Advertisement

ವಿದ್ಯುತ್‌ ಸಂಪರ್ಕಕ್ಕೆ ಮೀಟರ್‌ ಅಳವಡಿಸಿ

01:22 PM Dec 10, 2019 | Suhan S |

ಸಂಡೂರು: ಕುಡಿಯುವ ನೀರಿನ ವಿದ್ಯುತ್‌ ಸಂಪರ್ಕಗಳನ್ನು ಪಡೆದಿದ್ದು ಅವುಗಳಿಗೆ ತಕ್ಷಣ ಮೀಟರ್‌ ಅಳವಡಿಸಬೇಕು. ಶೇ. 20ರಷ್ಟು ಪಂಚಾಯಿತಿ ಹಣ ಹೋಗುತ್ತಿದೆ. ಮೀಟರ್‌ ಅಳವಡಿಸಿಕೊಂಡರೆ ಹಣ ಉಳಿಯುತ್ತದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜೆ.ಎಂ. ಅನ್ನದಾನಯ್ಯ ಖಡಕ್‌ ಸೂಚನೆ ನೀಡಿದರು.

Advertisement

ಅವರು ಸೋಮವಾರ ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ನಡೆದ ಕೆಡಿಪಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ತಾಲೂಕಿನಾದ್ಯಂತ ಬಹಳಷ್ಟು ಪಂಚಾಯಿತಿಗಳಿಗೆ ಹಣದ ಹೊರೆಯಾಗುತ್ತಿದ್ದು ಜೆಸ್ಕಾಂ ಅಧಿಕಾರಿಗಳು ಸಹ ಸಹಕಾರ ನೀಡುವ ಮೂಲಕ ತಕ್ಷಣ 1700 ರೂಪಾಯಿಗಳನ್ನು ಕಟ್ಟಿಸಿಕೊಂಡು ಮೀಟರ್‌ ವ್ಯವಸ್ಥೆ ಮಾಡಬೇಕು, ಅಲ್ಲದೆ ತಾಲೂಕಿನ ಎಲ್ಲಾ ಶಾಲೆಗಳಲ್ಲಿಯ ವಿದ್ಯುತ್‌ ಕಂಬಗಳನ್ನು ಸ್ಥಳಾಂತರಿಸಬೇಕು, ಕುಡಿಯುವ ನೀರಿಗೂ ಸಹ ಸರಿಯಾದ ರೀತಿಯಲ್ಲಿ ನೀರಿನ ವ್ಯವಸ್ಥೆಗೆ ತೊಂದರೆಯಾಗದಂತೆ ನೋಡಕೊಳ್ಳಬೇಕೆಂದು ಸೂಚಿಸಿದರು, ಈ ಸಂದರ್ಭದಲ್ಲಿ ಪಿ.ಡಿ.ಓಗಳ ಮಾಹಿತಿ ನೀಡಿ ಈಗಾಗಲೇ ಕೆ..ಬಿ.ಗೆ ಅರ್ಜಿ ಹಾಕಿದ್ದೇವೆ, ಅಲ್ಲದೆ ಪಂಚಾಯಿತಿಯ ಬಿಲ್‌ ಹಣದ ಬಗ್ಗೆಯೂ ಸಹ ಪೂರ್ಣ ಮಾಹಿತಿಯನ್ನು ಕೇಳಿದ್ದೇವೆ ಅವರು ನೀಡುತ್ತಿಲ್ಲ ಎಂದು ದೂರಿದರು.

ಈ ಸಂದರ್ಭದಲ್ಲಿ ಜೆಸ್ಕಾಂ ಅಧಿಕಾರಿ ಉತ್ತರಿಸಿ ದಿನಾಂಕ ನಿಗದಿ ಮಾಡಿದರೆ ಸ್ಥಳಕ್ಕೆ ಭೇಟಿ ನೀಡಿಯೇ ತಕ್ಷಣ ಪರಿಹರಿಸಲಾಗುವುದು ಆದ್ದರಿಂದ ದಿನಾಂಕ ನಿಗದಿ ಮಾಡಲು ಕೇಳಿಕೊಂಡರು. ಕುಡಿಯುವ ನೀರಿನ ಘಟಕಗಳ ಕುರಿತು ಚರ್ಚಿಸಿ ತಾಲೂಕಿನಲ್ಲಿಯ ಬಹಳಷ್ಟು ಘಟಕಗಳು ಕೆಡುತ್ತಿವೆ, ಅವುಗಳ ನಿರ್ವಹಣೆ ಬಗ್ಗೆಯೂ ಸಹ ದೂರುಗಳಿವೆ ಆದ್ದರಿಂದ ತಕ್ಷಣ ಅವುಗಳನ್ನು ಕೆ.ಅರ್‌.ಡಿ.ಸಿ.ಎಲ್‌ ನಿಂದ ನೇರವಾಗಿ ಗ್ರಾಮೀಣ ನೀರಾವರಿ ಇಲಾಖೆಗೆ ವಹಿಸಬೇಕು, ತಕ್ಷಣ ಈ ಕಾರ್ಯಮಾಡಿ ಈಗಾಗಲೆ 14 ಕೇಂದ್ರಗಳಲ್ಲಿ 5ನ್ನು ಮಾತ್ರ ಪಡೆದುಕೊಂಡಿರುವ ಬಗ್ಗೆ ತಿಳಿಸಿದಾಗ, ಪಿ.ಡಿ.ಓಗಳು ನಮಗೆ ಯಾವುದೇ ರೀತಿಯಾಗಿ ನಮ್ಮ ನಿರ್ವಹಣೆಗೆ ಪಡೆದುಕೊಂಡಿಲ್ಲ ಎಂದರು. ಒಟ್ಟಾರೆಯಾಗಿ ಕುಡಿಯುವ ನೀರು ನಿರ್ವಹಣೆ ಬಗ್ಗೆ ಪೂರ್ಣ ಚರ್ಚಿಸಿ ಸೂಕ್ತ ಕ್ರಮದ ಬಗ್ಗೆ ಸೂಚಿಸಿದರು. ತಾಲೂಕಿನ ಅಂಕಮನಾಳ್‌, ಸೂರವ್ವನಳ್ಳಿ, ತಿಮ್ಮಲಾಪುರ ಗ್ರಾಮಗಳಲ್ಲಿ ಶುದ್ಧ ಘಟಕಗಳು ನಿಂತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ಅಂಗನವಾಡಿ ಕೇಂದ್ರಗಳಿಗೆ ಸೂಪರ್‌ ವೈಜರ್‌ ಭೇಟಿ ನೀಡಿದ ಬಗ್ಗೆ ಸದಸ್ಯರುಗಳಿಗೆ ಮಾಹಿತಿ ಬೇಕು ಎಂದು ಉಪಾಧ್ಯಕ್ಷೆ ತಿರುಕಮ್ಮ ಅವರು ಪ್ರಶ್ನಿಸಿದರು, ಅಲ್ಲದೆ ಕೆಲವು ಕೇಂದ್ರಗಳಲ್ಲಿ 1 ಗಂಟೆ ನಂತರ ಯಾವುದೇ ಹುಡುಗರು ಕೇಂದ್ರಗಳಲ್ಲಿ ಇರುವುದಿಲ್ಲ ಎನ್ನುವ ದೂರುಗಳು ಇವೆ, ಸಮಯ ನೀಡಿ, ಅಲ್ಲದೆ ಕೆಲವು ಕೇಂದ್ರಗಳಿಗೆ ಬೋರ್ಡಗಳೂ ಸಹ ಇಲ್ಲವೆಂದರು ಅಧಿಕಾರಿಗಳಿಗೆ ತಿಳಿಸಿದರು. ಇದಕ್ಕೆ ಉತ್ತರಿಸಿದ ಅ ಕಾರಿಗಳು ಪ್ರತಿ ಅಂಗನವಾಡಿ ಕೇಂದ್ರಗಳಿಗೆ ಬೆಳಿಗ್ಗೆ 9.30ರಿಂದ ಸಂಜೆ 4 ಗಂಟೆವರೆಗೆ ಇರುತ್ತವೆ, ಸೂಪರ್‌ವೈಜರ್‌ ಭೇಟಿ ನೀಡಿದ ಸಂದರ್ಭದಲ್ಲಿ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು, ಅಲ್ಲದೆ ಬೋರ್ಡ ಹಾಕಿಸಲು ಕ್ರಮ ವಹಿಸುವ ಬಗ್ಗೆ ತಿಳಿಸಿದರು.

ಶಿಕ್ಷಣ ಇಲಾಖೆಯ ಮೇಲೆ ಶಿಕ್ಷಕರ ನಡೆ ಪಾಲಕರ ಕಡೆ ಎನ್ನುವ ವಿನೂತನ ಯೋಜನೆಯ ಮೂಲಕ ಎಸ್‌.ಎಸ್‌.ಎಲ್‌.ಸಿ. ಫಲಿತಾಂಶವನ್ನು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಇದರಿಂದ ಓದಿನ ಮನೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಹಾಗೂ ರಾತ್ರಿಯೂ ಸಹ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಾರ್ಯವನ್ನು ತಾಲೂಕಿನಾದ್ಯಂತ ಪ್ರಾರಂಭಿಸುತ್ತಿದ್ದೇವೆ, ಅಲ್ಲದೆ ಕೆಲ ಶಾಲೆಗಳಲ್ಲಿ ಚಾವಣಿ ಬೀಳುವ ಹಂತಕ್ಕೆ ಬಂದಿದ್ದವು ಅವುಗಳ ರಿಪೇರಿಗೆ ವರದಿ ಸಲ್ಲಿಸಲಾಗಿದೆ, ಅಲ್ಲದೆ ಪ್ರಾಥಮಿಕ ಶಾಲೆಯ ಗುಣಮಟ್ಟ ಹೆಚ್ಚಿಸಲು ಸಾಧನಾ ಕೈಪಿಡಿಯನ್ನು ಶಿಕ್ಷಕರಿಗೆ ನೀಡಿ ವಿವಿಧ ರೀತಿಯಲ್ಲಿ ಅಭಿವೃದ್ದಿ ಪಡಿಸಲಾಗುವುದು ಎಂದರು.

Advertisement

ಅಲ್ಲದೆ ತೋರಣಗಲ್ಲಿನ ಶಾಲೆಯಲ್ಲಿ ಶೌಚ್ಚಾಲಯ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದರು. ತಾಲೂಕಿನ ಬಂಡ್ರಿ, ಬೊಮ್ಮಘಟ್ಟ, ತಾರಾನಗರ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ವ್ಯಯಮಾಡಿದ ಕಟ್ಟಿದ ಶಿಕ್ಷಕರ ಕೊಠಡಿಗಳು ಅರ್ಧಕ್ಕೆ ನಿಂತ ಕಟ್ಟಡಗಳ ಬಗ್ಗೆ ಮಾಹಿತಿ ನೀಡಿ ಅದನ್ನು ತಕ್ಷಣ ಮುಗಿಸಲು ಮನವಿ ಮಾಡಿದರು.

ಕೃಷಿ, ಪಶುಸಂಗೋಪನೆ, ತೋಟಗಾರಿಕೆ, ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆಯ ಪ್ರಗತಿಯನ್ನು ಪರಿಶಿಲಿಸಿ ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸಿದರು. ಸಭೆಯಲ್ಲಿ ಅಧ್ಯಕ್ಷೆ ಫರ್ಜಾನ್‌ ಗೌಸ್‌ ಅಜಂ, ಉಪಾಧ್ಯಕ್ಷೆ ತಿರುಕಮ್ಮ, ಕಾರ್ಯನಿರ್ವಾಹಕ ಅಧಿ ಕಾರಿ ಜೆ.ಎಂ. ಅನ್ನದಾನಯ್ಯ, ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next