Advertisement

ಫರತಾಬಾದ್‌ ಬಳಿ ಸೌರ ವಿದ್ಯುತ್‌ ಘಟಕ ಸ್ಥಾಪನೆ

06:37 PM Apr 09, 2021 | Team Udayavani |

ಕಲಬುರಗಿ: ಫ‌ರತಾಬಾದ್‌ ಬಳಿ ಸ್ಥಾಪಿಸಲು ಉದ್ದೇಶಿಸಲಾಗಿರುವ 500 ಮೆಗಾ ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್‌ ಉತ್ಪಾದನಾ ಘಟಕದ ಸ್ಥಳವನ್ನು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಅಧ್ಯಕ್ಷ ಚಂದ್ರಕಾಂತ ಬಿ. ಪಾಟೀಲ ಗುರುವಾರ ವೀಕ್ಷಿಸಿ, ಪರಿಶೀಲಿಸಿದರು. ನವೀಕರಿಸಬಹುದಾದ ಇಂಧನ ಮಂತ್ರಾಲಯದಿಂದ ಭಾರತದ ಸರ್ಕಾರದ ಆರ್ಥಿಕ ಸಹಾಯದಡಿ ನವ ಹಾಗೂ ನವೀಕರಿಸಬಹುದಾದ ಇಂಧನ ಮೂಲಗಳ ಪಾರ್ಕ್‌ಗಳನ್ನು ಸ್ಥಾಪಿಸಲಾಗುತ್ತಿದ್ದು, ಅದರಂತೆ 1750 ಕೋಟಿ ರೂ. ಮೊತ್ತವು ಘಟಕ ಸ್ಥಾಪನೆಗೆ ಹೂಡಿಕೆಯಾಗಲಿದೆ.

Advertisement

ಒಟ್ಟಾರೆ 350 ಕೋಟಿ ರೂ. ವೆಚ್ಚದಲ್ಲಿ ಪಾರ್ಕ್‌ ಸ್ಥಾಪನೆಗೆ ವಿನಿಯೋಗಿಸಲಾಗುತ್ತಿದೆ. ಹೀಗಾಗಿ ಘಟಕ ಸ್ಥಾಪನೆಗೆ ಬೇಕಾಗುವ ಪ್ರದೇಶ ಹಾಗೂ ಇತರ ಅವಶ್ಯಕತೆಗಳ ಕುರಿತಾಗಿ ಪಾಟೀಲ ಅವಲೋಕಿಸಿದರು. ಈಗಾಗಲೇ ರಾಜ್ಯದ ಪಾವಗಡದಲ್ಲಿ ಯಶಸ್ವಿಯಾಗಿ ಸೌರಶಕ್ತಿ ಪಾರ್ಕ್‌ನ್ನು ಅಭಿವೃದ್ಧಿಪಡಿಸಲಾಗಿದೆ. ಅದೇ ರೀತಿ ಫ‌ರತಾಬಾದ್‌ (ಫಿರೋಜಾಬಾದ್‌) ಬಳಿ ಸೌರಶಕ್ತಿ ಘಟಕ ಸ್ಥಾಪನೆ ಆಗುತ್ತಿರುವುದು ಸ್ಥಳೀಯ ಅಭಿವೃದ್ಧಿ ಜತೆಗೆ ಉದ್ಯೋಗಾವಕಾಶಕ್ಕೆ ಪೂರಕವಾಗುವ ಕಾರ್ಯ ಶೀಘ್ರವೇ ಆಗುವ ನಿಟ್ಟಿನಲ್ಲಿ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಮ್ಮ ಜತೆಗೆ ಕ್ರೆಡಲ್‌ ಅಧಿಕಾರಿಗಳು ಹಾಗೂ ತಾಂತ್ರಿಕ ಸಲಹೆಗಾರರು ಸ್ಥಳ ವೀಕ್ಷಿಸಿದ್ದಾರೆ ಎಂದು ಚಂದು ಪಾಟೀಲ ತಿಳಿಸಿದರು.

ನವ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಹೊಸ ಆಕರ್ಷಣೆಯಾಗಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಜಲಾನಯನ ಪ್ರದೇಶದಲ್ಲಿ (ಕೆರೆ ಹಾಗೂ ಅಣೆಕಟ್ಟು) ಒಂದು ಮೆಗಾ ವ್ಯಾಟ್ ಸಾಮರ್ಥ್ಯದ ತೇಲುವ ಸೌರಶಕ್ತಿ ವಿದ್ಯುತ್‌ ಘಟಕವನ್ನು ನಗರದ ಶರಣಬಸವೇಶ್ವರ (ಅಪ್ಪ ) ಕೆರೆಯಲ್ಲಿ ಸ್ಥಾಪಿಸಲು ಆಯ್ಕೆ ಮಾಡಿಕೊಳ್ಳಲಾಗಿದೆ. ಅಂದಾಜು 5.50 ಕೋಟಿ ರೂ. ವೆಚ್ಚದಲ್ಲಿ ಘಟಕ ಸ್ಥಾಪನೆಯಾಗಲಿದೆ ಎಂದು ವಿವರಿಸಿದರು.

ಪಾರ್ಕ್‌ನಲ್ಲಿ ಉತ್ಪಾದಿಸಲಾದ ವಿದ್ಯುತ್‌ನ್ನು ಹೊರ ರಾಜ್ಯಗಳಿಗೆ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಸೌರ ವಿದ್ಯುತ್‌ ಪಾಕ್
ìನ್ನು ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯ ಕೇಂದ್ರ ಸರ್ಕಾರ ನಿಗದಿಪಡಿಸಿದ ಗುರಿಗಳನ್ನು ಸಾಧಿಸಿ 15097 ಮೆ.ವ್ಯಾ ಸಾಮರ್ಥಯದ ಯೋಜನೆಗಳನ್ನು ಅನುಷ್ಠಾನಗೊಳಿಸಿ ದೇಶದಲ್ಲೇ ನವ-ನವೀಕರಿಸಬಹುದಾದ ಇಂಧನ ಅಭಿವೃದ್ಧಿಯಲ್ಲಿ ಪ್ರಥಮ ಸ್ಥಾನದಲ್ಲಿದೆ.
ಚಂದು ಪಾಟೀಲ, ಕರ್ನಾಟಕ
ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ

Advertisement

Udayavani is now on Telegram. Click here to join our channel and stay updated with the latest news.

Next