Advertisement

ಆಡಳಿತ ವ್ಯವಸ್ಥೆಯೇ ಬದಲು

06:55 AM Aug 25, 2017 | |

ಬೆಂಗಳೂರು: “ಖಾಸಗಿತನಕ್ಕೆ ಮೂಲಭೂತ ಹಕ್ಕು ಎಂಬ ಸುಪ್ರೀಂ ಕೋರ್ಟ್‌ನ 9 ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ನೀಡಿರುವ ತೀರ್ಪು ಸಾಂವಿಧಾನಿಕವಾಗಿ ಮಾತ್ರವಲ್ಲ, ಸಾಮಾಜಿಕ ದೃಷ್ಟಿಕೋನದಿಂದಲೂ ಅತ್ಯಂತ ಮಹತ್ವದ್ದು. ಸರ್ಕಾರ ಎಂದರೆ ಅದು ಸೀಮಿತ ಹಕ್ಕು ಹೊಂದಿರುವಂತಹದ್ದು ಮತ್ತು ವ್ಯಕ್ತಿ ಎಂದರೆ ಆತ ತನ್ನ ಖಾಸಗಿತನ ಉಳಿಸಿಕೊಳ್ಳುವ ಹಕ್ಕು ಹೊಂದಿರುವವನು ಎಂಬುದು ಈ ತೀರ್ಪಿನ ಒಟ್ಟಾರೆ ಸಾರಾಂಶ. ಇದರಿಂದ ಆಡಳಿತ ವ್ಯವಸ್ಥೆಯೇ ಬದಲಾಗುತ್ತದೆ’.

Advertisement

ಇದು ಖಾಸಗಿತನಕ್ಕೆ ಮೂಲಭೂತ ಹಕ್ಕು ಸ್ಥಾನ ನೀಡಬೇಕು ಎಂದು ವಾದಿಸಿದ ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಸಜನ್‌ ಪೂವಯ್ಯ ಅವರ ಮಾತು. ಈ ತೀರ್ಪಿನಿಂದಾಗಿ ನಮ್ಮ ಖಾಸಗಿ ಹಕ್ಕು, ವಿಷಯ, ಮಾಹಿತಿ ಬಗ್ಗೆ ಸರ್ಕಾರ ಏನು ಮಾಡಬೇಕಾದರೂ ಅದಕ್ಕೆ ಕಾನೂನಿನ ಬೆಂಬಲ ಇರಲೇ ಬೇಕು ಎಂದಿದ್ದಾರೆ. ಅಲ್ಲದೆ, ದಬ್ಟಾಳಿಕೆ ಮೂಲಕ ಜನರನ್ನು ತಮಗೆ ಬೇಕಾದಂತೆ ನಡೆಸಿಕೊಳ್ಳಲು ಅವಕಾಶ ಇರುವುದಿಲ್ಲ. 

ಪ್ರತಿಭಟನೆ ಮಾಡಲು ಅವಕಾಶವಿರುತ್ತದೆ. ದಬ್ಟಾಳಿಕೆ ಮಾಡಿ ಒಬ್ಬ ವ್ಯಕ್ತಿಯಿಂದ ಏನು ಬೇಕಾದರೂ ಬರೆಸಿಕೊಳ್ಳಬಹುದು, ಆತನನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು ಎಂದು ಸರ್ಕಾರ ಭಾವಿಸಿದರೆ ಖಾಸಗಿತನದ ಮೂಲಭೂತ ಹಕ್ಕು ಮುಂದಿಟ್ಟುಕೊಂಡು ಪ್ರತಿಭಟಿಸಬಹುದು ಎಂದು ಹೇಳಿದ್ದಾರೆ.

ಪ್ರದೀಪ್‌ ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next