Advertisement
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರಿಗೆ ಕರೆ ಮಾಡಿರುವ ವ್ಯಕ್ತಿ ರೈತನಲ್ಲ, ಶಿಕ್ಷಕ ಎಂದು ಟೀಕೆ ಮಾಡುತ್ತಿರುವುದು ಸರಿಯಲ್ಲ. ಒಬ್ಬ ಶಿಕ್ಷಕರಾಗಿ ಕೃಷಿ ಚಟುವಟಿಕೆಗೆ ಗೊಬ್ಬರ ಬೇಕಾಗುವುದಿಲ್ಲವೇ? ಸಮರ್ಪಕ ಉತ್ತರ ನೀಡುವುದನ್ನು ಬಿಟ್ಟು ಏಕ ವಚನದಲ್ಲಿ ಮಾತನಾಡಿ, ರೈತ ಸಮೂಹಕ್ಕೆ ಅವಮಾನಿಸಿದ್ದಾರೆ. ಅಷ್ಟೇ ಅಲ್ಲ ಆಗಿರುವ ತಪ್ಪನ್ನು ಸಮರ್ಥನೆ ಮಾಡಿಕೊಳ್ಳುವುದು, ಇದರ ಹಿಂದೆ ರಾಜಕೀಯ ಷಡ್ಯಂತ್ರ ಇದೆ ಎನ್ನುವುದು ಸರಿಯಲ್ಲ ಎಂದು ಕಿಡಿಕಾರಿದರು.
Related Articles
Advertisement
ಸುದ್ದಿಗೋಷ್ಠಿಯಲ್ಲಿ ಶಾಸಕ ರಾಜಶೇಖರ ಪಾಟೀಲ, ಎಂಎಸ್‌ಸಿ ಅರವಿಂದಕುಮಾರ ಅರಳಿ, ಪ್ರಮುಖರಾದ ಮೀನಾಕ್ಷಿ ಸಂಗ್ರಾಮ, ದತ್ತಾತ್ರಿ ಮೂಲಗೆ, ಹಣಮಂತರಾವ ಚವ್ಹಾಣ್ ಇದ್ದರು.
ಕಾಂಗ್ರೆಸ್ಸಿನಿಂದ ಬೃಹತ್ ಹೋರಾಟ ಜಿಲ್ಲೆಗೆ ಬೇಡಿಕೆಯಷ್ಟು ಗೊಬ್ಬರ ಪೂರೈಕೆ, ಬಿಎಸ್‌ಎಸ್‌ಕೆಗೆ ಕಬ್ಬು ಸಾಗಿಸಿದ ರೈತರಿಗೆ ಹಣ ಪಾವತಿ, ಕ.ಕ ಭಾಗಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ಒಂದು ವಾರದೊಳಗೆ ಬೃಹತ್ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಬಿತ್ತನೆ ಮಾಡುವಷ್ಟು ಮಳೆ ಇನ್ನೂ ಆಗಿಲ್ಲ. ಹೀಗಾಗಿ ಗೊಬ್ಬರಕ್ಕಾಗಿ ಬೇಡಿಕೆ ಬಂದಿಲ್ಲ. ಉತ್ತಮ ಮಳೆ ಬಂದರೆ ಗೊಬ್ಬರ ಖರೀದಿ ಜೋರಾಗಲಿದ್ದು, ಆ ವೇಳೆ ಕೊರತೆಯಾಗಲಿದೆ. ತಕ್ಷಣ ಸಚಿವ ಖೂಬಾ ಎಚ್ಚೆತ್ತುಕೊಂಡು ತವರು ಕ್ಷೇತ್ರಕ್ಕಾದರೂ ಬೇಡಿಕೆಯಷ್ಟು ಗೊಬ್ಬರ ಕಳುಹಿಸಬೇಕು. -ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ
ಜಿಲ್ಲೆಯ ಬಿಎಸ್‌ಎಸ್‌ಎಸ್‌ಕೆ ಕಾರ್ಖಾನೆಯಲ್ಲಿ 2021-22ರ ಹಂಗಾಮಿಯಲ್ಲಿ ಖರೀದಿ, ಮಾರಾಟ ಮತ್ತು ರಿಪೇರಿ ಹೆಸರಿನಲ್ಲಿ ಭಾರಿ ಅಕ್ರಮ ನಡೆದಿದೆ. ಈ ಬಗ್ಗೆ ಬಿಜೆಪಿ ಮುಖಂಡರೇ ಹೇಳಿಕೆ ನೀಡಿದ್ದಾರೆ. ಅವ್ಯವಹಾರ ಸಂಬಂಧದ ದೂರು ನೀಡಿದರು ಈವರೆಗೆ ಕ್ರಮಕೈಗೊಂಡಿಲ್ಲ. ಕಾರ್ಖಾನೆ ಪುನಶ್ಚೇತನ ಹಾಗೂ ರೈತರಿಗೆ ಹಣ ಪಾವತಿ ಸಂಬಂಧ ಸರ್ಕಾರದ ಮೇಲೆ ಹಲವು ಬಾರಿ ಒತ್ತಡ ಹಾಕಿದರೆ ಪ್ರಯೋಜನವಾಗಿಲ್ಲ. ಬಿಎಸ್ಸೆಸ್ಕೆ ಪುನಶ್ಚೇತನಕ್ಕೆ ಆರ್ಥಿಕ ನೆರವು ನೀಡುವುದಾಗಿ ಈ ಹಿಂದೆ ಹೇಳಿದ್ದ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮರೆತಿದೆ. –ರಾಜಶೇಖರ ಪಾಟೀಲ, ಶಾಸಕ