Advertisement

ಶಂಕಿತರ ಮೇಲೆ ತೀವ್ರ ನಿಗಾ

01:02 PM Apr 03, 2020 | Suhan S |

ಬೆಳಗಾವಿ: ಹೊರ ದೇಶ ಹಾಗೂ ಹೊರ ರಾಜ್ಯಗಳಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ 3,800 ಜನರು ಬಂದಿದ್ದಾರೆ. ಈ 3800 ಜನರ ಮೇಲೆ ನಿಗಾ ಇಡಲು ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯತಿಗಳಿಂದ ಟಾಸ್ಕ್ ಫೋರ್ಸ್‌ ರಚನೆ ಮಾಡಲಾಗಿದ್ದು ಇವರೆಲ್ಲರನ್ನೂ ಹೋಮ್‌ ಕ್ವಾರಂಟೆ„ನ್‌ದಲ್ಲಿ ಇಡಲಾಗಿದೆ. ಆದರೆ ಅವರು ಕ್ವಾರಂಟೆ„ನ್‌ ನಲ್ಲಿ ಇದ್ದಾರೊ ಇಲ್ಲವೋ ಎಂಬುದರ ಕುರಿತು ತೀವ್ರ ನಿಗಾವಹಿಸಬೇಕು ಎಂದು ಶಾಸಕಿ ಲಕ್ಷ್ಮೀ ಹೆಬ್ಟಾಳಕರ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಬೆಳಗಾವಿ ತಾಲೂಕಾ ಪಂಚಾಯತ ಸಭಾಗೃಹದಲ್ಲಿ ಗುರುವಾರ ಕಾರ್ಯಪಡೆ ಸಮಿತಿ ಸಭೆ ನಡೆಸಿದ ಅವರು ಕೋವಿಡ್ 19 ದಿಂದಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಾಗಿರುವ ಪರಿಣಾಮ, ಮುಂಜಾಗ್ರತಾ ಕ್ರಮಗಳ ಸಮಗ್ರ ಮಾಹಿತಿ ಪಡೆದುಕೊಂಡರು. ಜಿಲ್ಲೆಯಲ್ಲಿ ಇದುವರೆಗೆ ಒಂದೂ ಪ್ರಕರಣ ವರದಿಯಾಗಿಲ್ಲ. ಇದು ಸಮಾಧಾನಪಡುವ ಸಂಗತಿ. ಆದರೆ ಇದರಿಂದ ನಿರ್ಲಕ್ಷ್ಯ ತಾಳದೆ ಹೆಚ್ಚಿನ ಮುಂಜಾಗೃತೆ ವಹಿಸಬೇಕು. ಕೋವಿಡ್ 19 ವೈರಸ್‌ ವಿರುದ್ಧ ನಡೆಯುತ್ತಿರುವ ಸಮರದಲ್ಲಿ ಕುಟುಂಬ ಸೇರಿದಂತೆ ಯಾವುದೇ ಚಿಂತೆ ಮಾಡದೇ ಸರ್ಕಾರದ ಕೆಲಸ ದೇವರ ಕೆಲಸ ಎಂದುಕೊಂಡು ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಮದ್ಯದಂಗಡಿ ಬಂದ್‌ ಆಗಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಕಳ್ಳಭಟ್ಟಿ ಹಾವಳಿ ಹೆಚ್ಚಾಗಿದೆ. 10 ರೂಪಾಯಿಗೆ ಸಿಗುತ್ತಿದ್ದ ಪ್ಯಾಕೆಟ್‌ ಈಗ 30 ರೂಪಾಯಿಗೆ ಮಾರಾಟವಾಗುತ್ತಿದೆ. ಇಂತಹ ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸಬೇಕು ಮತ್ತು ಕಳ್ಳಭಟ್ಟಿ ಮಾರಾಟ ಮಾಡುವವರ ವಿರುದ್ಧ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ತಾಲೂಕಾ ಪಂಚಾಯತ ಅಧ್ಯಕ್ಷ ಶಂಕರಗೌಡ ಪಾಟೀಲ್‌, ಬೆಳಗಾವಿ ತಾಲೂಕು ಟಾಸ್ಕ್ ಫೋರ್ಸ್‌ ಅಧ್ಯಕ್ಷ ಪ್ರೀತಂ ನಸಲಾಪುರೆ, ಕಾರ್ಯ ನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಕಲಾದಗಿ, ತಹಶೀಲ್ದಾರ್‌ ಆರ್‌.ಕೆ. ಕುಲಕರ್ಣಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next