Advertisement

ಸಿದ್ಧವಾಗಲಿದೆ ಮುಂಬಯಿಯ ಮೊದಲ ಪಿಇಬಿ ಆಸ್ಪತ್ರೆ!

10:03 AM Apr 22, 2020 | Hari Prasad |

ಕೋವಿಡ್ 19 ವೈರಸ್ ಕಟ್ಟಿಹಾಕುವ ನಿಟ್ಟಿನಲ್ಲಿ ಸಮರೋಪಾದಿ ಕ್ರಮ ಕೈಗೊಂಡ ಚೀನಾ ಹತ್ತೇ ದಿನಗಳಲ್ಲಿ ಆಸ್ಪತ್ರೆ ನಿರ್ಮಿಸಿತ್ತು.

Advertisement

ಇದರಿಂದ ಪ್ರಭಾವಿತವಾಗಿರುವ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ), ಪ್ರೀ ಎಂಜಿನೀರ್ಡ್ ಬಿಲ್ಡಿಂಗ್‌ (ಪಿಇಬಿ) ತಂತ್ರಜ್ಞಾನದ ಮೂಲಕ ನಗರದ ಕಸ್ತೂರಬಾ ಆಸ್ಪತ್ರೆ ಆವರಣದಲ್ಲಿ ಮೂರು ಮಹಡಿಗಳ ಕೋವಿಡ್ ಐಸೊಲೇಶನ್‌ ಕಟ್ಟಡ ನಿರ್ಮಿಸಲು 90 ದಿನಗಳ ಗಡುವು ಹಾಕಿಕೊಂಡಿದೆ.

ಏನಿದು ಪಿಇಬಿ?
ಪಿಇಬಿ ಎಂದರೆ ಪೂರ್ವ ವಿನ್ಯಾಸಿತ ಕಟ್ಟಡ. ಮೊದಲು ಕಟ್ಟಡ ನಕ್ಷೆ ತಯಾರಿಸಿ, ಯಾವ ಗೋಡೆ ಎಷ್ಟು ಉದ್ದ, ಎತ್ತರ ಇರಬೇಕು, ಎಷ್ಟು ಕಿಟಿಕಿ ಮತ್ತು ಬಾಗಿಲುಗಳು ಬೇಕು ಎಂದು ನಿರ್ಧರಿಸಿ, ಫ್ಯಾಕ್ಟರಿಯೊಂದರಲ್ಲಿ ಅವುಗಳನ್ನು ಸಿದ್ಧಪಡಿಸಲಾಗುತ್ತದೆ. ಬಳಿಕ ಅವುಗಳನ್ನು ನಿರ್ಮಾಣ ಸ್ಥಳಕ್ಕೆ ತಂದು ನಟ್‌, ಬೋಲ್ಟ್ ಮೂಲಕ ಜೋಡಿಸಲಾಗುತ್ತದೆ.

ಆಸ್ಪತ್ರೆಯಲ್ಲಿ ಏನೆಲ್ಲ ಇರಲಿದೆ?
– ವಾರದೊಳಗೆ ಕಟ್ಟಡದ ವಿನ್ಯಾಸ . ಮೇ 1ರಿಂದ ನಿರ್ಮಾಣ ಶುರು.
– ಆಸ್ಪತ್ರೆಯು ಐಸಿಯು ಸೇರಿ 60 ಹಾಸಿಗೆಗಳನ್ನು ಹೊಂದಲಿದೆ.
– ವೈದ್ಯಕೀಯ ಪ್ರಯೋಗಾಲಯ ಮತ್ತು ಔಷಧಾಲಯ.
– ಸದ್ಯ ನಗರದ ಹೊಸ ಐಸೊಲೇಶನ್‌ ಕೇಂದ್ರವಾಗಲಿರುವ ಈ ಕಟ್ಟಡ, ಮುಂದೆ ಶಾಶ್ವತ ಆಸ್ಪತ್ರೆಯಾಗಲಿದೆ.

ಪಿಇಬಿ ಬಳಕೆ ಎಲ್ಲಿ ಹೆಚ್ಚು?
– ಪಿಇಬಿ ತಂತ್ರಜ್ಞಾನ ಹೆಚ್ಚು ಬಳಕೆಯಾಗುವುದು ಕೈಗಾರಿಕಾ ಕಟ್ಟಡ, ಮೆಟ್ರೋ ನಿಲ್ದಾಣ ಮತ್ತು ಗೋದಾಮುಗಳ ನಿರ್ಮಾಣದಲ್ಲಿ.
– ಇಲ್ಲಿ ಸ್ಟೈನ್‌ಲೆಸ್‌ ಸ್ಟೀಲ್‌ ಪ್ರಮುಖ ನಿರ್ಮಾಣ ಸಾಮಗ್ರಿ.
– ಈ ಕಟ್ಟಡಗಳು ಕನಿಷ್ಠ 30 ವರ್ಷ ಬಾಳಿಕೆ ಬರುತ್ತವೆ.

Advertisement

ಯೋಜನೆ ಸ್ಥಿತಿಗತಿ: ನಿರ್ಮಾಣ ಸ್ಥಳದಲ್ಲಿನ ಮಣ್ಣಿನ ಪರೀಕ್ಷೆ ಮುಗಿದಿದ್ದು, ವಿನ್ಯಾಸಕ್ಕಾಗಿ ಈಗಾಗಲೇ ಹರಾಜು ಕರೆಯಲಾಗಿದೆ. ಐಐಟಿ ಮತ್ತು ಬಿಎಂಸಿ ಎಂಜಿನಿಯರುಗಳು ವಿನ್ಯಾಸಗಳನ್ನು ಪರಿಶೀಲಿಸಲಿದ್ದಾರೆ.

ಕಟ್ಟಡ ನಿರ್ಮಾಣಕ್ಕೆ ವಿಧಿಸಿಕೊಂಡ ಗಡುವು: 90ದಿನ

ಹೊಸ ಆಸ್ಪತ್ರೆಯಲ್ಲಿ ಇರಲಿರುವ ವಾರ್ಡ್‌ಗಳು: 60

ಸಾಮಾನ್ಯ ವಾರ್ಡ್‌ ಗಳಲ್ಲಿನ ಹಾಸಿಗೆಗಳು: 47

Advertisement

Udayavani is now on Telegram. Click here to join our channel and stay updated with the latest news.

Next