Advertisement

ಇನ್‌ಸ್ಟಾಗ್ರಾಂನಲ್ಲಿ ವಯಸ್ಸು ಕಡ್ಡಾಯ! 13 ವರ್ಷ ಮೇಲ್ಪಟ್ಟವರಿಗೆ ಮಾತ್ರ ಖಾತೆ

10:01 AM Dec 06, 2019 | Team Udayavani |

ನವದೆಹಲಿ: ಜನಪ್ರಿಯ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ, ತನ್ನಲ್ಲಿ ಹೊಸದಾಗಿ ನೋಂದಾಯಿಸಲ್ಪಡುವ ಗ್ರಾಹಕರಿಗೆ ವಯಸ್ಸನ್ನು ನಮೂದಿಸುವುದನ್ನು ಕಡ್ಡಾಯಗೊಳಿಸಿದೆ. ಎಳೆಯ ವಯಸ್ಸಿನವರನ್ನು ಆನ್‌ಲೈನ್‌ ಪ್ರಪಂಚಕ್ಕೆ ಬಾರದಂತೆ ತಡೆಯಲು ಈ ಹೊಸ ಹೆಜ್ಜೆ ಇರಿಸಲಾಗಿದೆ.

Advertisement

ಕಂಪನಿಯ ಈ ಹೊಸ ನಿಯಮದಿಂದಾಗಿ, 13 ವರ್ಷಕ್ಕೂ ಮೇಲ್ಪಟ್ಟವರಿಗೆ ಮಾತ್ರ ಇನ್‌ಸ್ಟಾಗ್ರಾಂನಲ್ಲಿ ಖಾತೆ ತೆರೆಯಬಹುದಾಗಿದೆ. ಅಂದಹಾಗೆ, ವಯಸ್ಸನ್ನು ಕಡ್ಡಾಯವಾಗಿ ನಮೂದಿಸುವ ನಿಯಮ ತನ್ನಲ್ಲಿ ಈಗಾಗಲೇ ಖಾತೆಗಳನ್ನು ಹೊಂದಿರುವವರಿಗೆ ಅನ್ವಯಿಸುವುದಿಲ್ಲ ಎಂದು ಕಂಪನಿ ಹೇಳಿಕೊಂಡಿದೆ. ಇನ್‌ಸ್ಟಾಗ್ರಾಂನ ಮಾತೃಸಂಸ್ಥೆಯಾದ ಫೇಸ್‌ಬುಕ್‌, ಬಹು ಹಿಂದೆಯೇ ತನ್ನ ಗ್ರಾಹಕರಿಗೆ ವಯಸ್ಸು ನಮೂದಿಸುವುದನ್ನು ಕಡ್ಡಾಯವಾಗಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next