Advertisement

ಹುತಾತ್ಮತೆಯ ಅರ್ಥ ತಿಳಿಯದವರಿಂದ ಮಾತ್ರ ಇಂತಹ ಅವಮಾನ ಮಾಡಲು ಸಾಧ್ಯ : ರಾಹುಲ್ ಗರಂ

11:59 AM Aug 31, 2021 | Team Udayavani |

ನವ ದೆಹಲಿ : ಜಲಿಯನ್ ವಾಲಾಬಾಗ್ ಸ್ಮಾರಕವನ್ನು ಕೇಂದ್ರ ಸರ್ಕಾರ ನವಿಕರಿಸುವುದು ಹುತಾತ್ಮರಿಗೆ ಅವಮಾನ. ಹುತಾತ್ಮತೆಯ ಅರ್ಥ ತಿಳಿಯದವರಿಂದ ಮಾತ್ರ ಇಂತಹ ಅವಮಾನ ಮಾಡಬಹುದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

Advertisement

ತಮ್ಮ ಅಧಿಕೃತ ಟ್ವೀಟರ್ ಖಾತೆಯ ಮೂಲಕ, ಕೇಂದ್ರ ಸರ್ಕಾರ ಮಾಡಲು ಹೊರಟಿರುವ ಸ್ಮಾರಕದ ನವೀಕರಣದ ವರದಿಯೊಂದನ್ನು ಟ್ಯಾಗ್ ಮಾಡಿದ ರಾಹುಲ್ ಗಾಂಧಿ, ನಾನು ಹುತಾತ್ಮರ ಮಗ. ಹುತಾತ್ಮರ ಅವಮಾನವನ್ನು ನಾನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ನಾವು ಈ ಅಸಭ್ಯ ಕ್ರೌರ್ಯದ ವಿರುದ್ಧ ಇದ್ದೇವೆ ಎಂದು ಅವರು ಗುಡುಗಿದ್ದಾರೆ.

ಇದನ್ನೂ ಓದಿ : ಕಾಬೂಲ್ ತೊರೆದ ಅಮೆರಿಕ ಸೇನಾ ಪಡೆ : ಗಾಳಿಯಲ್ಲಿ ಗುಂಡು ಹಾರಿಸಿ ತಾಲಿಬಾನಿಗಳ ಸಂಭ್ರಮ 

ಅಮೃತ್ ಸರದಲ್ಲಿರುವ ಜಲಿಯನ್ ವಾಲಾ ಬಾಗ್ ಹುತಾತ್ಮರ ಸ್ಮಾರಕವನ್ನು ನವೀಕರಿಸಲು ಹೊರಟಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಇದು ‘ಇತಿಹಾಸವನ್ನು ಅಳಿಸುವ ಕೇಂದ್ರ ಸರ್ಕಾರದ ವ್ಯವಸ್ಥಿತ ಯೋಜನೆ’ ಎಂದು ಭಾರಿ ಟೀಕೆ ಕೇಳಿ ಬರುತ್ತಿದೆ.

ಕಳೆದ ಶನಿವಾರ, ಪ್ರಧಾನಿ ನರೇಂದ್ರ ಮೋದಿ ಜಲಿಯನ್ ವಾಲಾಬಾಗ್ ಸ್ಮಾರಕದ ನವೀಕರಿಸಿದ ಸಂಕೀರ್ಣವೊಂದನ್ನು ಉದ್ಘಾಟಿಸಿದ್ದರು. ಮಾತ್ರವಲ್ಲದೇ, ಪಿಎಂ ಮೋದಿ ಸ್ಮಾರಕದಲ್ಲಿ ಮ್ಯೂಸಿಯಂ ಗ್ಯಾಲರಿಗಳನ್ನು ಉದ್ಘಾಟಿಸಿದ್ದರು.

Advertisement

ವರ್ಚುವಲ್ ಸಮಾರಂಭದಲ್ಲಿ ಮಾತನಾಡಿದ್ದ ಮೋದಿ, ಪಂಜಾಬ್ ಜನರು ದೇಶದ ವಿಭಜನೆಯಲ್ಲಿ ಬಲಿಪಶುಗಳಾಗಿದ್ದಾರೆ “ಭಾರತದ ಮೂಲೆ ಮೂಲೆಯಲ್ಲಿ ಮತ್ತು ವಿಶೇಷವಾಗಿ ಪಂಜಾಬ್ ಕುಟುಂಬಗಳಲ್ಲಿ ವಿಭಜನೆಯ ಸಮಯದಲ್ಲಿ ಏನಾಯಿತು ಎಂಬುದರ ನೋವನ್ನು ನಾವು ಇನ್ನೂ ಅನುಭವಿಸುತ್ತಿದ್ದೇವೆ” ಎಂದು ಅವರು ಹೇಳಿದರು.

ಈ ಸ್ಮಾರಕ ಸ್ಥಳವು ನಮ್ಮ ಸ್ವಾತಂತ್ರ್ಯ ಚಳುವಳಿಯ ಪ್ರಯಾಣ, ನಮ್ಮ ಪೂರ್ವಜರ ತ್ಯಾಗ ಮತ್ತು ಅಸಂಖ್ಯಾತ ಹೋರಾಟಗಳ ಬಗ್ಗೆ ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದ್ದರು.

ಏಪ್ರಿಲ್ 13, 1919 ರಂದು ಬ್ರಿಟಿಷ್ ಪಡೆಗಳು ಪ್ರತಿಭಟನಾಕಾರರ ಮೇಲೆ ಮನಬಂದಂತೆ ಗುಂಡು ಹಾರಿಸಿದರು. 1,000 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದರು. ನೂರಾರು ಮಂದಿ ಸಾವನ್ನಪಿಸಿದ್ದರು.

ಇದನ್ನೂ ಓದಿ : ರಣಜಿ ಟ್ರೋಫಿ: ಒಂದೇ ಗುಂಪಿನಲ್ಲಿ ಕರ್ನಾಟಕ, ಮುಂಬೈ, ದೆಹಲಿ ತಂಡಗಳು

Advertisement

Udayavani is now on Telegram. Click here to join our channel and stay updated with the latest news.

Next