Advertisement

ಪ್ರಾದೇಶಿಕ ಆಯುಕ್ತರಿಂದ ಕಾಮಗಾರಿ ಪರಿಶೀಲನೆ

01:02 PM Sep 25, 2022 | Team Udayavani |

ಚಿಂಚೋಳಿ: ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ಕೆಕೆಆರ್‌ ಡಿಬಿ ಯೋಜನೆ ಅಡಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಕೆಕೆಆರ್‌ಡಿಬಿ ಕಾರ್ಯದರ್ಶಿ ಹಾಗೂ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿ, ಗುಣಮಟ್ಟ ಕಾಪಾಡಿಕೊಳ್ಳುವಂತೆ ಲೋಕೋಪಯೋಗಿ ಇಲಾಖೆ ಎಇಇಗೆ ಸೂಚನೆ ನೀಡಿದರು.

Advertisement

ಸುಲೇಪೇಟ ಗ್ರಾಮದ ಅಂಬರೀಶ ಹಲಚೇರಿ ಮನೆಯಿಂದ ಗುರುನಂಜೇಶ್ವರ ಶಾಲೆ, ಮಹೇಶ ತಾರಾಪುರ ಹಳೆ ಅಂಗಡಿಯಿಂದ ಮಿಠಾಯಿ ಹೋಟೆಲ್‌, ಗುರುನಂಜೇಶ್ವರ ಶಾಲೆಯಿಂದ ಮೌಲಾ ಹೋಟೆಲ್‌, ಮಹಾಂತೇಶ ಪೆಟ್ರೋಲ್‌ ವರೆಗೆ ಕೆಕೆಆರ್‌ಡಿಬಿ ವತಿಯಿಂದ ಕೈಗೊಂಡಿರುವ ಒಳಚರಂಡಿ ಮತ್ತು ಸಿಮೆಂಟ್‌ ಕಾಮಗಾರಿಗಳು ಕಳಪೆಮಟ್ಟದಿಂದ ನಡೆಯುತ್ತಿವೆ ಎಂದು ಸುಲೇಪೇಟ ಗ್ರಾಮಸ್ಥರು ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರು ಎಲ್ಲ ಕಾಮಗಾರಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿದರು. ಕೆಕೆಆರ್‌ಡಿಬಿಯಿಂದ ನಡೆಯುವ ಎಲ್ಲ ಕೆಲಸಗಳು ಗುಣಮಟ್ಟದಿಂದ ನಡೆಯಬೇಕು. ಅನುದಾನ ದುರ್ಬಳಕೆಯಾದರೆ ಇಂಜಿನಿಯರ್‌ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಇಇ ಆನಂದ ಕಟ್ಟಿ ಮತ್ತು ಸಹಾಯಕ ಇಂಜಿನಿಯರ್‌ಗಳಿಗೆ ಎಚ್ಚರಿಕೆ ನೀಡಿದರು.

ತಹಶೀಲ್ದಾರ್‌ ಅಂಜುಮ ತಬಸುಮ, ಗ್ರೇಡ್‌ 2 ತಹಶೀಲ್ದಾರ್‌ ವೆಂಕಟೇಶ ದುಗ್ಗನ, ಎಇಇ ಆನಂದ ಕಟ್ಟಿ, ಪ್ರಮುಖರಾದ ದಯಾನಂದ ರೆಮ್ಮಣ್ಣಿ, ವಿಶ್ವನಾಥ ಸಜ್ಜನಶೆಟ್ಟಿ, ಸಿದ್ಧಪ್ಪ ಹುಮನಾಬಾದ, ಶರಣು ಪಡಶೆಟ್ಟಿ, ಮೌಲಾ ಹೋಟೆಲ್‌, ಮಹಮ್ಮದ ಅಲಿ, ನಾಗೇಶ ಹಾಲಳ್ಳಿ, ಸುರೇಶ ಬಂದಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next