ಸಿಂದಗಿ: ಸಿಂದಗಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಸಮಸ್ಯೆಪರಿಹರಿಸಲು ಶೀಘ್ರದಲ್ಲಿ ಬಳಗಾನೂರ ಕೆರೆಯಿಂದ ಸಿಂದಗಿ ಕೆರೆಗೆ ನೀರು ಹರಿಸುವ ಕಾರ್ಯ ಮಾಡಬೇಕು ಎಂದು ಶಾಸಕ ಎಂ.ಸಿ. ಮನಗೂಳಿ ಅವರು ಅಧಿ ಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಬಳಗಾನೂರ ಕೆರೆಗೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಅವರು ಮಾತನಾಡಿದರು. ಕಳೆದ ಬಾರಿ ಬೇಸಿಗೆಯಲ್ಲಿ ಸಿಂದಗಿಯ ಜನತೆ ನೀರಿನತೊಂದರೆ ಆಗಬಾರದೆಂದು ಮುಂಜಾಗ್ರತಾ ಕ್ರಮವಾಗಿಸರ್ಕಾರಕ್ಕೆ ಒತ್ತಡ ಹೇರಿ ಹಂತ ಹಂತವಾಗಿ ತಾಲೂಕಿನಯರಗಲ್ ಬಿ.ಕೆ. ಗ್ರಾಮದ ಬಳಿ ಇರುವ ಕಾಲುವೆ ಮೂಲಕ ನೀರನ್ನು ಕೆರೆಗೆ ತುಂಬಿಸಿ ನೀರಿನ ಆಹಾಕಾರ ತಗ್ಗಿಸಲಾಯಿತು. ಸಿಂದಗಿ ಪಟ್ಟಣದ ಜನತೆಯ ಶಾಶ್ವತ ಕುಡಿಯುವ ನೀರಿನಬವಣೆ ನೀಗಿಸಲು ತಾಲೂಕಿನ ಬಳಗಾನೂರ ಕೆರೆಯಿಂದ ಸಿಂದಗಿ ಕೆರೆಗೆ ನೀರು ಸಂಗ್ರಹಿಸುವ ಕಾರ್ಯ ಶೀಘ್ರದಲ್ಲಿ ಲೋಕಾರ್ಪಣೆ ಮಾಡಬೇಕು ಎಂದು ಜಲ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.
ಚುನಾವಣೆ ಸಂದರ್ಭದಲ್ಲಿ ಜನತೆಗೆ ನೀಡಿದಂತೆ ಮಾತುಗಳನ್ನು ಈಡೇರಿಸುತ್ತಿದ್ದೇನೆ. ಸಮ್ಮಿಶ್ರ ಸರಕಾರವಿದ್ದಸಂದರ್ಭದಲ್ಲಿ 27.10 ಕೋಟಿ ರೂ. ಅನುದಾನದಲ್ಲಿತಾಲೂಕಿನ ಬಳಗಾನೂರ ಕೆರೆಯಿಂದ ಸಿಂದಗಿ ಕೆರೆಗೆ ನೀರುಹರಿಸಲು ಯೋಜನೆಯನ್ನು ಹಾಕಲಾಯಿತು. ಅದರಂತೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಬಳಗಾನೂರ ಕೆರೆಯಿಂದ ಸಿಂದಗಿ ಕೆರೆಗೆ ನೀರು ಸರಬರಾಜು ಮಾಡಲು ಪೈಪ್‌ಲೈನ್ ಜೋಡಣೆಯಾಗಿದೆ. ಜಾಕ್‌ವೆಲ್ ಕಾಮಗಾರಿ ನಡೆಯುತ್ತಿದ್ದುಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಸಿ ಸಿಂದಗಿ ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ ದಿನದ 24 ಗಂಟೆ ನೀರು ಸರಬರಾಜು ಮಾಡುವಂತಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕ್ಷೇತ್ರದಲ್ಲಿ ಬರುವ ಎಲ್ಲ ಸಣ್ಣ ಮತ್ತು ದೊಡ್ಡ ಕೆರೆಗಳಿಗೆಮತ್ತು ಹಳ್ಳಗಳಿಗೆ ನೀರು ತುಂಬಿಸುವ ಕಾರ್ಯ ನಡೆದಿದೆ.ಅವರ ಅವ ಧಿಯಲ್ಲಿ ತಾಲೂಕಿನ ಯಂಕಂಚಿ ಹಳ್ಳಕ್ಕೆ 50 ಲಕ್ಷರೂ. ಚಾಂದಕವಠೆ ಹಳ್ಳಕ್ಕೆ 20 ಲಕ್ಷ ರೂ. ಹಾಗೂ ಗೋಲಗೇರಿಹಳ್ಳಕ್ಕೆ 50 ಲಕ್ಷ ರೂ. ಅನುದಾನದಲ್ಲಿ ಹೂಳೆತ್ತುವ ಕಾರ್ಯ ಮಾಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಸಾಕಷ್ಟು ಮಳೆಯಾಗಿದ್ದರಿಂದ ಹಳ್ಳಗಳು ತುಂಬಿವೆ ಎಂದು ಹೇಳಿದರು.
ತಾಲೂಕಿನ ಯರಗಲ್ ಬಿ.ಕೆ. ಗ್ರಾಮದ ಹತ್ತಿರದ ಕಾಲುವೆಯಿಂದ ಸಿಂದಗಿ ಪಟ್ಟಣದಲ್ಲಿನ ಕೆರೆಗೆ ನೀರುತುಂಬಿಸಲಾಗಿದೆ. ಇದರಿಂದ ಕಳೆದ ಬೇಸಿಗೆಯಲ್ಲಿಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿಲ್ಲ.ಆಲಮೇಲ, ಹಿಕ್ಕಣಗುತ್ತಿ, ಓತಿಹಾಳ, ಪುರದಾಳ, ಯಂಕಂಚಿ,ಗೂಗಿಹಾಳ, ಗೋಲಗೇರಿ, ಬಬಲೇಶ್ವರ, ಮೋರಟಗಿ,ಸಾಸಾಬಾಳ, ಬಳಗಾನೂರ ಕೆರೆಗಳಿಗೆ ಕಾಲುವೆಗಳಿಂದ ನೀರು ತುಂಬಿಸಲಾಗಿದೆ. ಇದರಿಂದ ಆಯಾ ಭಾಗಗಳಲ್ಲಿ ಅಂತರ್ಜಲ ಹೆಚ್ಚಾಗಿದೆ ಎಂದು ಹೇಳಿದರು.
ಜಲ ಮಂಡಳಿ ಕಾರ್ಯ ನಿರ್ವಾಹಕ ಅಭಿಯಂತರ ಶ್ರೀನಿವಾಸ ಕುಲಕರ್ಣಿ ಮಾತನಾಡಿ, ಬಳಗಾನೂರ ಕೆರೆಯಿಂದ ಸಿಂದಗಿ ಕೆರೆಗೆ ನೀರು ಸರಬರಾಜು ಮಾಡಲುಕಾಮಗಾರಿ ವೇಗವಾಗಿ ನಡೆಯುತ್ತಿದೆ. ನೀರು ಸರಬರಾಜುಕಾಮಗಾರಿಗೆ 12 ಮೀ.ಗೆ ಒಂದರಂತೆ ಸುಮಾರು 1400ಪೈಪ್‌ಲೈನ್‌ಗಳ ಜೋಡಣೆ ಕಾರ್ಯ ಪೂರ್ಣಗೊಂಡಿದೆ. ಈಯೋಜನೆಯ ಕಾಮಗಾರಿ ಮುಂಬರುವ ಮೂರು ತಿಂಗಳಲ್ಲಿ ಪೂರ್ಣಗೊಳ್ಳುವುದು. ಏಪ್ರಿಲ್ ವೇಳೆಗೆ ನೀರುವ ಹರಿಸುವಕಾರ್ಯ ಮಾಡಲಾಗುವುದು ಎಂದು ಭರವಸೆ ನೀಡಿದರು.ಅಭಿಯಂತರ ಅಶೋಕ ತಳಕೇರಿ, ಮೇಲ್ವಿಚಾರಕ ಮಲ್ಲುದೇವರ, ವ್ಯವಸ್ಥಾಪಕ ಅರುಣ ಪಾಟೀಲ, ಪ್ರಸನ್ ಜೇರಟಗಿ ಸೇರಿದಂತೆ ಇತರರು ಇದ್ದರು.