Advertisement
ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ಭುವನೇಶ ಪಟೇಲ್ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳು, ಯೋಜನೆಗಳ ಅನುಷ್ಠಾನದಲ್ಲಿ ಇನ್ನೂ ಆಗಬೇಕಾದ ಪ್ರಗತಿ ಕುರಿತು ತಹಶೀಲ್ದಾರರಿಗೆ ಮನವರಿಕೆ ಮಾಡಿ, ಸಭೆಯಲ್ಲಿ ನಿರ್ದೇಶಿಸಿದಂತೆ ಕಾರ್ಯಪವೃತ್ತರಾಗಲು ಸೂಚಿಸಿದರು. ಕುಡಿವ ನೀರು ಸರಬರಾಜು, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ, ಯುಡಿಐಟಿ ಕಾರ್ಡ್ ಗಳ ವಿತರಣೆ, ಸ್ಮಶಾನ ಭೂಮಿ ಗುರುತಿಸುವಿಕೆ ಸೇರಿದಂತೆ ಹತ್ತಾರು ಯೋಜನೆಗಳ ಅನುಷ್ಠಾನದ ವಾಸ್ತವ ಸ್ಥಿತಿಗತಿ ಬಗ್ಗೆ ಚರ್ಚಿಸಿದರು. ಕೆಲವು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕಾಲಮಿತಿ ನಿಗದಿಪಡಿಸಿದರು.
Related Articles
Advertisement
ಕೆರೆ-ಬಾವಿ ಸಂರಕ್ಷಿಸಿ: ಹಲವಾರು ಕಡೆಗಳಲ್ಲಿ ಬಾಕಿ ಇರುವ ಆಧಾರ್ ಜೋಡಣೆ ಕಾರ್ಯ ಜಿಲ್ಲಾದ್ಯಂತ ಅಚ್ಚುಕಟ್ಟಾಗಿ ನಡೆಯಬೇಕು. ಜಿಲ್ಲೆಯ ಆಯಾ ಕಡೆ ನಾಡ ಕಚೇರಿಗಳ ನಿರ್ಮಾಣ ಕಾರ್ಯವೂ ಕಾಲಮಿತಿಯೊಳಗೆ ನಡೆಯಬೇಕು. ಅಂತರ್ಜಲ ಮೂಲವಾದ ಕೆರೆ, ಬಾವಿಗಳ ಸಂರಕ್ಷಣೆಗೆ ಜಿಲ್ಲಾಡಳಿತವು ಒತ್ತು ನೀಡಿದೆ. ಪ್ರತಿ ಬುಧವಾರ ಕೆರೆ ಸಂರಕ್ಷಣೆ ಸಭೆ ನಡೆಸಿ ಅಲ್ಲಿ ಹೇಳಿದಂತೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿರುವ ಕೆರೆಗಳ ಸಂರಕ್ಷಣೆ ಮತ್ತು ಒತ್ತುವರಿ ತಡೆ ಕಾರ್ಯಕ್ಕೂ ತಾವುಗಳು ಗಮನ ಹರಿಸಬೇಕು ಎಂದು ತಹಶೀಲ್ದಾರರಿಗೆ ಸೂಚಿಸಿದರು.
ಸರ್ಕಾರವು ಮ್ಯಾನ್ಯುವಲ್ ಸ್ಕಾವೆಂಜಿಂಗ್ ಪದ್ಧತಿ ನಿಷೇಧಿ ಸಿದೆ. ಯುಜಿಡಿ ಮ್ಯಾನ್ ಹೋಲ್ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಕೆಲಸಗಾರರಿಂದ ಸ್ವತ್ಛಗೊಳಿಸುವುದು ಅಪರಾಧ. ಹೀಗಾಗಿ ಜಿಲ್ಲೆಯ ಯಾವ ಯಾವ ಕಡೆಗಳಲ್ಲಿ ಮ್ಯಾನ್ಯುವಲ್ ಸ್ಕಾವೆಂಜಿಂಗ್ಸ್ ಇದ್ದಾರೆ ಎಂಬುದನ್ನು ಗುರುತಿಸುವ ಕಾರ್ಯ ಆದ್ಯತೆ ಮೇರೆಗೆ ಮಾಡಬೇಕು. ಯುಜಿಡಿ ಮ್ಯಾನ್ ಹೋಲ್ ಮತ್ತು ಸೆಪ್ಟಿಕ್ ಟ್ಯಾಂಕ್ ಸ್ವತ್ಛಗೊಳಿಸಲು ಅನುಕೂಲವಾಗುವಂತೆ ವಿಳಂಬ ಮಾಡದೇ ಜಟ್ಟಿಂಗ್ ಯಂತ್ರಗಳ ಖರೀದಿಗೆ ಒತ್ತು ಕೊಡಬೇಕು. ಕಚೇರಿಗೆ ಇನ್ನಾವುದೇ ಯಂತ್ರಗಳ ಖರೀದಿ ಅವಶ್ಯವಿದ್ದರೆ ಮಾಡಬೇಕು.ರಾಮಚಂದ್ರನ್ ಆರ್, ಜಿಲ್ಲಾಧಿಕಾರಿ