Advertisement
ಈಶ್ವರಮಂಗಲ ನಿವಾಸಿ ಸ್ಥಳೀಯ ರಿಕ್ಷಾ ಚಾಲಕ ಹನೀಫ್ ಬಂಧಿತ ಆರೋಪಿ. ಕೋಟಿ-ಚೆನ್ನಯರ ಹುಟ್ಟೂರು ಪುತ್ತೂರು ತಾಲೂಕಿನ ಪಡುಮಲೆಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ಸಿಗು ತ್ತಿದ್ದಂತೆ, ಅರಣ್ಯ ಇಲಾಖೆಯೂ ಯೋಜನೆಯೊಂದನ್ನು ರೂಪಿಸಿತು. ರಮಾನಾಥ ರೈ ಮುತುವರ್ಜಿಯಲ್ಲಿ ಇಲಾಖೆಯ ಜಾಗದಲ್ಲೇ ಔಷಧವನವೊಂದನ್ನು ನಿರ್ಮಿಸಿ, ಅದಕ್ಕೆ ನಾಟಿ ವೈದ್ಯೆ, ಕೋಟಿ-ಚೆನ್ನಯರ ತಾಯಿ ದೇಯಿ ಬೈದ್ಯೆತಿಯ ಹೆಸರಿಡಲಾಯಿತು. ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ನಿರ್ಮಿಸಿದ ಕಲಾಕೃತಿಗಳು ಇದೀಗ ದುರ್ಬಳಕೆಯಾಗುತ್ತಿದ್ದು, ಸಮಾಜದ ಕೆಂಗಣ್ಣಿಗೆ ಗುರಿಯಾಗಿದೆ.
Related Articles
6 ಎಕರೆ ಜಾಗದಲ್ಲಿ ದೇಯಿ ಬೈದ್ಯೆತಿ ಔಷಧವನವನ್ನು ಮುಡಿಪಿನಡ್ಕದಲ್ಲಿ ನಿರ್ಮಿಸಿ ಕಳೆದ ವರ್ಷ ಇದು ಉದ್ಘಾಟಿಸಲಾಗಿತ್ತು. ಇದರ ನಡುವೆ ಪ್ರಾಚೀನ ತುಳುನಾಡಿನ ಶೈಲಿಯನ್ನು ಹೋಲುವ ಪುಟ್ಟ ಕುಟೀರವನ್ನು ನಿರ್ಮಿಸಲಾಗಿದೆ. ಕುಟೀರದ ಮುಂಭಾಗ ದೇಯಿ ಬೈದ್ಯೆತಿ ಔಷಧ ಅರೆಯುವ ರೀತಿಯ ಮೂರ್ತಿಯನ್ನು ನಿರ್ಮಿಸಲಾಗಿದೆ. ಬದಿಯಲ್ಲಿ ಕೋಟಿ- ಚೆನ್ನಯರ ಮೂರ್ತಿಯೂ ಇದೆ. ಕುಟೀರದ ಆವರಣಕ್ಕೆ ಬರಲು ಸಾರ್ವ ಜನಿಕರಿಗೆ ಅವಕಾಶ ಕಲ್ಪಿಸ ಲಾಗಿದ್ದು, ಅದನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಆದ್ದರಿಂದ ಮೂರ್ತಿಯ ಸುರಕ್ಷತೆ ದೃಷ್ಟಿಯಿಂದ ಆವರಣದ ಒಳಗಡೆ ಪ್ರವೇಶವನ್ನು ನಿರ್ಬಂಧಿಸಬೇಕು. ಮಾತ್ರವಲ್ಲ ಸಿಬಂದಿ ನೇಮಿಸಿ, ಸೂಕ್ತ ಭದ್ರತೆ ಕಲ್ಪಿಸಬೇಕು ಎಂದು ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲ್, ಉಪಾಧ್ಯಕ್ಷ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಕಾರ್ಯ ನಿರ್ವಹಣಾಧಿಕಾರಿ ಆರ್.ಸಿ. ನಾರಾಯಣ್ ಆಗ್ರಹಿಸಿದ್ದಾರೆ.
Advertisement
ಸಾರ್ವತ್ರಿಕ ಖಂಡನೆದೇಯಿ ಬೈದ್ಯೆàತಿ ಮೂರ್ತಿಯ ಪಕ್ಕದಲ್ಲಿ ಹನೀಫ್ ಅಶ್ಲೀಲ ಭಂಗಿಯಲ್ಲಿ ಕುಳಿತುಕೊಂಡು ಫೂಟೋ ಕ್ಲಿಕ್ಕಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ. ಶನಿವಾರ ರಾತ್ರಿ ವೇಳೆ ಫೇಸ್‌ಬುಕ್ ಹಾಗೂ ವಾಟ್ಸ್ ಆ್ಯಪ್‌ನಲ್ಲಿ ಈ ಫೂಟೋ ಕಾಣಿಸಿಕೊಂಡಿದೆ. ಸಾಮಾಜಿಕ ಅಶಾಂತಿಗೆ ಕಾರಣ ವಾಗ ಬಹುದಾದ ಈ ಕೃತ್ಯದ ಬಗ್ಗೆ ಸಮಾಜದ ಎಲ್ಲ ವರ್ಗದವರಿಂದ ಸಾರ್ವತ್ರಿಕ ವಾಗಿ ಖಂಡನೆ ವ್ಯಕ್ತವಾಗಿತ್ತು. ಆರೋಪಿ ಬಂಧನಕ್ಕೆ ಆಗ್ರಹಿಸಲಾಗಿತ್ತು.