Advertisement

ಪರಿಪೂರ್ಣ ಕ್ರಿಯಾಯೋಜನೆ ಸಿದ್ಧತೆಗೆ ಸೂಚನೆ

03:25 PM Sep 08, 2022 | Team Udayavani |

ಆಳಂದ: ಗ್ರಾಮ ಪಂಚಾಯಿತಿಗಳ ಮೂಲಕ “ನಮ್ಮ ಗ್ರಾಮ ನಮ್ಮ ಯೋಜನೆ’ ಅಡಿಯಲ್ಲಿ ಐದು ವರ್ಷದ ಅವಧಿಗಾಗಿ ರೂಪಿಸುವ ಕ್ರಿಯಾ ಯೋಜನೆಯನ್ನು ಪರಿಪೂರ್ಣತೆಯಿಂದ ಸಿದ್ಧಪಡಿಸಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಲಾಸರಾಜ್‌ ಪ್ರಸನ್ನ ಸೂಚಿಸಿದರು.

Advertisement

ತಾಲೂಕು ಪಂಚಾಯಿತಿ ಸಭಾಭವನದಲ್ಲಿ “ನಮ್ಮ ಗ್ರಾಮ ನಮ್ಮ ಯೋಜನೆ’ ಅಡಿ ಐದು ವರ್ಷದ ಕ್ರಿಯಾ ಯೋಜನೆ ಸಿದ್ಧಪಡಿಸಲು ಕರೆದ ತಾಲೂಕು ಮಟ್ಟದ ಅಧಿಕಾರಿಗಳ, ಗ್ರಾಪಂನ ಎಂಬಿಕೆ, ಕಾಯಕ ಮಿತ್ರ, ಅನುಗಾರರು, ಗ್ರಾಮ ಸಂಪನ್ಮೂಲ ವ್ಯಕ್ತಿಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಪಂಗಳಿಗೆ ಸರ್ಕಾರಿ ಯೋಜನೆಗಳಾದ 15ನೇ ಹಣಕಾಸು, ಉದ್ಯೋಗ ಖಾತ್ರಿ ಮತ್ತು ಎಸ್‌ಡಿಎಂ, ಎಲ್‌ಆರ್‌ಎನ್‌ಎಂ ಸೇರಿ ಇನ್ನಿತರ ಯೋಜನೆಗಳ ಅನುಷ್ಟಾನಕ್ಕೆ ಯೋಜನೆ ರೂಪಿಸಲು ಪೂರಕವಾಗಿ ತರಬೇತಿ ಆಯೋಜಿಸಲಾಗಿದೆ. ತರಬೇತಿಯಲ್ಲಿ ಪರಿಪೂರ್ಣತೆ ಸಾಧಿಸಿ, ಬೇಡಿಕೆ ಸಾಧಕ-ಬಾಧಕದ ಕುರಿತು ಸಮಗ್ರ ಮಾಹಿತಿ ಕಲೆಹಾಕಿ ವರದಿ ನೀಡಬೇಕು ಎಂದು ಸೂಚಿಸಿದರು.

ತಾಲೂಕು ಮಟ್ಟದ ಅಧಿಕಾರಿಗಳಿಗೆ ತಲಾ ಎರಡು ಗ್ರಾಪಂಗಳಿಗೆ ನೋಡಲ್‌ ಅಧಿಕಾರಿಗಳನ್ನಾಗಿ ನೇಮಿಸಿದ್ದು, ಅವರು ಕೆಳಹಂತದ ಅಧಿಕಾರಿಗಳಿಗೆ ಕಾಲಕಾಲಕ್ಕೆ ಮಾಹಿತಿ, ಸಲಹೆ, ಸೂಚನೆ ನೀಡುತ್ತಾರೆ. ಇದನ್ನು ಸದ್ಬಳಕೆ ಮಾಡಿಕೊಂಡು ವಿಸ್ತೃತ ವರದಿ ಸಿದ್ಧಪಡಿಸಿ ಗ್ರಾಮೀಣ ಪ್ರದೇಶಕ್ಕೆ ಅನುಕೂಲ ಕಲ್ಪಿಸುವಂತಾಗಬೇಕು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗುಲಮಡಿ, ಸಹಾಯಕ ಕೃಷಿ ನಿರ್ದೇಶಕ ಪಿ.ಎಂ. ಮಲ್ಲಿಕಾರ್ಜುನ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಶಂಕರಗೌಡ ಪಾಟೀಲ, ಪಶು ಸಂಗೋಪನಾ ಸಹಾಯಕ ನಿರ್ದೇಸಕ ಡಾ|ಸಂಜಯ ರೆಡ್ಡಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಚಂದ್ರಮೌಳಿ, ಕೈಗಾರಿಕೆ ಅಧಿಕಾರಿ ಜಾಫರ್‌ ಅನ್ಸಾರಿ, ಸಮಾಜ ಕಲ್ಯಾಣ ಅಧಿಕಾರಿ ಮೋನಮ್ಮ ಸುತಾರ ಹಾಗೂ ವಿವಿಧ ಗ್ರಾಪಂಗಳ ಸಿಬ್ಬಂದಿ, ಅನುಗಾರರು ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next