Advertisement

ನವಲಿ ಡ್ಯಾಂ ನಿರ್ಮಾಣಕ್ಕೆ 1000 ಕೋಟಿ  ಶೀಘ್ರ ಟೆಂಡರ್ ಗೆ ಅಂತರರಾಜ್ಯ ಸಭೆ: ಶಾಸಕ ದಡೇಸೂಗೂರು

05:30 PM Mar 05, 2022 | Team Udayavani |

ಗಂಗಾವತಿ: ತುಂಗಭದ್ರಾ ಡ್ಯಾಂನಲ್ಲಿ ತುಂಬಿರುವ ಸುಮಾರು 37 ಟಿಎಂಸಿ ಹೂಳಿನಿಂದಾಗಿ ಡ್ಯಾಂ ನಲ್ಲಿ ಹೆಚ್ಚು ನೀರು ಸಂಗ್ರಹವಾಗದೇ ನದಿಯ ಮೂಲಕ ಸಮುದ್ರ ಸೇರುತ್ತಿದೆ. ಇದನ್ನು ತಪ್ಪಿಸಲು ನವಲಿ ಹತ್ತಿರ ಸಮನಾಂತರ ಜಲಾಶಯ ನಿರ್ಮಿಸುವ ಯೋಜನೆ ರೂಪಿಸಲಾಗಿದ್ದು ಶೀಘ್ರ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಜತೆ ಒಪ್ಪಂದ ಮಾಡಿಕೊಂಡು ಕೇಂದ್ರ ಸರಕಾರದ ನಿರಾಪೇಕ್ಷಣಾ ಪತ್ರ ಪಡೆದು ಇದೇ ಸರಕಾರದ ಅವಧಿಯಲ್ಲಿ ಜಾಗತಿಕ ಮಟ್ಟದ ಟೆಂಡರ್ ಕರೆಯಲಾಗುತ್ತದೆ ಎಂದು ಕನಕಗಿರಿ ಶಾಸಕ ದಡೇಸೂಗೂರು ಬಸವರಾಜ ಹೇಳಿದರು.

Advertisement

ಅವರು ನಗರದ ಅಶೋಕ ಹೊಟೇಲ್ ನಲ್ಲಿ ಮರಳಿ, ಸಿದ್ದಾಪೂರ ಹೋಬಳಿಯ ಬಿಜೆಪಿ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ತುಂಗಭದ್ರಾ ಡ್ಯಾಂನಲ್ಲಿ ತುಂಬಿರುವ ಹೂಳು ತೆಗೆಯುವುದು ಅವೈಜ್ಞಾನಿಕ  ಎಂದು ತಜ್ಞರು ವರದಿ ಕೊಟ್ಟ ನಂತರ ಮಳೆಗಾಲದಲ್ಲಿ ನದಿ ಮೂಲಕ ಸಮುದ್ರ ಸೇರುವ ನೀರನ್ನು ಉಳಿತಾಯ ಮಾಡಿ ಕೊಪ್ಪಳ ರಾಯಚೂರು ಜಿಲ್ಲೆಯ ಅಚ್ಚುಕಟ್ಟು ರೈತರಿಗೆ ನೀರೊದಗಿಸಲು ನವಲಿ ಸಮನಾಂತರ ಜಲಾಶಯ ನಿರ್ಮಾಣದ ಡಿಪಿಆರ್ ಸಿದ್ದ ಮಾಡಲಾಗಿದ್ದು ಸದ್ಯ ರಾಜ್ಯ ಬಜೆಟ್ ನಲ್ಲಿ 1000 ಕೋಟಿ ಅನುದಾನ ಮೀಸಲಿರಿಸಲಾಗಿದೆ. ಅಂತರರಾಜ್ಯ ಒಪ್ಪಿಗೆ ನಂತರ ಕಾಮಗಾರಿಗೆ ವೇಗ ಸಿಗಲಿದೆ. ರೈತರ ದಶಕಗಳ ಕನಸು ನನಸು ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿಗೆ ಸ್ಪಂದಿಸಿ 1000 ಕೋಟಿ ರೂ. ಕೊಟ್ಟಿರುವುದು ಇಡೀ ಕ್ಷೇತ್ರ ಮತ್ತು ಅಚ್ಚುಕಟ್ಟು ರೈತರಿಗೆ ಉಪಯೋಗವಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಪರಶುರಾಮ ಜಂತಗಲ್, ವೀರನಗೌಡ, ಚನ್ನಬಸವ, ಬರಗೂರು ನಾಗರಾಜ ಸೇರಿ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next