ಬೀದರ: ಬಸವಣ್ಣನವರ ಇತಿಹಾಸ ತಿರುಚಿದ 9ನೇ ತರಗತಿಯ ಪರಿಷ್ಕೃತ ಸಮಾಜ ವಿಜ್ಞಾನ ಪಠ್ಯ ಪುಸ್ತಕವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ನಗರದಲ್ಲಿ ಬುಧವಾರ ವಿವಿಧ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಕನ್ನಡಪರ ಹೋರಾಟಗಾರ ವಿರೂಪಾಕ್ಷ ಗಾದಗಿ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಅಲ್ಲಿಂದ ಜಿಲ್ಲಾಧಿ ಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದರು. ಬಳಿಕ ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತದ ಅ ಧಿಕಾರಿಗಳಿಗೆ ಸಲ್ಲಿಸಿದರು.
ಸಮಾಜ ವಿಜ್ಞಾನದ ಪಾಠದಲ್ಲಿ ಬಸವಣ್ಣನವರ ಇತಿಹಾಸವನ್ನು ತಪ್ಪು-ತಪ್ಪಾಗಿ ಬಿಂಬಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ವಿರೂಪಾಕ್ಷ, ಬಸವಣ್ಣನವರ ಅನೇಕ ಮಹತ್ವದ ವಿಷಯಗಳನ್ನು ಕೈಬಿಟ್ಟು, ಮನಬಂದಂತೆ ತಿದ್ದುಪಡಿ ಮಾಡಲಾಗಿದೆ. ಲೇಖಕ ಬಸವಣ್ಣನವರ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಿದ್ದಾರೆ. ಮಕ್ಕಳಿಗೆ ಬಸವಣ್ಣನವರ ತಪ್ಪು ಇತಿಹಾಸ ಪ್ರಕಟಿಸುವುದು ಅಕ್ಷಮ್ಯ ಅಪರಾಧ ಮಾಡಿದಂತೆ ಎಂದು ಕಿಡಿಕಾರಿದರು.
ಕೂಡಲೇ ಪರಿಷ್ಕೃತ ಪಠ್ಯವನ್ನು ತಡೆ ಹಿಡಿಯಬೇಕು. ಬಸವಣ್ಣನವರ ಕುರಿತು ಅಧ್ಯಯನ ನಡೆಸಿ, ಹೊಸ ಪಠ್ಯ ಸೇರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಪ್ರ
ತಿಭಟನೆಯಲ್ಲಿ ಕರ್ನಾಟಕ ಗಜ ಸೇನೆಯ ಜಿಲ್ಲಾಧ್ಯಕ್ಷ ಪ್ರಶಾಂತ ಭಾವಿಕಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪೀಟರ್ ಚಿಟಗುಪ್ಪಾ, ಕನ್ನಡ ನಾಡು ಹಿತರಕ್ಷಣಾ ಸಮಿತಿ ಜಿಲ್ಲಾದ್ಯಕ್ಷ ಯಾದವರಾವ್ ಗೋಖಲೆ, ಅಮೃತ ಮುತ್ತಂಗಿಕರ್, ಚಂದ್ರಶೇಖರ ಪೋಳ, ಸುನೀಲ ಎನಗುಂದಿ, ಬಳಿರಾಮ್ ಮೆತ್ರೆ, ಸ್ವಾಮಿದಾಸ ಸೊರಳ್ಳಿಕರ್, ಉತ್ತಮ ಸುತಾರ್, ಆಕಾಶ ದೊಡ್ಡಿಮನಿ ಇನ್ನಿತರರಿದ್ದರು.