ಗಿ ಗ್ರಾ. ಪಂ. ವಠಾರದಲ್ಲಿ ಜರಗಿತು.

Advertisement

ಪಂಚಾಯತ್‌ ಅಧ್ಯಕ್ಷೆ ಗಂಗೆ ಕುಲಾಲ್ತಿ ಅಧ್ಯಕ್ಷತೆ ವಹಿಸಿ, ಗ್ರಾಮೀಣ ಭಾಗದ ರೈತ ಮನೋಬಲ ಹಾಗೂ ಹೊಸತನಗಳಿಗೆ ಪ್ರೇರಣೆ ನೀಡುವ ನಿಟ್ಟಿನಿಂದ ಇಂತಹ ಸಂವಾದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಸರಕಾರ ಯೋಜನೆ ಹಾಗೂ ಇಲ್ಲಿನ ಕೃಷಿ ಪದ್ಧತಿಗೆ ಅನುಗುಣವಾಗಿ ಭತ್ತದ ಕೃಷಿ ಸಮೃದ್ಧಿಗೊಳಿಸುವ ಬಗ್ಗೆ ಚಿಂತನೆ ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೃಷಿ ವಿಜ್ಞಾನಿ ಚೈತನ್ಯ, ರಂಜಿತ್‌, ಕೃಷಿ ಅಧಿಕಾರಿ ಸುನಿಲ್‌ ನಾಯಕ್‌, ಸಹಾಯಕ ಕೃಷಿ ಅಧಿಕಾರಿ ಪರಶುರಾಮ, ತೋಟಗಾರಿಕೆ ಇಲಾಖೆಯ ಮಧುಕರ, ಪಂ. ಕಾರ್ಯದರ್ಶಿ ದಿನೇಶ ಶೆಟ್ಟಿ, ಸಿಬಂದಿ ಉಪಸ್ಥಿತರಿದ್ದರು.ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸುಧಾಕರ ಶೆಟ್ಟಿ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next