Advertisement
ಕ್ರೀಡಾ ಭಾರತಿ ಮಂಗಳೂರು ಘಟಕ ಹಾಗೂ ಜೈ ಹಿಂದ್ ಈಜು ಕ್ಲಬ್ ಸಹಯೋಗದಲ್ಲಿ ವಾಲಿಬಾಲ್ ಪಂದ್ಯಾಟ ಹಾಗೂ ಐದು ಜಿಲ್ಲೆಗಳ ಅಂತರ್ ಜಿಲ್ಲಾ ಈಜು ಸ್ಪರ್ಧೆ 2018 ಉದ್ಘಾಟಿಸಿ ಅವರು ಮಾತನಾಡಿದರು.
ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಅಲ್ಲಿ ಭಾರತೀಯತೆಯನ್ನು ನಿರೂಪಿಸುವುದು ಹೆಮ್ಮೆಯ ವಿಚಾರ.
ಇದಕ್ಕಾಗಿ ಕ್ರೀಡಾಪಟುಗಳನ್ನು ಉತ್ತಮ ರೀತಿಯಲ್ಲಿ ಸಜ್ಜುಗೊಳಿಸುವುದು ನಮ್ಮೆಲ್ಲರ ಕರ್ತವ್ಯ. ಜಗತ್ತಿನಲ್ಲಿ
ಭಾರತ ನಾಯಕತ್ವದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಮೊದಲ ಸ್ಥಾನ ಪಡೆದುಕೊಳ್ಳಬೇಕಾದರೆ ಎಲ್ಲ ರಂಗದಲ್ಲೂ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ ಎಂದರು. ಹಲವು ಯೋಜನೆ
ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ.
ಖಾಸಗಿ, ಸರಕಾರಿ ಉದ್ಯಮಗಳಲ್ಲಿ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದು ಒತ್ತಡ ಹೇರುತ್ತಿದೆ. ಇದನ್ನು ಕ್ರೀಡಾಪಟುಗಳು ಸದ್ಭಳಕೆ ಮಾಡಿಕೊಂಡು ದೇಶದ ಕೀರ್ತಿಯನ್ನು ಜಗತ್ತಿನಾದ್ಯಾಂತ ಪಸರಿಸಬೇಕು ಎಂದರು.
Related Articles
ಪುತ್ತೂರು ವಿವೇಕಾನಂದ ವಿದ್ಯಾ ಸಮೂಹ ಸಂಘಗಳ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ಉತ್ತಮ ಗುರಿ ಉದ್ದೇಶಗಳನ್ನಿಟ್ಟು ಮುಂದುವರಿದರೆ ಯಶಸ್ಸು. ಲಭಿಸುತ್ತದೆ. ಆದರೆ ಯಶಸ್ಸಿನ
ಮೇಟ್ಟಿಲೇರುತ್ತಿದ್ದಂತೆ ಅಹಂಕಾರವನ್ನು ತಲೆಯಲ್ಲಿ ತುಂಬಿಕೊಂಡರೆ ಗೆಲುವು ನಮ್ಮಿಂದ ದೂರವಾಗುತ್ತದೆ ಎಂದರು.
Advertisement
ಈ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸಮ್ಮಾನಿಸಲಾಯಿತು. ರಾಜ್ಯದ ಐದು ಜಿಲ್ಲೆಗಳಿಂದ 20ಕ್ಕೂ ಹೆಚ್ಚು ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿವೆ.
ಕ್ರೀಡಾಭಾರತಿಯ ಕ್ಷೇತ್ರೀಯ ಸಂಯೋಜಕ ಚಂದ್ರಶೇಖರ್ ಜಹಾಗೀರ್ ದಾರ್ ವಹಿಸಿದ್ದರು. ಚಲನಚಿತ್ರ ನಟಿ ತಾರಾ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಡಾ| ಪಿ. ವಾಮನ ಶೆಣೈ, ಮೇಯರ್ ಕವಿತಾ ಸನಿಲ್, ಸ್ಥಾಯಿ ಸಮಿತಿ ಅಧ್ಯಕ್ಷೆ ಸಬಿತಾ ಮಿಸ್ಕಿತ್, ಸ್ಥಳೀಯ ಕಾರ್ಪೊರೇಟರ್ ಜಯಂತಿ ಆಚಾರ್, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿ’ಸೋಜಾ, ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಅಲೋಶಿಯಸ್ ಡಿ’ಸೋಜಾ, ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಲಿಲ್ಲಿ ಪಾಯಸ್, ಮಂಗಳೂರು ಈಜುಕೊಳದ ವ್ಯವಸ್ಥಾಪಕ ರಮೇಶ್ ಬಿಜೈ, ಕ್ರೀಡಾ ಭಾರತಿಯ ಅಧ್ಯಕ್ಷ ಕರಿಯಪ್ಪ ರೈ, ಮಾಜಿ ಮೇಯರ್ ಶಶಿಧರ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಕ್ರೀಡಾಭಾರತಿಯ ಗೌರವ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ ಸ್ವಾಗತಿಸಿದರು.