ಬನ್ನೂರು: ಉತ್ತಮ ನಾಗರಿಕ ಸೌಲಭ್ಯ ಹಾಗೂ ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ಬಜೆಟ್ ಮಂಡಣೆ ಮಾಡಲಾಗಿದ್ದು, ಬನ್ನೂರು ಪುರಸಭೆಯದ್ದು, ಉಳಿತಾಯ ಬಜೆಟ್ ಆಗಿದೆ ಎಂದು ಪುರಸಭೆ ಅಧ್ಯಕ್ಷೆ ಮಂಜುಳಾ ಶ್ರೀನಿವಾಸ್ ತಿಳಿಸಿದರು.
ಬನ್ನೂರಿನ ಪುರಸಭೆಯಲ್ಲಿ ಮಂಗಳವಾರ ನಡೆದ 2018-19ನೇ ಸಾಲಿನ ಆಯವ್ಯಯ ಅಂದಾಜು ಪಟ್ಟಿಯನ್ನು ಮಂಡಿಸಿ ಮಾತನಾಡಿದ ಅವರು, ಪುರಸಭೆಯಲ್ಲಿ ಆರಂಭಿಕ ನಗದು ಮತ್ತು ಬ್ಯಾಂಕ್ ಶುಲ್ಕ 1,49,03,036 ಇದ್ದು, 2017-18ನೇ ಸಾಲಿನ ಮಾರ್ಚ್ ಅಂತ್ಯಕ್ಕೆ ಆಯವ್ಯಯದಲ್ಲಿ ನಾಗರಿಕ ಸೌಲಭ್ಯಗಳಾದ ರಸ್ತೆ, ಒಳಚರಂಡಿ, ಚರಂಡಿ, ಬೀದಿದೀಪ, ಸ್ವತ್ಛತೆ ಹಾಗೂ ಪ್ರಸಕ್ತ ಸಾಲಿನಲ್ಲಿ ಆಸ್ತಿ ತೆರಿಗೆ,
ನೀರಿನ ತೆರಿಗೆ, ಉದ್ದಿಮೆ ಪರವಾನಿಗೆ, ಖಾತಾ ನಕಲು, ಖಾತೆ ಬದಲಾವಣೆ, ಅಭಿವೃದ್ಧಿ ಶುಲ್ಕಗಳು, ಮಳಿಗೆ ಬಾಡಿಗೆ, ಅನುಪಯುಕ್ತ ವಸ್ತುಗಳ ಮಾರಾಟ , ಬ್ಯಾಂಕಿನ ಮೇಲಿನ ಬಡ್ಡಿ, ದಂಡಗಳು ಹಾಗೂ ಸರ್ಕಾರದಿಂದ ಅಭಿವೃದ್ಧಿಗಾಗಿ ಬಂದ ಅನುದಾನ ಮತ್ತು ನೌಕರರ ವೇತನಕ್ಕಾಗಿ ಬಿಡುಗಡೆಯಾದ ಅನುದಾನದಿಂದ ಬಂದಂತ ಒಟ್ಟು ಮೊತ್ತ 16,17,84,536 ರೂ.ಗಳ ಅದಾಯ ನಿರೀಕ್ಷೆ ಮಾಡಲಾಗಿದೆ ಎಂದರು.
ಸಾರ್ವಜನಿಕ ಆರೋಗ್ಯ ಮತ್ತು ಅನುಕೂಲತೆ, ಕಸ ಸಾಗಣೆ, ರಸ್ತೆ ಕಾಮಗಾರಿ, ಚರಂಡಿ ಕಾಮಗಾರಿಗಳು, ವಿದ್ಯುತ್ ಬಿಲ್ಲು, ಕುಡಿವ ನೀರಿನ ವ್ಯವಸ್ಥೆ, ಸಾರ್ವಜನಿಕ ಉದ್ಯಾನವನಗಳ ಅಭಿವೃದ್ಧಿ ವೆಚ್ಚ, ಸ್ಮಶಾನ ಅಭಿವೃದ್ಧಿ,ನೌಕರರ ವೇತನ ಇತರೆ ವೆಚ್ಚಗಳಿಗಾಗಿ 15,63,39,575 ರೂ.ಗಳನ್ನು ಖರ್ಚು ಮಾಡಲು ಅಂದಾಜಿಸಿದ್ದು, ವಾರ್ಷಿಕವಾಗಿ 54,44,961 ರುಗಳ ಉಳಿತಾಯ ಬಜೆಟ್ ಆಗಿದೆ ಎಂದು ತಿಳಿಸಿದರು.
ಮುಖ್ಯಾಧಿಕಾರಿ ಕೆ.ಎಸ್.ಗಂಗಾಧರ್, ಮಾಜಿ ಅಧ್ಯಕ್ಷ ಮುನಾವರ್ ಪಾಷ, ಉಪಾಧ್ಯಕ್ಷ ಬಿ.ಎಸ್.ರಾಮಲಿಂಗೇಗೌಡ, ಶಂಕರ್, ಮುರಳಿ, ಬಿ.ಸಿ.ಕೃಷ್ಣ, ರಮೇಶ್, ರಾಜುಗೌಡ, ಬೈರವಮೂರ್ತಿ,ಸುಮಿತ್ರ, ಆಶಾರವಿಕುಮಾರ್, ಅಸದ್ ಮೈಮುನ್ನಿಸ್ಸಾ, ರೇಣುಕ, ಬಿ.ಎಸ್.ರವೀಂದ್ರ ಕುಮರ್, ಚಿನ್ನು, ಸೌಜನ್ಯಶೀಲ. ವಿನಯ್, ನಸೀಮ ಅಜುಂ, ಮಂಜುನಾಥ್, ಗುರುಚಕ್ರವರ್ತಿ, ಆಘಾಜ್, ಕಾಂತರಾಜು, ಲತಾ, ಜಮುನಾ, ಸಂತೋಷ್ ಕುಮಾರ್, ನಂದಿನಿ ಸೇರಿದಂತೆ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.