Advertisement

ಪಾರದರ್ಶಕ ಆಡಳಿತ ನೀಡಲು ಸೂಚನೆ

07:44 AM Jun 28, 2019 | Suhan S |

ಸಂತೆಮರಹಳ್ಳಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದಾರೆ. ಶಾಸನ ರೂಪಿಸುವ ಶಾಸಕಾಂಗ, ಇದನ್ನು ಕಾರ್ಯರೂಪಕ್ಕೆ ತರುವ ಕಾರ್ಯಾಂಗ ಜನರಿಂದಲೇ ಆಯ್ಕೆಯಾಗಿ, ಜನರ ದುಡ್ಡಲ್ಲೇ ಇವರಿಗೆ ಸಂಬಳ ನೀಡಲಾಗುತ್ತದೆ. ಎಲ್ಲಾ ಸವಲತ್ತುಗಳನ್ನು ಇವರಿಗೆ ತಲುಪಿಸುವ ಜವಾಬ್ದಾರಿ ಈ ಅಂಗಗಳ ಮೇಲಿದೆ. ಹಾಗಾಗಿ ಪ್ರತಿ ಇಲಾಖೆಯ ಅಧಿಕಾರಿಗಳು ಪಾರದರ್ಶಕ ಆಡಳಿತ ನೀಡಲು ಮುಂದಾಗಬೇಕು ಎಂದು ಶಾಸಕ ಎನ್‌. ಮಹೇಶ್‌ ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ಯಳಂದೂರು ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಗ್ರಾಮ ಪಂಚಾಯಿತಿ ಪ್ರತಿ ಗ್ರಾಮೀಣ ಸಮಸ್ಯೆಗಳ ಪ್ರತಿಬಿಂಬವಾಗಬೇಕು. ಇಲ್ಲಿನ ಸಮಸ್ಯೆ ಬಗೆಹರಿಸುವ ಪ್ರಥಮ ಸಂಸ್ಥೆ ಇದಾಗಿದ್ದು ಇದಾಗದಿದ್ದ ಪಕ್ಷದಲ್ಲಿ ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳಿಂದ ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

ಮೀನುಗಾರಿಕೆ ಮಾಹಿತಿ ನೀಡಿ: ಮೀನುಗಾರಿಕೆ ಇಲಾಖೆಯಿಂದ ನೋಂದಾಯಿತ ಸಂಘ ಸಂಸ್ಥೆಗಳಿಗೆ ಟೆಂಡರ್‌ ನೀಡಲಾಗುತ್ತಿದೆ. ಆದರೆ ಪ್ರತಿ ವರ್ಷವೂ ಅದೇ ಸಂಘಗಳಿಗೆ ಇದು ಹೇಗೆ ಹೋಗುತ್ತಿದೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಇತರರಿಗೆ ಮಾಹಿತಿಯೇ ನೀಡುವುದಿಲ್ಲ ಎಂದು ಸಾರ್ವಜನಿಕರು ದೂರಿದರು.

ಇಲಾಖೆ ಸಹಾಯಕ ನಿರ್ದೇಶಕಿ ಕೆ.ಬಿ. ಶ್ವೇತಾ ಪ್ರತಿಕ್ರಿಯಿಸಿ, ಪ್ರತಿ 5 ವರ್ಷಕ್ಕೊಮ್ಮೆ ಇಲಾಖೆಯಲ್ಲಿ ಟೆಂಡರ್‌ ನಡೆಸಲಾಗುವುದು. ಇ-ಟೆಂಡರ್‌ ಮೂಲಕ ಹರಾಜು ನಡೆಯುತ್ತದೆ. ಪ್ರತಿ ಗ್ರಾಮ ಪಂಚಾಯಿತಿ ಯಲ್ಲೂ ಈ ಬಗ್ಗೆ ಸೂಚನಾ ಫ‌ಲಕದಲ್ಲಿ ಪ್ರಕಟಣೆ ಹೊರಡಿಸಲಾಗುತ್ತದೆ. ಆದರೆ ಈ ಪ್ರಕರಣ ನನ್ನ ಗಮನಕ್ಕೆ ಬಂದಿರಲಿಲ್ಲ, ಮುಂದಿನ ದಿನಗಳಲ್ಲಿ ಇದನ್ನು ತಿದ್ದುಕೊಳ್ಳಲಾಗುವುದು ಎಂದರು.

ಆಸ್ಪತ್ರೆ ಸಮಸ್ಯೆ ಬಗೆಹರಿಸಿ: ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣ ಸ್ವಚ್ಛವಾಗಿಲ್ಲ. ಹಳೆ ಕಟ್ಟಡದಲ್ಲಿ ಕೇಂದ್ರ ನಡೆಯುತ್ತಿದೆ. ಇದು ಶಿಥಿಲವಾಗಿದೆ. ಆಸ್ಪತ್ರೆಯ ಮುಂದೆ ಶುಚಿತ್ವವಿಲ್ಲ. ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಶಾಸಕರಿಗೆ ದೂರು ಸಲ್ಲಿಸಿದರು. ಸಭೆ ನಡೆದ ಬಳಿಕೆ ಸ್ಥಳ ಪರಿಶೀಲನೆ ನಡೆಸಿದ ಶಾಸಕರು ಈ ಬಗ್ಗೆ ಆರೋಗ್ಯ ಇಲಾಖೆಗೆ ಪತ್ರ ಬರೆದು ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸುವ ಭರವಸೆ ನೀಡಿದರು.

Advertisement

ಕಾಲುವೆ ದುರಸ್ತಿ ಮಾಡಿಲ್ಲ: ಕಾವೇರಿ ನೀರಾವರಿ ನಿಗಮದ ವತಿಯಿಂದ ಕಬಿನಿ ಕಾಲುವೆಯನ್ನು ದುರಸ್ತಿ ಮಾಡಿಸಿಲ್ಲ. ಪ್ರತಿ ವರ್ಷವೂ ಕೋಟ್ಯಂತರ ರೂ. ಇದಕ್ಕಾಗಿ ಸರ್ಕಾರದಿಂದ ಬಿಡುಗಡೆಯಾದರೂ ಕಾಮಗಾರಿ ನಡೆಸದೆ ಬಿಲ್ ಪಾವತಿ ಮಾಡುತ್ತಾರೆ. ಅಲ್ಲದೆ ನೀರು ಹರಿಸುವ 15 ದಿನದ ಮುಂಚೆ ಕಾಮ ಗಾರಿ ನಡೆಸುತ್ತಾರೆ. ಇದರಿಂದ ಸರ್ಕಾರಕ್ಕೆ ಅಪಾರ ನಷ್ಟವಾಗುತ್ತದೆ ಎಂದು ದೂರಿದರು.

ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಶಾಸಕರು, ಮುಂದಿನ ದಿನಗಳಲ್ಲಿ ಕೆಲಸ ನಡೆಯುವ ಸ್ಥಳಕ್ಕೆ ನಾನು ಖುದ್ದು ಭೇಟಿ ನೀಡುವ ಇಂತಹ ಸಮಸ್ಯೆ ಕಂಡುಬಂ ದಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರ ನೀಡಿದರು.

ಸರಿಯಾಗಿ ಸ್ಪಂದಿಸದ ಕಾವೇರಿ ಗ್ರಾಮೀಣ ಬ್ಯಾಂಕ್‌ನ ವ್ಯವಸ್ಥಾಪಕ: ಗ್ರಾಮದಲ್ಲಿರುವ ಕಾವೇರಿ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕರು ಗ್ರಾಹಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಗ್ರಾಮದಲ್ಲಿ ಅಕ್ರಮ ಮದ್ಯ ಮರಾಟವಾಗುತ್ತಿದೆ. ರೈತರಿಗೆ ಸಿಗುವ ಬೆಳೆ ವಿಮಾ ಮೊತ್ತವು ಸಾಮಾಜಿಕ ಪಿಂಚಣಿಯ ಖಾತೆಗೆ ಜಮಾವಣೆಗೊಳ್ಳುತ್ತದೆ. ಆದರೆ ಇದಕ್ಕೆ ಪಾಸ್‌ ಪುಸ್ತಕವಿಲ್ಲದ ಕಾರಣ ಅನೇಕರು ಮೋಸ ಹೋಗುತ್ತಿದ್ದಾರೆ. ಈ ಬಗ್ಗೆ ಬ್ಯಾಂಕಿನವರು ಖಾತೆದಾರರಿಗೆ ಪಾಸ್‌ ಪುಸ್ತಕಗಳನ್ನು ವಿತರಿಸುವಂತೆ ಮಾಡಬೇಕು ಎಂದು ದೂರು ಸಲ್ಲಿಸಿದರು. ಈ ಬಗ್ಗೆ ಸಂಬಂಧಪಟ್ಟ ಇಲಾಖೆ, ಬ್ಯಾಂಕಿನ ಅಧಿಕಾರಿಗಳು ಕ್ರಮ ವಹಿಸುವ ಭರವಸೆಯನ್ನು ನೀಡಿದರು.

ತಾಪಂ ಉಪಾಧ್ಯಕ್ಷೆ ಮಲ್ಲಾಜಮ್ಮ ಗ್ರಾಪಂ ಅಧ್ಯಕ್ಷ ಟಿ. ಮಹೇಶ, ಸದಸ್ಯ ಉಮಾಪತಿ, ಮಹೇಶ್‌, ಗೋವಿಂದ ನಾಯಕ, ಚಂದ್ರಮ್ಮ ತಹಶೀಲ್ದಾರ್‌ ವರ್ಷಾ, ಇಒ ಬಿ.ಎಸ್‌. ರಾಜು ಉಪ ತಹಶೀಲ್ದಾರ್‌ ವೈ.ಎಂ. ನಂಜಯ್ಯ ಪಿಡಿಒ ಆದಿಕೇಶವ ಇತರರು ಇದ್ದರು.

ರೈಸ್‌ ಪುಲ್ಲಿಂಗ್‌ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕ್ರಮ

ಸಂತೆಮರಹಳ್ಳಿ: ಬಿಳಿಗಿರಿರಂಗನಬೆಟ್ಟದಲ್ಲಿ ರೈಸ್‌ ಪುಲ್ಲಿಂಗ್‌ ಹಾಗೂ ಕಾಡು ಪ್ರಾಣಿಗಳ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು ಎಂದು ಶಾಸಕ ಎಸ್‌. ಮಹೇಶ್‌ ಹೇಳಿದರು.

ಯಳಂದೂರಿನ ಬಿಳಿಗಿರಿರಂನಬೆಟ್ಟದ ಲೋಕೋ ಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.

ಮಲ್ಲೇಶಪ್ಪ ವಜಾಗೆ ಆಗ್ರಹ:ರೈಸ್‌ಪುಲ್ಲಿಂಗ್‌ ಹಾಗೂ ಕಾಡು ಪ್ರಾಣಿಗಳ ಬೇಟೆಗಾರರಿಗೆ ತನ್ನ ಮನೆಯಲ್ಲಿ ವಾಸ ಮಾಡಲು ಅವಕಾಶ ಮಾಡಿ ಕೊಟ್ಟಿದ್ದ ಕರ್ನಾಟಕ ವನ್ಯಜೀವಿ ಮಂಡಲಿ ಸದಸ್ಯ ಮಲ್ಲೇಶಪ್ಪರನ್ನು ಆ ಸ್ಥಾನದಿಂದ ವಜಾಗೊಳಿಸಬೇಕು ಎಂದು ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಮಾತನಾಡಿದರು.

ಈಗಾಗಲೇ ಮೊಲ, ಗೌಜಲಕ್ಕಿಗಳನ್ನು ಕೊಂದಿ ರುವ ಆರೋಪಿಗಳ ವಿರುದ್ಧ ಅರಣ್ಯ ಇಲಾಖೆ ಯಲ್ಲಿ ದೂರು ದಾಖಲಾಗಿದೆ. ಅವರನ್ನು ಕಾನೂ ನು ಬಂಧನಕ್ಕೆ ಒಪ್ಪಿಸಲಾಗಿದೆ. ರೈಸ್‌ ಪುಲ್ಲಿಂಗ್‌ ಪಾತ್ರೆಯು ಅರಣ್ಯ ಇಲಾಖೆಯ ಸುಪರ್ದಿ ಯಲ್ಲಿದ್ದು ಅದನ್ನು ಶೀಘ್ರದಲ್ಲೇ ತಹಶೀಲ್ದಾರ್‌ ರವರಿಗೆ ಹಸ್ತಾಂತರಿಸಲಾಗುವುದು ಎಂದು ಆರ್‌ಎಫ್ಒ ಮಹಾದೇವಯ್ಯ ಮಾಹಿತಿ ನೀಡಿದರು.

ಕಲ್ಯಾಣಿ ಪೋಡಿನ ಸಮಸ್ಯೆ ಬಗೆಹರಿಸಲು ಕ್ರಮ: ಬೆಟ್ಟದಲ್ಲಿರುವ ಕಲ್ಯಾಣಿ ಪೋಡಿಗೆ ಖಾಸಗಿ ವ್ಯಕ್ತಿ ಯೊಬ್ಬರು ಇದು ನನ್ನ ಜಮೀನು ಎಂದು ದೂರು ದಾಖಲಿಸಿದ್ದಾರೆ. ಈ ಪ್ರಕರಣ ನ್ಯಾಯಾಲ ಯದ ಲ್ಲಿದೆ. ಆದರೆ ಹಲವು ತಲೆಮಾರುಗಳಿಂದಲೂ ಇಲ್ಲಿ ಸೋಲಿಗ ಜನರು ವಾಸ ಮಾಡುತ್ತಿದ್ದಾರೆ. ಖಾಸಗಿ ವ್ಯಕ್ತಿಗಳು ಇಲ್ಲಿ ರಸ್ತೆ, ವಿದ್ಯುತ್‌ ಮುಂತಾದ ಅಭಿವೃ ದ್ಧಿ ಕಾಮಗಾರಿಗಳಿಗೆ ತಡೆಯೊಡ್ಡುತ್ತಿದ್ದಾರೆ. ಎಲ್ಲಾ ಕಾಮಗಾರಿಗಳು ಅರ್ಧಂಬರ್ಧವಾಗಿದ್ದು ಇದನ್ನು ಪೂರ್ಣಗೊಳಿಸಲು ನೆರವಾಗಬೇಕು ಎಂದು ಇಲ್ಲಿನ ನಾಗರಿಕರು ಅರ್ಜಿ ಸಲ್ಲಿಸಿದರು. ಈ ಬಗ್ಗೆ ಸಂಬಂಧಪಟ್ಟ ಸೆಸ್ಕ್ ಹಾಗೂ ಪಂಚಾಯತ್‌ ರಾಜ್‌ ಇಲಾಖೆಯವರು ಕ್ರಮ ವಹಿಸಿ ರಸ್ತೆ, ವಿದ್ಯುತ್‌, ಕುಡಿವ ನೀರಿನ ಸಮಸ್ಯೆ ನೀಗಿಸ ಬೇಕು ಇವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕಂದಾಯ ಇಲಾಖೆಯ ಆಸ್ತಿ ಬಗ್ಗೆ ಕ್ರಮ: ಬೆಟ್ಟದಲ್ಲಿ 630 ಎಕರೆ ಜಮೀನು ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿದೆ. ಈ ಬಗ್ಗೆ ವಕೀಲ ರಮೇಶ್‌ ಬಳಿ ಸಾಕಷ್ಟು ದಾಖಲೆಗಳಿವೆ. ಆದರೆ ಅರಣ್ಯ ಇಲಾಖೆಯ ದಾಖಲೆಗಳ ಪ್ರಕಾರ ಕೇವಲ 130 ಎಕರೆ ಭೂಮಿ ಮಾತ್ರ ಕಂದಾಯ ಇಲಾಖೆ ಯ ವ್ಯಾಪ್ತಿಯಲ್ಲಿದೆ ಎಂದು ನಮೂದಾಗಿದೆ. ಈ ಬಗ್ಗೆ ಅಂಕಿ ಅಂಶಗಳನ್ನು ಸಂಗ್ರಹಿಸಿ ಸ್ಥಳೀಯರ ನೆರವಿನೊಂದಿಗೆ ಸಂಬಂಧಪಟ್ಟ ಉನ್ನತ ಅಧಿಕಾ ರಿಗಳ ಜೊತೆ ಚರ್ಚಿಸಿ ಇದಕ್ಕೆ ಶಾಶ್ವತ ಪರಿಹಾರ ಒದಗಿಸಲಾಗುವುದು. ಇದಾದ ಬಳಿಕ ಇಲ್ಲಿನ ಅನೇಕ ಭೂ ಸಂಬಂಧಿತ ವ್ಯಾಜ್ಯಗಳು ಬಗೆಹರಿ ಯಲಿದೆ. ಅಲ್ಲದೆ ಇಲ್ಲಿ ಪೌತಿ ಖಾತೆ ಮಾಡಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ವಹಿಸಲಾಗುವುದು. ಇದರಿಂದ ಸರ್ಕಾರದ ಯೋಜನೆಗಳನ್ನು ಫ‌ಲಾನುಭವಿಗಳಿಗೆ ತಲುಪಿಸಲು ಇರುವ ತೊಡಕು ದೂರವಾಗಲಿದೆ ಎಂದರು.

ದೇಗುಲದ ಆದಾಯ ಸ್ಥಳೀಯ ಆಡಳಿತಕ್ಕೂ ಸಿಗಲಿ: ಬಿಳಿಗಿರಿರಂಗನಬೆಟ್ಟದಲ್ಲಿ ಗ್ರಾಪಂಗೆ ಆದಾ ಯದ ಕೊರತೆ ಇದೆ. ಇಲ್ಲಿ ಬಿಳಿಗಿರಿರಂಗನಾಥಸ್ವಾಮಿ ದೇಗುಲವಿದ್ದರೂ ಆದಾಯವೆಲ್ಲಾ ದೇವಸ್ಥಾನಕ್ಕೆ ಸೇರುತ್ತದೆ. ಆದರೆ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇತರೆ ಮೂಲ ಸೌಕರ್ಯ ಗಳನ್ನು ಪಂಚಾಯಿಯೇ ಒದಗಿಸಬೇಕು. ಹಾಗಾಗಿ ಸುಂಕ ವಸೂಲಿ ಹಾಗೂ ಇತರೆ ಮೂಲಗಳಿಂದ ಬರುವ ಆದಾಯದಲ್ಲಿ ಶೇ. 50 ರಷ್ಟನ್ನು ಪಂಚಾ ಯಿತಿಗೆ ಸಿಗುವಂತೆ ಆಗಬೇಕು. ಇದಕ್ಕೆ ಅವಕಾ ಶವೂ ಇದ್ದು ಶಾಸಕರು ಉನ್ನತ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಇದಕ್ಕೆ ಅವಕಾಶ ನೀಡಬೇಕು ಎಂದು ತಾಪಂ ಇಒ ಬಿ.ಎಸ್‌.ರಾಜು ಮನವಿ ಮಾಡಿದರು. ಈ ಬಗ್ಗೆ ಯೋಚಿಸಿ ತೀರ್ಮಾನಿಸ ಲಾಗುವುದು ಎಂದು ಶಾಸಕರು ತಿಳಿಸಿದರು.

ಸಹಕಾರ ಇಲಾಖೆಗೆ ಎಚ್ಚರಿಕೆ: ಸಹಕಾರ ಇಲಾಖೆ ಅಧಿಕಾರಿಗಳು ಜನಸಂಪರ್ಕ ಸಭೆಗೆ ಹಾಜರಾಗದೆ ಹಿಂದೇಟು ಹಾಕುತ್ತಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಜೊತೆಗೆ ಬೆಟ್ಟದಲ್ಲಿ ಸುಸಜ್ಜಿತ ಬಸ್‌ ನಿಲ್ದಾಣ, ಬಿಳಿಗಿರಿ ಭವನದ ಅಭಿ ವೃದ್ಧಿ, ಶೌಚಾಲಯ ನಿರ್ಮಾಣ, ದೇಗುಲದ ಜೀಣೋ ರ್ದ್ಧಾರ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಕಂದಾಯ, ಪಶು ಸಂಗೋಪನೆ ಸೇರಿದಂತೆ ವಿವಿಧ ಇಲಾಖೆಯ ಫ‌ಲಾನುಭವಿಗಳಿಗೆ ಸ್ಥಳದಲ್ಲೇ ಆದೇಶ ಪತ್ರಗಳನ್ನು ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next