Advertisement
ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ಜೆ.ಜೆ.ಎಂ. ಶುದ್ಧ ಕುಡಿಯುವ ನೀರಿನ ಕಾಮಗಾರಿ ಅನುಷ್ಠಾನದ ಲೋಪಗಳ ಬಗ್ಗೆ ಪರಾಮರ್ಶಿಸಲು ಜಿ.ಪಂ. ಸಿ.ಇ.ಓ. ಹಾಗೂ ಸ್ಥಳಿಯ ಶಾಸಕರ ನೇತೃತ್ವದಲ್ಲಿ ಗಂಗಾವತಿ ತಾಲೂಕು ಪಂಚಾಯತ್ ಸಭಾಂಗಣ ಮಂಥನದಲ್ಲಿ ಸೆ.1ರ ಶುಕ್ರವಾರ ಬೆಳಿಗ್ಗೆ 11.20ಕ್ಕೆ ಸಭೆ ಕರೆಯಲಾಗಿತ್ತು.
Related Articles
Advertisement
ಗಂಗಾವತಿ ಪತ್ರಕರ್ತರು ಮತ್ತು ಮಾಧ್ಯಮದವರನ್ನು ಸಭೆಯಿಂದ ಹೊರಗಡೆ ಕಳುಹಿಸಿದ ಜಿ.ಪಂ. ಸಿ.ಇ.ಓ. ಕೊಪ್ಪಳ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಸಭೆಯಲ್ಲಿ ಶಾಸಕರೊಂದಿಗೆ ಅವರ ಬೆಂಬಲಿಗರೂ ಸಹ ಪಾಲ್ಗೊಂಡಿದ್ದು, ಅವರನ್ನು ಸಭೆಯಲ್ಲಿ ಉಳಿಸಿಕೊಂಡು ಪತ್ರಕರ್ತರು ಮತ್ತು ಮಾಧ್ಯಮದವರನ್ನು ಹೊರಗಡೆ ಕಳುಹಿಸಿರುವುದು ಖಂಡನಿಯವಾಗಿದೆ ಎಂದರು.
ಪತ್ರಕರ್ತರು ಮತ್ತು ಮಾಧ್ಯಮದವರಿಗೆ ಅವಮಾನ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಸರ್ಕಾರ ಪತ್ರಕರ್ತರು ಮತ್ತು ಮಾಧ್ಯಮದವರ ಕೆಲಸ ಕಾರ್ಯಗಳನ್ನು ಮಾಡಲು ಅನುವು ಮಾಡಿಕೊಡುವುದರೊಂದಿಗೆ ಹಕ್ಕು ಮತ್ತು ಕರ್ತವ್ಯಗಳನ್ನು ಕಾಪಾಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಕೆ.ನಿಂಗಜ್ಜ, ನಾಗರಾಜ ಇಂಗಳಗಿ, ರಾಮಮೂರ್ತಿ ನವಲಿ, ಸಿ.ಮಹಾಲಕ್ಷ್ಮಿ, ಎಂ.ಜೆ.ಶ್ರೀನಿವಾಸ, ಹರೀಶ ಕುಲಕರ್ಣಿ, ವಿಶ್ವನಾಥ ಬೆಳಗಲ್ ಮಠ, ಜೋಗದ ಕೃಷ್ಙಪ್ಪ ನಾಯಕ, ಜಿ.ತಿರುಪಾಲಯ್ಯ, ರವಿ ಸಾಕ್ಷಿ, ದೇವದಾನಂ, ಮುಕ್ಕುಂದಿ ಚಂದ್ರಶೇಖರ, ವಿಜಯಕುಮಾರ್, ಸೈಯದ್ ಅಲಿ, ಗಾದಿಲಿಂಗಪ್ಪ ನಾಯಕ, ಜೋಗಿನ್ ರಮೇಶ, ಮಲ್ಲಿಕಾರ್ಜುನ ಗೋಟೂರು, ಶಿವಪ್ಪ ನಾಯಕ, ವೆಂಕಟೇಶ ಮಾಂತ, ಚನ್ನಬಸವ ಮಾನ್ವಿ, ವೆಂಕಟೇಶ ಉಪ್ಪಾರ, ಮಂಜುನಾಥ ಗುಡ್ಲಾನೂರು, ಸಿ.ಡಿ. ರಾಮಕೃಷ್ಣ, ಎಂ.ಡಿ.ಗೌಸ್, ಎಂ.ಡಿ.ಅಲಿ.ಮಂಜುನಾಥ ಹೋಸ್ಕೇರಿ, ಕೆ.ಎಂ.ಶರಣಯ್ಯ, ಹನುಮೇಶ ಭಟಾರಿ, ನಾಗರಾಜ ಕೊಟ್ನೆಕಲ್, ಹೊಸಳ್ಳಿ ರಗಡಪ್ಪ ಸೇರಿ ಪತ್ರಕರ್ತರು ಮಾಧ್ಯಮದವರಿದ್ದರು.