Advertisement

Inspector: ಯುವಕನ ಅಕ್ರಮ ಸೆರೆಯಲ್ಲಿರಿಸಿದ್ದ ಇನ್‌ಸ್ಪೆಕ್ಟರ್‌ ಶಂಕರ್‌ ನಾಯಕ್‌

01:10 PM Dec 12, 2023 | Team Udayavani |

ಬೆಂಗಳೂರು: ರಿಕವರಿ ಹಣ ದುರುಪಯೋಗಪಡಿಸಿಕೊಂಡ ಆರೋಪ ಹೊತ್ತಿರುವ ಇನ್‌ಸ್ಪೆಕ್ಟರ್‌ ಶಂಕರ್‌ ನಾಯಕ್‌ ವಿರುದ್ಧ ಯುವಕನನ್ನು ಅಕ್ರಮವಾಗಿ ಬಂಧನದಲ್ಲಿರಿಸಿರುವ ಆರೋಪ ಕೇಳಿ ಬಂದಿದೆ.

Advertisement

ಪುತ್ರನನ್ನು ಸಿಸಿಬಿ ಇನ್‌ಸ್ಪೆಕ್ಟರ್‌ ಶಂಕರ ನಾಯಕ್‌ ಅಕ್ರಮ ಬಂಧನದಲ್ಲಿರಿಸಿದ್ದಾರೆ ಎಂದು ಆರೋಪಿಸಿ ಸಂಧ್ಯಾ ರಮೇಶ್‌ ಎಂಬುವರು ಪಶ್ಚಿಮ ವಿಭಾಗದ ಡಿಸಿಪಿಗೆ ದೂರು ನೀಡಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ಈ ಕುರಿತು ಕೆಂಗೇರಿ ಗೇಟ್‌ ಉಪ ವಿಭಾಗದ ಸಹಾಯಕ ಪೊಲೀಸ್‌ ಕಮೀಷನರ್‌ ಪೊಲೀಸ್‌ ಆಯುಕ್ತರು ಹಾಗೂ ಪಶ್ಚಿಮ ವಿಭಾಗದ ಉಪ ಪೊಲೀಸ್‌ ಆಯುಕ್ತರಿಗೆ ಏಪ್ರಿಲ್‌ ತಿಂಗಳಲ್ಲೇ ವಿವರಣೆ ನೀಡಿದ್ದಾರೆ. ಸಂಧ್ಯಾ ರಮೇಶ್‌ ಹಿರಿಯ ಅಧಿಕಾರಿಗಳಿಗೆ ನೀಡಿರುವ ದೂರು ಅರ್ಜಿಯಲ್ಲಿ ಇನ್‌ಸ್ಪೆಕ್ಟರ್‌ ಶಂಕರ್‌ ನಾಯಕ್‌ ಅರ್ಜಿದಾರರ ಮಗ ಸುಮಿತ್‌ನನ್ನು 2022ರ ಆ.19 ರಿಂದ 25ರವರೆಗೆ ಪೊಲೀಸ್‌ ಠಾಣೆಯಲ್ಲಿ ಅಕ್ರಮ ಬಂಧನದಲ್ಲಿಟ್ಟ ಬಗ್ಗೆ ಹಾಗೂ ಅರ್ಜಿದಾರರ ಮನೆಯಿಂದ ಸಿಪಿಯು, ಲ್ಯಾಪ್‌ಟಾಪ್‌, ಪೆನ್‌ಡ್ರೈವ್‌ ಅನ್ನು ತಂದು ಅಮಾನತುಪಡಿಸಿಕೊಂಡು ಹಿಂತಿರುಗಿಸದ ಬಗ್ಗೆ ದೂರು ಅರ್ಜಿಯನ್ನು ಸಲ್ಲಿಸಿರುತ್ತಾರೆ. ದೂರಿನ ವಿಚಾರಣೆಯ ಸಮಯದಲ್ಲಿ ಠಾಣೆಯ ಸಿಸಿಟಿವಿ ಫ‌ುಟೇಜ್‌ ಹಾಗೂ ಅಂದು ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇತರ ಪೊಲೀಸ್‌ ಸಿಬ್ಬಂದಿ ಹೇಳಿಕೆಗಳಿಂದ ದೃಢಪಟ್ಟಿರುತ್ತದೆ. ಆದ ಕಾರಣ ಶಂಕರ್‌ ನಾಯಕ್‌ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಸಮಗ್ರ ತನಿಖೆ ನಡೆಸುವುದು ಅವಶ್ಯಕವಾಗಿದೆ ಎಂದು ಈ ವಿಚಾರಣಾ ವರದಿಯಲ್ಲಿ ಉಲ್ಲೇಖೀಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next