Advertisement

Instagram Reelsಗೆ ಪ್ರತ್ಯೇಕ ಟ್ಯಾಬ್: ಬಳಕೆ ಹೇಗೆ ?

07:48 PM Sep 04, 2020 | Mithun PG |

ನವದೆಹಲಿ: ಇನ್ ಸ್ಟಾಗ್ರಾಂ ಕಳೆದ ತಿಂಗಳು ಟಿಕ್ ಟಾಕ್ ಗೆ ಪರ್ಯಾಯವಾಗಿ ರೀಲ್ಸ್ ಜಾರಿಗೆ ತಂದಿತ್ತು. ಆದರೇ ಇದಕ್ಕೆ ನಿರ್ದಿಷ್ಟ ಟ್ಯಾಬ್ ಗಳಿರಲಿಲ್ಲ. ಇದೀಗ ರೀಲ್ಟ್ ಟ್ಯಾಬ್ ಅಧಿಕೃತವಾಗಿ ಭಾರತದಲ್ಲಿ ಜಾರಿಗೆ ಬಂದಿದೆ.

Advertisement

ಈ ಮೊದಲು ಇನ್ ಸ್ಟಾಗ್ರಾಂನಲ್ಲಿ ಮೆನು, ಸರ್ಚ್, ಗ್ಯಾಲರಿ, ಲೈಕ್ಸ್ ಮತ್ತು ಪ್ರೊಪೈಲ್ ಈ ನಾಲ್ಕು ಟ್ಯಾಬ್ ಗಳಿದ್ದವು. ಇದೀಗ ಸರ್ಚ್(Explore) ಜಾಗಕ್ಕೆ ರೀಲ್ಸ್ ಟ್ಯಾಬ್ ಬಂದಿದೆ. ಸರ್ಚ್ ಆಯ್ಕೆಯನ್ನು ಮೇಲ್ಭಾಗದಲ್ಲಿನ ಮೆಸೇಜ್ ಆಯ್ಕೆಯ ಬಳಿಗೆ ಮೂವ್ ಮಾಡಲಾಗಿದೆ.  ಇಷ್ಟು ದಿನ ಎಕ್ಸ್ ಪ್ಲೋರ್ ನಲ್ಲಿದ್ದ ರೀಲ್ಸ್ ಟ್ಯಾಬ್ ಅನ್ನು ರಿಮೂವ್ ಮಾಡಲಾಗಿದೆ.

ಹೊಸ ರೀಲ್ಸ್ ಟ್ಯಾಬ್ ನಲ್ಲಿ ವಿಡಿಯೋ ಅಟೋಮ್ಯಾಟಿಕ್ ಆಗಿ ಪ್ಲೇ ಆಗಲಿವೆ. ಇದರ ಜೊತೆಗೆ ಕ್ಯಾಮಾರ ಐಕಾನ್ ಕೂಡ ಇರಲಿದ್ದು, ಬಳಕೆದಾರರು ಇದರ ಮೂಲಕವೇ ರೀಲ್ಸ್ ವಿಡಿಯೋ ಕ್ರಿಯೇಟ್ ಮಾಡಬಹುದು. ಇದೀಗ ಹೊಸ ರೀಲ್ಸ್ ಬಹುತೇಕ ಟಿಕ್ ಟಾಕ್ ನಷ್ಟೇ ಆಯ್ಕೆಗಳನ್ನು ಹೊಂದಿದೆ.

‘ಇನ್ ಸ್ಟಾಗ್ರಾಂ ಕಳೆದ ವರ್ಷ ಮೊದಲ ಬಾರಿಗೆ ಬ್ರೆಜಿಲ್ ನಲ್ಲಿ ಜಾರಿಗೆ ಬಂದಿತ್ತು. ತದನಂತರ ಭಾರತದಲ್ಲಿ 2020ರ ಜೂನ್ ನಲ್ಲಿ ಅಧಿಕೃತವಾಗಿ ಬಳಕೆದಾರರಿಗೆ ಲಭ್ಯವಾಗಿತ್ತು. ಶೀಘ್ರದಲ್ಲಿ ಇನ್ ಸ್ಟಾಗ್ರಾಂ ರೀಲ್ಸ್ ಅಮೇರಿಕಾ ಸೇರಿದಂತೆ 50 ರಾಷ್ಟ್ರಗಳಲ್ಲಿ ಬಳಕೆದಾರರಿಗೆ ದೊರಕಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next