ಭೋಪಾಲ್: ಇನ್ಸ್ ಇನ್‌ಸ್ಟಾಗ್ರಾಮ್ ರೀಲ್ಸ್ ನಲ್ಲಿ ಖ್ಯಾತಿ ಪಡೆದಿರುವ ಭೂಪೇಂದ್ರ ಜೋಗಿ ಮೇಲೆ ಅಪರಿಚಿತ ವ್ಯಕ್ತಿಗಳು ಚಾಕುವಿನಿಂದ ದಾಳಿ ಮಾಡಿರುವ ಘಟನೆ ಮಂಗಳವಾರ(ಮೇ.7 ರಂದು) ನಡೆದಿರುವುದು ವರದಿಯಾಗಿದೆ.
ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಭೂಪೇಂದ್ರ ಜೋಗಿ ಅವರು ಭೋಪಾಲ್‌ನ ನ್ಯೂ ಮಾರ್ಕೆಟ್‌ನಲ್ಲಿರುವ ತಮ್ಮ ಬಟ್ಟೆ ಅಂಗಡಿಯನ್ನು ಮುಚ್ಚಿ ಮನೆಗೆ ಮರಳುತ್ತಿದ್ದರು. ಈ ವೇಳೆ ಇಬ್ಬರು ಮುಸುಕುಧಾರಿ ಯುವಕರು ಭೋಪೇಂದ್ರ ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಿ ಹಲ್ಲೆ ಮಾಡಿದ್ದಾರೆ. ಆ ಬಳಿಕ ಸ್ಥಳದಿಂದ ಪರಾರಿ ಆಗಿದ್ದಾರೆ ಎಂದು ವರದಿ ಆಗಿದೆ.
ದಾಳಿಯಿಂದ ಜೋಗಿ ಅವರ ಬೆನ್ನು ಮತ್ತು ಕೈಗಳಿಗೆ ತೀವರ ಸ್ವರೂಪದ ಗಾಯಗಳಾಗಿವೆ. ಮೊದಲು ಹಿಂದಿನಿಂದ ಹಲ್ಲೆ ಮಾಡಿದ್ದು, ಎರಡನೇ ದಾಳಿಯ ಸಮಯದಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳುವಾಗ, ಭೊಪೇಂದ್ರ ಅವರ ಕೈಗೆ ಗಂಭೀರವಾದ ಗಾಯಗಳಾಗಿವೆ. ಚಿಕಿತ್ಸೆಯ ಸಮಯದಲ್ಲಿ ಅವರಿಗೆ 40 ಹೊಲಿಗೆಗಳನ್ನು ಹಾಕಲಾಗಿದೆ ಎಂದು ವರದಿ ತಿಳಿಸಿದೆ.
‘ನಾಮ್ ಕ್ಯಾ ಹೈ? ಎನ್ನುವ ವಿಡಿಯೋದಿಂದ ಭೂಪೇಂದ್ರ ಖ್ಯಾತಿ ಆಗಿದ್ದಾರೆ. ಭೂಪೇಂದ್ರ ಜೋಗಿ ಎಂದು ಏನು ಪ್ರಶ್ನೆಯನ್ನು ಕೇಳಿದರು ಅದನ್ನೇ ಉತ್ತರಿಸುವ ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಹಾಗೂ ಮಿಮ್ ಗಳಾಗಿ ವೈರಲ್ ಆಗಿತ್ತು. ಅವರು ಖ್ಯಾತಿಯಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಹಿಂಬಾಲಕರನ್ನು ಹೊಂದಿದ್ದಾರೆ. ಖ್ಯಾತಿಯಾದ ಬಳಿಕ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿಯಾಗಿ ರೀಲ್ಸ್ ರೀ ಕ್ರಿಯೇಟ್ ಮಾಡಿದ್ದರು.
ಭೂಪೇಂದ್ರ ಅವರಿಗೆ ಯಾರೊಂದಿಗೂ ವೈಯಕ್ತಿಕ ದ್ವೇಷ ಅಥವಾ ವಿವಾದವಿರಲಿಲ್ಲ. ಅರೇರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 307 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಆದರೆ ಇದುವರೆಗೆ ಆರೋಪಿಗಳ ಬಗ್ಗೆ ಯಾವುದೇ ಸುಳಿವು ಇಲ್ಲ, ಪ್ರದೇಶದಲ್ಲಿ ಯಾವುದೇ ಕ್ಯಾಮೆರಾಗಳನ್ನು ಅಳವಡಿಸಲಾಗಿರಲಿಲ್ಲ.
ಚುನಾವಣಾ ನೀತಿ ಸಂಹಿತೆಯ ನಡುವೆಯೂ ಜನನಿಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿದೆ.