ಬೆಂಗಳೂರು: ಕಳೆದ ಬಜೆಟ್ ಅಧಿವೇಶನದಲ್ಲಿ ಅನುಮೋದನೆಗೊಂಡಿರುವ ಶಿಕ್ಷಕರ ವರ್ಗಾವಣ ನಿಯಂತ್ರಣ ಕಾಯ್ದೆಗೆ ತುರ್ತಾಗಿ ನಿಯಮ ರೂಪಿಸಿ, ಪ್ರಸ್ತುತ ಶೈಕ್ಷಣಿಕ ಸಾಲಿನ ವರ್ಗಾವಣ ವೇಳಾಪಟ್ಟಿ ಪ್ರಕಟನೆೆ ಪೂರ್ವಭಾವಿ ಕ್ರಮಗಳಿಗೆ ಚಾಲನೆ ನೀಡಲು ಸರಕಾರ ಸೂಚಿಸಿದೆ.
ಶುಕ್ರವಾರ ತಮ್ಮ ಕಚೇರಿಯಲ್ಲಿ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಈ ಸೂಚನೆ ನೀಡಿದ್ದಾರೆ.
ಸಚಿವರು, ಕಾನೂನಾತ್ಮಕ ಅಭಿಪ್ರಾಯ ದೊಂದಿಗೆ ಕೂಡಲೇ ನಿಯಮ ಅಂತಿಮಗೊಳಿಸಿ ವರ್ಗಾವಣ ಪ್ರಕ್ರಿಯೆಗೆ ಚಾಲನೆ ನೀಡಲು ಸೂಚಿಸಿದರು.
ಇದೇ ವೇಳೆ ಶಿಕ್ಷಣ ಇಲಾಖೆಯ ಯು ಟ್ಯೂಬ್ ಚಾನೆಲ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಕಾಯುತ್ತಿರುವ ವಿದ್ಯಾರ್ಥಿ ಗಳಿಗೆ ಅನುಕೂಲವಾಗುವ ರೀತಿಯಲ್ಲಿ ಪುನರ್ಮನನ ತರಗತಿಗಳನ್ನು ಬಿತ್ತರಿಸಲು ಕಾರ್ಯೋನ್ಮುಖವಾಗಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಬಾರ್ಡ್ ನಿಂದ ಸರಕಾರಿ ಶಾಲೆಗಳ ದುರಸ್ತಿ, ಕೊಠಡಿ ನಿರ್ಮಾಣ ಕಾಮಗಾರಿಗೆ ಬಿಡುಗಡೆಯಾದ ಮುಂಗಡ ಸದ್ಬಳಕೆಗೆ ಪಿಡಬ್ಲೂéಡಿ ಇಲಾಖೆ ಮೂಲಕ ಕಾಮಗಾರಿ ಪೂರ್ವಭಾವಿ ಕ್ರಮಗಳಿಗೆ ಚಾಲನೆ ನೀಡಿದ್ದು, ಲಾಕ್‌ಡೌನ್ ಮುಗಿದ ತತ್‌ಕ್ಷಣ ಆರಂಭಿಸಲು ಸೂಚಿಸಿದರು.