ನವದೆಹಲಿ: ಭಾರತದಲ್ಲಿ ಟಿಕ್‌ಟಾಕ್ ಬ್ಯಾನ್ ಆದ ನಂತರ ಇನ್‌ಸ್ಟಾಗ್ರಾಂ ಆ ಸ್ಥಾನ ತುಂಬಲಾರಂಭಿಸಿದೆ. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಇನ್‌ಸ್ಟಾಗ್ರಾಂ ಬಳಕೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಲಾರಂಭಿಸಿದ್ದು, ಅಕ್ಟೋಬರ್‌ನಲ್ಲಿ ವಿಶ್ವಾದ್ಯಂತ ಇನ್‌ಸ್ಟಾಗ್ರಾಂ ಡೌನ್‌ಲೋಡ್ ಸಂಖ್ಯೆಯಲ್ಲಿ ಭಾರತ ಬಹುಪಾಲನ್ನು ಪಡೆದುಕೊಂಡಿದೆ.
ವಿಶ್ವಾದ್ಯಂತ ಅಕ್ಟೋಬರ್‌ನಲ್ಲಿ ಟಿಕ್‌ಟಾಕ್ 5.7 ಕೋಟಿ ಮೊಬೈಲ್‌ಗಳಲ್ಲಿ ಡೌನ್‌ಲೋಡ್ ಆಗಿದ್ದು, ಅತಿ ಹೆಚ್ಚು ಡೌನ್‌ಲೋಡ್ ಆದ ನಾನ್ ಗೇಮಿಂಗ್ ಆ್ಯಪ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕಳೆದ 10 ತಿಂಗಳುಗಳಿಂದ ಟಿಕ್‌ಟಾಕ್ ಆ ಸ್ಥಾನ ಉಳಿಸಿಕೊಂಡು ಬಂದಿದೆ. 2ನೇ ಸ್ಥಾನದಲ್ಲಿರುವ ಇನ್‌ಸ್ಟಾಗ್ರಾಂ 5.6 ಕೋಟಿ ಮೊಬೈಲ್‌ಗಳಲ್ಲಿ ಡೌನ್‌ಲೋಡ್ ಆಗಿದೆ.
ಕಳೆದ ವರ್ಷದ ಅಕ್ಟೋಬರ್‌ಗೆ ಹೋಲಿಸಿದರೆ ಈ ವರ್ಷ ಇನ್‌ಸ್ಟಾ ಡೌನ್‌ಲೋಡ್ ಮಾಡಿಕೊಂಡವರ ಸಂಖ್ಯೆ ಶೇ. 31 ಏರಿಕೆಯಾಗಿದೆ. ವಿಶೇಷವೆಂದರೆ ಇನ್‌ಸ್ಟಾಗ್ರಾಂ ಅನ್ನು ಹೊಸತಾಗಿ ಡೌನ್‌ಲೋಡ್ ಮಾಡಿಕೊಂಡವರಲ್ಲಿ ಶೇ. 39 ಮಂದಿ ಭಾರತೀಯರು!
ಟಿಕ್‌ಟಾಕ್ ಡೌನ್‌ಲೋಡ್ ಮಾಡಿಕೊಂಡವರಲ್ಲಿ ಶೇ. 17 ಪಾಲು ಚೀನಾಕ್ಕಿದ್ದರೆ, ಶೇ. 11 ಪಾಲು ಅಮೆರಿಕದ್ದು. ಇನ್ನು ಅತಿ ಹೆಚ್ಚು ಡೌನ್‌ಲೋಡ್ ಆದ ನಾನ್ ಗೇಮಿಂಗ್ ಆ್ಯಪ್‌ಗ್ಳಲ್ಲಿ ಫೇಸ್‌ಬುಕ್, ವಾಟ್ಸ್‌ಆ್ಯಪ್ ಮತ್ತು ಟೆಲಿಗ್ರಾಂ ಆ್ಯಪ್‌ಗ್ಳು 3, 4 ಮತ್ತು 5ನೇ ಸ್ಥಾನ ಪಡೆದುಕೊಂಡಿವೆ.
ಇದನ್ನೂ ಓದಿ : ಭಾರತೀಯ ಮೂಲದವನ ಮರಣದಂಡನೆಗೆ ತಡೆ ನೀಡಿದ ಸಿಂಗಾಪುರ ನ್ಯಾಯಾಲಯ