Advertisement
ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಜರುಗಿದ ಕೆಡಿಪಿ ತ್ರೆçಮಾಸಿಕ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಇಷ್ಟಕ್ಕೂ ರೈತರಿಗೇನು ನೀವು ನೀರು ಬಿಟ್ಟು ಉಪಕಾರ ಮಾಡುತ್ತಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
Related Articles
Advertisement
ಆಫ್ರಿಕಾ ತೊಗರಿ ಬೀಜಕ್ಕೆ ಸೂಚನೆ
ಈಚೆಗೆ ತೊಗರಿ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ರೋಗಕ್ಕೆ ಸಿಲುಕಿದೆ. ಹೀಗಾಗಿ ರೋಗ ಬಾಧೆ ಕಡಿಮೆ ಇರುವ ಹಾಗೂ ಉತ್ತಮ ಇಳುವರಿ ನೀಡುವ ಆಫ್ರಿಕಾದ ತೊಗರಿ ಬೆಳೆಯ ತಳಿಯ ಬೀಜಗಳೂ ಸಂಶೋಧನೆಯಾಗಿವೆ. ಅಂತಹ ಬೀಜಗಳ ತೊಗರಿ ಬೆಳೆಯುವ ವಿಜಯಪುರ ಜಿಲ್ಲೆಯಲ್ಲಿ ಪ್ರಯೋಗ ಮಾಡಿ ಎಂದು ಕೃಷಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳ ಸಲಹೆ ಮೇರೆಗೆ ಜಿಲ್ಲೆಯಲ್ಲಿ ರೋಗ ರಹಿತವಾದ ವಿವಿಧ ತಳಿಯ ಬೀಜಗಳ ಪ್ರಯೋಗ ನಡೆಸಬೇಕು. ಬೆಂಬಲ ಬೆಲೆ ಯೋಜನೆಯಲ್ಲಿ ತೊಗರಿ ಖರೀದಿಗೆ ಸಂಬಂಧಿ ಸಿದಂತೆ ಎಲ್ಲದ್ದಕ್ಕೂ ನಿಯಮ ಪಾಲನೆ ಮಿತಿಗೊಳ್ಳದೇ ಸಂಪೂರ್ಣ ಖರೀದಿಗೆ ಮುಂದಾಗಬೇಕು ಎಂದು ಸೂಚಿಸಿದರು.
ಇದೀಗ ಕಬ್ಬು ಕಟಾವು ಹಂಗಾಮಿದ್ದು, ಇಂಡಿ, ಸಿಂದಗಿ ಭಾಗಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಏಪ್ರಿಲ್ ಅಂತ್ಯದವರೆಗೂ ಕಬ್ಬು ಪೂರೈಸಿಕೊಳ್ಳುವಂತೆ ಸಕ್ಕರೆ ಕಾರ್ಖಾನೆಗಳಿಗೆ ನಿರ್ದೇಶನ ನೀಡಿದರು.
ಬೆಳೆ ಹಾನಿಗೆ ಸಂಬಂಧಿಸಿದಂತೆ ಸರ್ವೇ ಪರಿಣಾಮಕಾರಿಯಾಗಿ ನಡೆಯಬೇಕು, ಸೆಟ್‌ಲೆçಟ್ ಹಾಗೂ ಮ್ಯಾನುವಲ್ ಸರ್ವೇಯಲ್ಲಿ ಸಾಮ್ಯತೆ ಇರಲೇಬೇಕು, ಪ್ರತಿ ತಿಂಗಳು ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿ, ಈ ಬಗ್ಗೆ ಜಿಲ್ಲಾಧಿಕಾರಿಗಳು ಮುತವರ್ಜಿ ವಹಿಸಿ ರೈತರಿಗೆ ನ್ಯಾಯ ಒದಗಿಸುವಂತೆ ಮಾಡಿ ಎಂದರು.
ಶಾಸಕ ಶಿವಾನಂದ ಪಾಟೀಲ ಮಾತನಾಡಿ, ರೈತರಿಗೆ ಸಂಪರ್ಕ ರಸ್ತೆ ಇಲ್ಲದೇ ತೀವ್ರ ತೊಂದರೆ ಎದುರಿಸುತ್ತಿದ್ದಾರೆ, ನರೇಗಾ ಯೋಜನೆಯಡಿ ಕಚ್ಚಾ ರಸ್ತೆಗಳನ್ನು ನಿರ್ಮಿಸುವ ಅವಕಾಶವಿದೆ. ಇದಕ್ಕೆ ಅನುಮತಿ ಕೊಡಿ, ಬೇಕಾದರೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು ಸಹ ಅದಕ್ಕೆ ವಿನಿಯೋಗಿಸಿ ಎಂದು ಮಹತ್ವದ ಸಲಹೆ ನೀಡಿದರು.
ಇನ್ನೊಂದು ಸಮಸ್ಯೆಯನ್ನು ಸಭೆಯ ಗಮನಕ್ಕೆ ತಂದ ಶಾಸಕ ಶಿವಾನಂದ ಪಾಟೀಲರು, ಜಲಜೀವನ ಮಿಷನ್ ಯೋಜನೆ ಅಡಿ ರಸ್ತೆ ಅಗೆದಾಗ ಅದನ್ನು ಪುನರ್ ನಿರ್ಮಾಣ ಮಾಡುತ್ತಿಲ್ಲ. ಹಲವು ಕಡೆಗಳಲ್ಲಿ ಪಾದಾಚಾರಿ ಮಾರ್ಗಗಳನ್ನೂ ಅಗೆದು ಪುನರ್ ನಿರ್ಮಿಸದೇ ಬಿಡುತ್ತಿದ್ದಾರೆ ಎಂದು ದೂರಿದರು.