Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇದನ್ನು ತಿಳಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹತಾಶರಾಗಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಲ್ಲಿ ಮುತ್ಸದಿತನ ಕಾಣುತ್ತಿಲ್ಲ ಎಂದರು.
Related Articles
Advertisement
ಕೃಷಿ ಮಸೂದೆಗಳಲ್ಲಿ ಯಾವ ರೈತ ವಿರೋಧಿ ನೀತಿ ಇತ್ತು ಎಂದು ಅದನ್ನು ವಿರೋಧಿಸಿದವರು ಸ್ಪಷ್ಟಪಡಿಸಲಿ. ಕೆಲವು ರಾಜ್ಯಗಳಲ್ಲಿ ಮನವರಿಕೆ ಮಾಡಲು ಆಗಲಿಲ್ಲ ಹಾಗಾಗಿ ಕೃಷಿ ಮಸೂದೆ ಹಿಂಪಡೆಯಲಾಗಿದೆ. ಮಸೂದೆ ಹಿಂಪಡೆದರೂ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳುತ್ತಿರುವ ಹಿಂದಿನ ಹುನ್ನಾರ ಏನು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಗೆ ಜನಬೆಂಬಲವೇ ಇಲ್ಲ. ವೇದಿಕೆ ಮೇಲೆ ಕುರ್ಚಿಗಾಗಿಯೇ ಜಗಳವಾಡುತ್ತಾರೆ. ಹೀಗಾಗಿಯೇ ಯಾರೂ ವೇದಿಕೆ ಮೇಲೆ ಕೂರಬಾರದು ಎಂಬ ನಿಯಮವನ್ನು ಕಾಂಗ್ರೆಸ್ ನವರು ತಂದುಕೊಂಡಿದ್ದಾರೆ. ಇದರ ಹಿಂದೆ ಇನ್ನೊಂದು ಕಾರಣವೂ ಇದೆ. ಕೆಲವೊಮ್ಮೆ ಕಾಂಗ್ರೆಸ್ ಕಾರ್ಯಕ್ರಮದ ವೇದಿಕೆ ಮೇಲೆಯೇ ಹೆಚ್ಚುಜನ ಇರುತ್ತಾರೆ. ವೇದಿಕೆ ಕೆಳಗೆ ಜನರೇ ಇರುವುದಿಲ್ಲ. ಹೀಗಾಗಿ ಕಾಂಗ್ರೆಸ್ ಈ ನಿಯಮ ಜಾರಿಗೆ ತಂದುಕೊಂಡಿರಬಹುದು ಎಂದು ಸಿ.ಟಿ.ರವಿ ವ್ಯಂಗ್ಯವಾಡಿದರು