Advertisement

ಸ್ಟ್ರಾಂಗ್‌ ರೂಂಗಳಿಗೆ ಜಾಮರ್‌ ಅಳವಡಿಸಿ : ‘ಕೈ’ನಾಯಕ ಆಶೋಕ್‌ ಚವ್ಹಾಣ್‌ ಆಗ್ರಹ

09:24 AM May 10, 2019 | Hari Prasad |

ಮುಂಬಯಿ: ವಿದ್ಯನ್ಮಾನ ಮತಯಂತ್ರಗಳನ್ನು ಇರಿಸಿರುವ ಸ್ಟ್ರಾಂಗ್‌ ರೂಂಗಳಿಗೆ ನೆಟ್‌ ವರ್ಕ್‌ ಜಾಮರ್‌ ಗಳನ್ನು ಅಳವಡಿಸಬೇಕೆಂಬ ವಿಚಿತ್ರ ಬೇಡಿಕೆಯನ್ನು ಕಾಂಗ್ರೆಸ್‌ ನ ನಾಯಕರೊಬ್ಬರು ಇರಿಸಿದ್ದಾರೆ. ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಚವ್ಹಾಣ್‌ ಅವರೇ ಈ ರೀತಿಯ ವಿಚಿತ್ರ ಬೇಡಿಕೆಯನ್ನು ಚುನಾವಣಾ ಆಯೋಗದ ಮುಂದೆ ಇಟ್ಟಿರುವ ಕಾಂಗ್ರೆಸ್‌ ನಾಯಕರಾಗಿದ್ದಾರೆ.

Advertisement

ಮೇ 23 ಮತ ಎಣಿಕೆಯ ದಿನಾಂಕಕ್ಕೂ ಮುಂಚಿತವಾಗಿ ಮಹಾರಾಷ್ಟ್ರದ ಲೋಕಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಇರಿಸಿರುವ ಎಲ್ಲಾ ಸ್ಟ್ರಾಂಗ್‌ ರೂಂಗಳಿಗೆ ನೆಟ್ವರ್ಕ್‌ ಜಾಮರ್‌ ಗಳನ್ನು ಅಳವಡಿಸಿ ಮತ್ತು ಈ ಮೂಲಕ ಇವಿಎಂ ಹ್ಯಾಕರ್‌ ಗಳಿಗೆ ಇವಿಎಂಗಳನ್ನು ಟ್ಯಾಪ್‌ ಮಾಡಲು ಅವಕಾಶವೇ ಸಿಗುವುದಿಲ್ಲ ಎಂದು ಚವ್ಹಾಣ್‌ ಪ್ರತಿಪಾದಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಅಶೋಕ್‌ ಚವ್ಹಾಣ್‌ ಅವರು ಮಹಾರಾಷ್ಟ್ರದ ಮುಖ್ಯ ಚುನಾವಣಾ ಅಧಿಕಾರಿಯವರನ್ನು ಭೇಟಿ ಮಾಡಿ ಈ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಮನವಿಯನ್ನು ಸಲ್ಲಿಸಿದ್ದಾರೆ.

ಮೊಬೈಲ್‌ ಫೋನ್‌ ಟವರ್ ಮತ್ತು ವೈ-ಫೈ ನೆಟ್ವರ್ಕ್‌ಗಳನ್ನು ಬಳಸಿಕೊಂಡು ಹ್ಯಾಕರ್‌ ಗಳು ಇವಿಎಂಗಳನ್ನು ತಿರುಚುವ ಸಾಧ್ಯತೆ ಹೆಚ್ಚಾಗಿರುವ ಕಾರಣ ಚುನಾವಣಾ ಆಯೋಗ ತನ್ನ ಈ ಮನವಿಯನ್ನು ಬಲವಾಗಿ ಪರಿಗಣಿಸಬೇಕೆಂಬುದು ಈ ಕೈ ನಾಯಕನ ಆಗ್ರಹವಾಗಿದೆ.

ಮೇ 23ರಂದು ಮತ ಎಣಿಕೆಯ ಸಂದರ್ಭದಲ್ಲೂ ಈ ಜಾಮರ್‌ ಗಳು ಕಾರ್ಯನಿರ್ವಹಿಸಬೇಕು ಎಂದು ಚವ್ಹಾಣ್‌ ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next