Advertisement

ನೇತಾಜಿ ಸುಭಾಷ್‌ ಚಂದ್ರ ಭೋಸ್ ಪ್ರೇರಣಾತ್ಮಕ ನುಡಿಗಳು

04:13 PM Jan 23, 2022 | Team Udayavani |

ಭಾರತ ಸ್ವಾತಂತ್ರ್ಯ ಸಂಗ್ರಾಮದ ನಾಯಕರಲ್ಲಿ ಸುಭಾಷ್‌ ಚಂದ್ರ ಭೋಸ್ ಅವರು ಪ್ರಮುಖರು. ಇಂದು ನೇತಾಜಿ ಅವರ 125ನೇ ಜನ್ಮದಿನ. ನೇತಾಜಿಯವರ ಪ್ರೇರಣಾತ್ಮಕ ನುಡಿಗಳು ಇಲ್ಲಿದೆ.

Advertisement

*ನಮ್ಮ ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ವಾತಂತ್ರ್ಯವೊಂದೇ ಪರಿಹಾರ. ಗುಲಾಮಿತನದ ಸಂಕೋಲೆಯನ್ನು ಕಿತ್ತೆಸೆಯಲು ಒಂದೇ ಹೃದಯ, ಒಂದು ಪ್ರಾಣವಾಗಿ ಎಲ್ಲರೂ ಕಟಿಬದ್ಧರಾಗಬೇಕಾಗಿದೆ.

* ಸ್ವಾತಂತ್ರ್ಯವನ್ನು ಯಾರೂ ಕೊಡುವುದಿಲ್ಲ. ಅದನ್ನು ನಾವೇ ಪಡೆದುಕೊಳ್ಳಬೇಕು.

*ಒಬ್ಬ ವ್ಯಕ್ತಿ ತನ್ನ ಸಿದ್ಧಾಂತಕ್ಕಾಗಿ ಸಾವನ್ನಪ್ಪಬಹುದು. ಆದರೆ ಆತನ ಮರಣಾನಂತರವೂ ಉಳಿಯುವ ಆ ಸಿದ್ಧಾಂತ ಸಾವಿರ ಜನರಲ್ಲಿ ಅವತರಿಸುತ್ತದೆ.

*ಅನ್ಯಾಯವನ್ನು ಸಹಿಸಿಕೊಳ್ಳುವುದು ಮತ್ತು ತಪ್ಪುಗಳೊಂದಿಗೆ ರಾಜಿ ಮಾಡಿಕೊಳ್ಳುವುದು ನಮ್ಮ ದೊಡ್ಡ ಅಪರಾಧ ಎಂಬುದನ್ನು ನೆನಪಿಡಿ.

Advertisement

*ಇತಿಹಾಸದಲ್ಲಿ ಯಾವುದೇ ನೈಜ ಬದಲಾವಣೆ ಆಗಬೇಕಾದರೆ ಅದನ್ನು ಕೇವಲ ಚರ್ಚೆಗಳಿಂದ ಸಾಧಿಸಲಾಗದು.

*ಸ್ವೀಕರಿಸಬೇಕಾದ ಸವಾಲುಗಳು ಇಲ್ಲದೇ ಇದ್ದರೆ, ಹೋರಾಟಗಳು ಇಲ್ಲದೇ ಹೋದರೆ ಜೀವನ ಅರ್ಧದಷ್ಟು ಆಸಕ್ತಿಯನ್ನು ಕಳೆದುಕೊಳ್ಳುತ್ತದೆ.

*ಉತ್ಸಾಹವಿಲ್ಲದೆ ಯಾವ ಮಹತ್ತರ ಕೆಲಸವೂ ನಡೆಯದು.

*ಧೈರ್ಯಶಾಲಿ ಕೆಲಸಗಳು ಮತ್ತು ಉಜ್ವಲ ಸಾಧನೆ ಮಾಡಬೇಕಾದರೆ ನಮ್ಮಲ್ಲಿ ನಾವು ಪ್ರೇರಕ ಶಕ್ತಿಯನ್ನು ಹೊಂದಿರಬೇಕು.

*ತಾಯಿಯ ಪ್ರೀತಿ ಅತ್ಯಂತ ಆಳವಾದದ್ದು. ಏಕೆಂದರೆ ಅದರಲ್ಲಿ ಯಾವುದೇ ಸ್ವಾರ್ಥವಿಲ್ಲ ಮತ್ತು ನಾವು ಅದನ್ನು ಎಂದಿಗೂ ಹೋಲಿಸಲಾಗುವುದಿಲ್ಲ.

*ಭಾರತದ ಮೇಲೆ ಇಟ್ಟಿರುವ ನಂಬಿಕೆಯನ್ನು ಯಾವತ್ತೂ ಕಳೆದುಕೊಳ್ಳಬೇಡಿ. ಭಾರತವನ್ನು ಬಂಧನದಲ್ಲಿಡುವ ಯಾವ ಶಕ್ತಿಯೂ ಭೂಮಿಯಲ್ಲಿ ಇಲ್ಲ.

*ನಮ್ಮ ಸ್ವಾತಂತ್ರ್ಯವನ್ನು ನಮ್ಮ ರಕ್ತದಿಂದ ಪಡೆಯುವುದು ನಮ್ಮ ಕರ್ತವ್ಯ. ನಮ್ಮ ತ್ಯಾಗ ಮತ್ತು ಪರಿಶ್ರಮದಿಂದ ನಾವು ಗಳಿಸಿದ ಸ್ವಾತಂತ್ರ್ಯವನ್ನು ನಾವು ನಮ್ಮ ಸ್ವಂತ ಶಕ್ತಿಯಿಂದ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

*ನಮ್ಮ ಸ್ವಾತಂತ್ರ್ಯಕ್ಕಾಗಿ ನಮ್ಮ ಸ್ವಂತ ರಕ್ತವನ್ನು ಪಾವತಿಸುವುದು ನಮ್ಮ ಕರ್ತವ್ಯ. ನಮ್ಮ ತ್ಯಾಗ ಮತ್ತು ಪರಿಶ್ರಮದ ಮೂಲಕ ನಾವು ಗೆಲ್ಲುವ ಸ್ವಾತಂತ್ರ್ಯವನ್ನು ನಾವು ನಮ್ಮ ಸ್ವಂತ ಶಕ್ತಿಯಿಂದ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next