Advertisement

ಬುಲಂದ್ ಶಹರ್ ಹಿಂಸಾಚಾರ; ಪೊಲೀಸ್ ಅಧಿಕಾರಿ ಸಾವು ಆಕಸ್ಮಿಕ; ಸಿಎಂ ಯೋಗಿ

10:35 AM Dec 08, 2018 | Sharanya Alva |

ಲಕ್ನೋ: ಉತ್ತರಪ್ರದೇಶದ ಬುಲಂದ್ ಶಹರ್ ನಲ್ಲಿ ಇತ್ತೀಚೆಗೆ ನಡೆದ ಗಲಭೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಸುಭೋದ್ ಕುಮಾರ್ ಸಿಂಗ್ ಸೇರಿದಂತೆ ಇಬ್ಬರು ಸಾವನ್ನಪ್ಪಿರುವ ಪ್ರಕರಣ ಆಕಸ್ಮಿಕ ಘಟನೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

Advertisement

ಘಟನೆಗೆ ಯಾರು ಕಾರಣರಾಗಿದ್ದಾರೋ ಅವರನ್ನು ಶಿಕ್ಷಿಸಲಾಗುವುದು. ಆದರೆ ಇನ್ಸ್ ಪೆಕ್ಟರ್ ಹತ್ಯೆ ಗುಂಪು ಥಳಿತದಿಂದ ಸಂಭವಿಸಿಲ್ಲ ಎಂದು ಯೋಗಿ ಸ್ಪಷ್ಟನೆ ನೀಡಿದ್ದಾರೆ. ರಾಜಧಾನಿ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ್ದ ಯೋಗಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.

ಗುಂಡೇಟಿನಿಂದ ಸಾವನ್ನಪ್ಪಿರುವ ಇನ್ಸ್ ಪೆಕ್ಟರ್ ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಕುಟುಂಬದ ಸದಸ್ಯರನ್ನು ಲಕ್ನೋದ ಕಾಳಿದಾಸ್ ಮಾರ್ಗದಲ್ಲಿರುವ ನಿವಾಸದಲ್ಲಿ ಭೇಟಿಯಾದ ನಂತರ ಸಿಎಂ ಯೋಗಿ ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.

ಘಟನೆಯಲ್ಲಿ ಮೃತಪಟ್ಟಿರುವ ಇನ್ಸ್ ಪೆಕ್ಟರ್ ಪತ್ನಿಗೆ 40 ಲಕ್ಷ ರೂಪಾಯಿ, ಪೋಷಕರಿಗೆ 10 ಲಕ್ಷ ರೂಪಾಯಿ ಮತ್ತು ಇನ್ಸ್ ಪೆಕ್ಟರ್ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ಕೊಡುವುದಾಗಿ ಸೋಮವಾರ ಸಿಎಂ ಯೋಗಿ ಘೋಷಿಸಿದ್ದರು. ಇನ್ಸ್ ಪೆಕ್ಟರ್ ಸಿಂಗ್ 2015ರಲ್ಲಿ ಗುಂಪು ಥಳಿತದಿಂದ ಸಾವನ್ನಪ್ಪಿದ್ದ ಅಖ್ಲಾಕ್ ಸಾವಿನ ಪ್ರಕರಣದ ತನಿಖೆ ನಡೆಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next