Advertisement

‘ಪಕ್ಷಿಗಳ ಅಧ್ಯಯನ ಶೋಧನೆಗೆ ಪ್ರೇರಕ’

04:10 PM Jan 03, 2018 | |

ಅಡ್ಯನಡ್ಕ : ಪಕ್ಷಿಗಳ ಜೀವನ ವಿಧಾನ ಕುತೂಹಲಕರ ಹಾಗೂ ಆಸಕ್ತಿದಾಯಕ. ಇದರ ಅವಲೋಕನ, ಅಧ್ಯಯನ ಹೊಸ ಶೋಧನೆಗಳಿಗೆ ಪ್ರೇರಕವಾಗಿದೆ ಎಂದು ಹವ್ಯಾಸಿ ಪಕ್ಷಿ ವೀಕ್ಷಕ ಹಾಗೂ ಛಾಯಾಚಿತ್ರಗ್ರಾಹಕ ಅರವಿಂದ ಕುಡ್ಲ ಹೇಳಿದರು.

Advertisement

ಜನತಾ ಪ್ರೌಢಶಾಲೆಯ ಶ್ಯಾಮಲಾ ಇಕೋ ಕ್ಲಬ್‌ ವತಿಯಿಂದ ಜರಗಿದ ಪಕ್ಷಿಗಳ ನೋಟ, ಒಳನೋಟಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ‘ಪಕ್ಷಿ ನೋಟ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಬಳಿಕ ಪಕ್ಷಿಗಳ ನೂರಾರು ಚಿತ್ರಗಳನ್ನು ಸ್ಲೆ„ಡ್‌ ಶೋ ಮೂಲಕ ಪ್ರದರ್ಶಿಸಿದರು. ಹಿರಿಯ ಸಹ ಶಿಕ್ಷಕ ಎಸ್‌. ರಾಜಗೋಪಾಲ ಜೋಶಿ ಸ್ವಾಗತಿಸಿ, ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಆರ್‌. ನಾಯ್ಕ ವಂದಿಸಿದರು. ಶ್ಯಾಮಲಾ ಇಕೋ ಕ್ಲಬ್‌ ಮಾರ್ಗದರ್ಶಕ ಶಿಕ್ಷಕಿ ಕುಸುಮಾವತಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next