Advertisement

ಸ್ವಚ್ಛತೆಗೆ ಗಮನ ಹರಿಸಲು ಸೂಚನೆ

04:45 PM Oct 22, 2020 | Suhan S |

ತಾಳಿಕೋಟೆ: ಪಟ್ಟಣದಲ್ಲಿ ಸ್ವತ್ಛತೆ ಕಡೆಗೆ ಅಧಿಕಾರಿಗಳು ಗಮನ ಹರಿಸಬೇಕು. ಸ್ವಚ್ಛತೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಇದೆ ಎಂಬ ದೂರು ಬರುತ್ತಿದ್ದು ಮುಂದೆ ಹಾಗಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಇದರ ಪರಿಣಾಮ ಬೇರೆ ಇರುತ್ತದೆ ಎಂದು ಅಧಿಕಾರಿಗಳ ಸಭೆಯಲ್ಲಿ ಎಚ್ಚರಿಸಲಾಗಿದೆ ಎಂದು ಶಾಸಕ ಎ.ಎಸ್‌. ಪಾಟೀಲ (ನಡಹಳ್ಳಿ) ತಿಳಿಸಿದರು.

Advertisement

ಪ್ರವಾಸಿ ಮಂದಿರದಲ್ಲಿ ನಡೆದ ಪುರಸಭೆ ಅಧಿಕಾರಿಗಳ ಸಭೆ ಬಳಿಕ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ತಾಳಿಕೋಟೆ ಪುರಸಭೆಗೆ ಸಂಬಂಧಪಟ್ಟಂತೆ 15 ದಿನಕ್ಕೊಮ್ಮೆ ಅಧಿಕಾರಿಗಳ ಸಭೆ ನಡೆಸಿ ಕೆಲಸದ ಪ್ರಗತಿ ಬಗ್ಗೆ ಚರ್ಚಿಸಲಾಗುವುದೆಂದು ತಿಳಿಸಿದರು.

ಪಟ್ಟಣದಲ್ಲಿ 7ರಿಂದ 8 ಸ್ಲಂ ಬಡಾವಣೆಗಳೆಂದು ಗುರುತಿಸಲಾಗಿದೆ.ಸ್ಲಂ ಬೋರ್ಡ್‌ನಿಂದ 474 ಮನೆಗಳನ್ನು ಮಂಜೂರು ಮಾಡಿಸಿದ್ದೇನೆ. ಅವರು ಮನೆಗಳನ್ನು ಈ ಯೋಜನೆಯಡಿ ಕಟ್ಟಿಸಿಕೊಳ್ಳಬಹುದು. ಸ್ಲಂ ಬಡಾವಣೆಗಳಲ್ಲಿ ಅಧಿಕಾರಿಗಳು ಸಭೆ ನಡೆಸಿ ನಿಜವಾದ ಬಡವರ್ಯಾರು ಎಂಬುದನ್ನು ಗುರುತಿಸಬೇಕು. ಯಾವುದೇ ಪ್ರಭಾವಕ್ಕೆ ಒಳಗಾಗಬಾರದೆಂದು ಸೂಚಿಸಿದ್ದೇನೆ. ನಗರದಲ್ಲಿ ಎಷ್ಟು ಜನರು ಮನೆ ಇಲ್ಲದ ಬಡವರಿದ್ದಾರೆ ಎಂಬುದನ್ನು ಗುರುತಿಸಲೂ ಕೂಡಾ ಸೂಚಿಸಿದ್ದೇನೆ. ಎಲ್ಲರಿಗೂ ವಸತಿ ಯೋಜನೆಯಡಿ ಮನೆಗಳನ್ನು ಒದಗಿಸಬೇಕೆಂಬ ತಿರ್ಮಾನ ಮಾಡಿದ್ದೇನೆ. ಪುರಸಭೆಗೆ ಸಂಬಂಧಪಟ್ಟ 23 ವಾರ್ಡ್ ಗಳಲ್ಲಿ ಸರ್ವೇ ಮಾಡಿ ಪಟ್ಟಿ ತಯಾರಿಸಲು ವಾರ್ಡ್‌ಗೆ ಒಂದು ದಿನದಂತೆ 23 ದಿನಗಳು ಕಾಲಾವಕಾಶ ನೀಡಿದ್ದೇನೆ. ಅಷ್ಟು ದಿನಗಳಲ್ಲಿ ಪಟ್ಟಿ ತಯಾರಿಸಿ ಕೊಡಲು ಸೂಚಿಸಿದ್ದೇನೆಂದ ಅವರು, ಬೀದಿ ದೀಪಗಳ ವ್ಯವಸ್ಥೆ ಸರಿಪಡಿಸಲು ಸೂಚಿಸಿದ್ದೇನೆ ಮತ್ತು ಪಟ್ಟಣದಲ್ಲಿ 50 ಗಾರ್ಡನ್‌ಗಳಿವೆ. ಅವುಗಳ ಅಭಿವೃದ್ಧಿಗೆ ಎಸ್ಟಿಮೇಂಟ್‌ ಮಾಡಿಕೊಡಲು ಸೂಚಿಸಿದ್ದೇನೆಂದರು.

ಸ್ಲಂ ಬೋರ್ಡ್‌ನಡಿ 474 ಮನೆಗಳ ಬಿಡುಗಡೆ ಮಾಡಿಸಿದಲ್ಲದೇ ಇನ್ನೂಹೆಚ್ಚುವರಿ 500 ಮನೆಗಳ ಬಿಡುಗಡೆಗೆ ಸರ್ಕಾರಕ್ಕೆ ಮಂಜೂರಾತಿಗೆ ಕೊಟ್ಟಿದ್ದೇನೆ. ಎರಡೂ ಸೇರಿ 974 ಮನೆಗಳಲ್ಲದೇ ಜಿ ಪ್ಲಸ್‌ 1 ಮಾದರಿಯ 350 ಮನೆಗಳು ಮಂಜೂರಾತಿಗೊಂಡಿವೆ. ಅವುಗಳ ಪಟ್ಟಿಯೂ ಕೂಡಾ ತಯಾರಾಗಿದ್ದು ಟೆಂಡರ್‌ ಮುಗಿದಿದೆ. 2 ವರ್ಷಗಳ ಅವಧಿಯಲ್ಲಿ ಒಟ್ಟು 1374 ಮನೆಗಳನ್ನು ಪಟ್ಟಣದಲ್ಲಿ ಕಟ್ಟಬೇಕೆಂಬ ತಿರ್ಮಾನ ಮಾಡಿದ್ದು ಅದು ಕಾರ್ಯಗತವಾಗಲಿದೆ ಎಂದು ತಿಳಿಸಿದರು.

ಪಟ್ಟಣದಲ್ಲಿ ಕ್ರೀಡಾಂಗಣ ನಿರ್ಮಿಸಬೇಕೆಂಬ ಇಚ್ಛೆ ಹೊಂದಿದ್ದೇನೆ. ಪುರಸಭೆ ಅ ಧಿಕಾರಿಗಳಿಗೆ ಜಾಗೆಯನ್ನು ಗುರುತಿಸಿ ಪರಿಶೀಲಿಸಿ ತಿಳಿಸಲು ಸೂಚಿಸಿದ್ದೇನೆ. ಇದು ನಿರ್ಮಾಣವಾದರೆ ವಾಯುವಿಹಾರಿಗೊಳೂಳಗೊಂಡುಎಲ್ಲರಿಗೂ ಅನುಕೂಲವಾಗಲಿದೆ ಎಂದರು.

Advertisement

ಸಭೆಯಲ್ಲಿ ತಹಶೀಲ್ದಾರ್‌ ಅನಿಲಕುಮಾರ ಢವಳಗಿ, ಮುಖ್ಯಾ ಧಿಕಾರಿ ಸಿ.ವಿ. ಕುಲಕರ್ಣಿ, ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next